ಕೊಪ್ಪಳ: ನಗರದ ಜಿಲ್ಲಾಸ್ಪತ್ರೆಯಲ್ಲೂ ಮಕ್ಕಳ ಮರಣ ಮೃದಂಗ ಶುರುವಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಜಿಲ್ಲೆಯಲ್ಲಿ ಸುಮಾರು 157 ಶಿಶುಗಳ ಮರಣವಾಗಿದೆ. ಈ ಪೈಕಿ 47 ಮಕ್ಕಳು ಜಿಲ್ಲಾಸ್ಪತ್ರೆಯಲ್ಲೇ ಮೃತಪಟ್ಟಿವೆ.
ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಸೇರಿದಂತೆ ವಿವಿಧ ಆಧುನಿಕ ವೈದ್ಯಕೀಯ ಉಪಕರಣ ಇಲ್ಲದಿರುವುದು ಶಿಶುಗಳ ಸಾವಿಗೆ ಕಾರಣ ಎನ್ನಲಾಗಿದೆ. ಇಷ್ಟು ಪ್ರಮಾಣದ ಮಕ್ಕಳು ಜಿಲ್ಲಾಸ್ಪತ್ರೆಯಲ್ಲಿ ಅಸುನೀಗುತ್ತಿದ್ದರೂ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ.
Advertisement
ವೈದ್ಯರ ಮಾಹಿತಿ ಪ್ರಕಾರ 35 ಮಕ್ಕಳಲ್ಲಿ 19 ನವಜಾತ ಶಿಶುಗಳು ಗರ್ಭಿಣಿಯರಿಗೆ ಅವಧಿಗೂ ಮುನ್ನ ಹೆರಿಗೆಯಾಗಿದ್ದರಿಂದ ಹಾಗೂ ಮಕ್ಕಳ ತೂಕ ಪ್ರಮಾಣ ಕಡಿಮೆ ಇರೋದ್ರಿಂದ ಮರಣ ಹೊಂದಿವೆ ಎಂದು ಆರ್‍ಸಿಎಚ್ ಅಧಿಕಾರಿ ಡಾ. ಅಲಕನಂದಾ ಹೇಳಿದ್ದಾರೆ.
Advertisement
ನವಜಾತ ಶಿಶುಗಳು ಹೆರಿಗೆ ಸಮಯದಲ್ಲಿ ಉಸಿರಾಟದ ತೊಂದರೆಯಿಂದ ಬಳಲಿ ಸಾವನ್ನಪ್ಪಿವೆ. ಮಕ್ಕಳು ಲೋ ಬಿಪಿ ಹಾಗೂ ಅಪೌಷ್ಟಿಕತೆ ತೊಂದರೆಯಿಂದ ಬಳಲಿ ಸಾವನ್ನಪ್ಪಿವೆ. ವೈದ್ಯರ ಪ್ರಕಾರ ಅವಧಿಗೂ ಮುನ್ನ ಹೆರಿಗೆಯಿಂದ ಅತೀ ಹೆಚ್ಚು ಮಕ್ಕಳ ಸಾವಾಗಿವೆ. ಆದರೆ ಬಾಲ್ಯ ವಿವಾಹ ಮತ್ತು ಮಹಿಳೆ 20 ವರ್ಷಕ್ಕೂ ಮೊದಲೇ ತಾಯಿಯಾಗುತ್ತಿರುವುದು ಶಿಶು ಮರಣಕ್ಕೆ ಕಾರಣ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದಾನರೆಡ್ಡಿ ಹೇಳಿದ್ದಾರೆ.