ಬೀಜಿಂಗ್: ಮಹಿಳೆಯರು ಸುಂದರವಾಗಿ ಹಾಗೂ ಯುವತಿಯಂತೆ ಕಾಣಲು ಪ್ಲಾಸ್ಟಿಕ್ ಸರ್ಜರಿ ಮಾಡಿಸುವುದು ಸಾಮಾನ್ಯ. ಆದರೆ ಚೀನಾದ ಬಾಲಕಿಯೊಬ್ಬಳು ಜನರು ಹಾಗೂ ಸಹಪಾಠಿಗಳು ಕೆಣಕಿದ್ದರಿಂದ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ.
ವಾಸ್ತವವಾಗಿ 15 ವರ್ಷದ ಜಿಯಾಫೆಂಗ್ ಪ್ರೊಜೇರಿಯಾದ ಕಾಯಿಲೆಗೆ ತುತ್ತಾಗಿದ್ದಳು. ಹೀಗಾಗಿ ಆಕೆ ಉಳಿದ ಎಲ್ಲಾ ಸಹಪಾಠಿಗಳಿಂತ ವಯಸ್ಕಳಂತೆ ಕಾಣುತ್ತಿದ್ದಳು. ಹೀಗಾಗಿ ಶಾಲೆಯಲ್ಲಿ ಮಕ್ಕಳು ಆಕೆಯನ್ನು ಕೀಟಲೆ ಮಾಡುತ್ತಿದ್ದರು.
Advertisement
Advertisement
ಪ್ರೊಜೇರಿಯಾ ಎಂಬುದು ಅಪರೂಪದ ಆನುವಂಶಿಕ ಕಾಯಿಲೆಯಾಗಿದ್ದು, ಇಂತಹ ಕಾಯಿಲೆ ಇರುವ ಮಗು ವಯಸ್ಸಾದವರಂತೆ ಕಾಣಲು ಆರಂಭಿಸುತ್ತದೆ. ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ‘ಪಾ’ ಸಿನಿಮಾ ಪ್ರೊಜೇರಿಯಾ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು ಆಧರಿಸಿದೆ.
Advertisement
ಪ್ರೊಜೇರಿಯಾ ಕಾಯಿಲೆಗೆ ತುತ್ತಾದ ಮಕ್ಕಳು 12 ವರ್ಷ ಬದುಕಿರುತ್ತಾರೆ. ಆದರೆ ಕೆಲವೊಮ್ಮೆ ಕೆಲವು ಮಕ್ಕಳು 20 ವರ್ಷದವರೆಗೆ ಬದುಕುಳಿಯುವ ಸಾಧ್ಯತೆ ಇದೆ. ಜಿಯಾಫೆಂಗ್‍ಗೆ ಪ್ರೊಜೇರಿಯಾ ಕಾಯಿಲೆಯು ಮುಖದ ಚರ್ಮದ ಮೇಲೆ ಮಾತ್ರ ಪರಿಣಾಮ ಬೀರಿತು. ಇದರಿಂದಾಗಿ ಆಕೆಯ ಮುಖದ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳಲಾರಂಭಿಸಿದವು. ಈ ಕಾರಣಕ್ಕಾಗಿ ಜಿಯಾಫೆಂಗ್, ತನ್ನ ಮುಖದಿಂದ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು.
Advertisement
ಒಂದು ವರ್ಷದ ನಂತರ ಪ್ರೊಜೇರಿಯಾದ ಪರಿಣಾಮವು ಜಿಯಾಫೆಂಗ್ ಮುಖದ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸಿತು. ವಯಸ್ಸಾದಂತೆ ಅವಳ ಮುಖದ ಸುಕ್ಕುಗಳಿಂದಾಗಿ ಅಜ್ಜಿಯಂತಾದಳು. ಅವಳನ್ನು ಶಾಲೆಯಲ್ಲಿ ಕಳುಹಿಸಲಾಯಿತು. ಆದರೆ ಅವಳೊಂದಿಗೆ ಕುಳಿತುಕೊಳ್ಳಲು ಯಾರೂ ಇಷ್ಟಪಡಲಿಲ್ಲ. ಅಂತಿಮವಾಗಿ ಮಗಳು ಶಾಲೆಯನ್ನು ಬಿಡಲು ನಿರ್ಧರಿಸಿದರು. ಈ ವಿಚಾರ ಅನೇಕ ಸಂಸ್ಥೆಗಳಿಗೆ ತಲುಪಿತು, ಅವರು ಮಗಳ ಶಸ್ತ್ರಚಿಕಿತ್ಸೆಗೆ ಹಣವನ್ನು ಸಂಗ್ರಹಿಸಿದರು ಎಂದು ಜಿಯಾಫೆಂಗ್ ತಂದೆ ತಿಳಿಸಿದ್ದಾರೆ.
ಜಿಯಾಫೆಂಗ್ ಕಳೆದ ತಿಂಗಳ ಕೊನೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕ್ಸಿಯಾಫೆಂಗ್‍ನ ವೈದ್ಯ ಕ್ಸಿ ಲಿಂಗ್‍ಜಿ ಅವರು ಶಸ್ತ್ರಚಿಕಿತ್ಸೆ ಮೂಲಕ ಜಿಯಾಫೆಂಗ್‍ಳ ಮುಖದಿಂದ ಏಳು ಸೆಂ.ಮೀ ಚರ್ಮವನ್ನು ತೆಗೆದುಹಾಕಿದ್ದಾರೆ. ಇದರೊಂದಿಗೆ ಅವಳ ಮೂಗು ಮತ್ತು ಬಾಯಿಯ ಸುತ್ತಲಿನ ಚರ್ಮವನ್ನು ಸಹ ಶಸ್ತ್ರಚಿಕಿತ್ಸೆಯಿಂದ ಸರಿಪಡಿಸಲಾಗಿದೆ ಎಂದು ಜಿಯಾಫೆಂಗ್ ತಂದೆ ಹೇಳಿದ್ದಾರೆ.
ಶಸ್ತ್ರಚಿಕಿತ್ಸೆಗೂ ಮುನ್ನ ಜನರು ಹಾಗೂ ಸಹಪಾಠಿಗಳು ನನ್ನನ್ನು ಚಿಕ್ಕಮ್ಮ ಮತ್ತು ಅಜ್ಜಿ ಎಂದು ಕರೆಯುತ್ತಿದ್ದರು. ನಾನು ಈ ಬಗ್ಗೆ ಮೌನವಾಗಿರುತ್ತಿದ್ದೆ. ಶಸ್ತ್ರಚಿಕಿತ್ಸೆ ಮಾಡಿದ ನಂತರ ನಾನು ಶಾಲೆಗೆ ಹೋದರೆ, ಜನರು ನನ್ನನ್ನು ಸುಂದರಿ ಎಂದು ಕರೆಯುವುದನ್ನು ನಾನು ಬಯಸುವುದಿಲ್ಲ. ಆದರೆ ಉಳಿದ ಹದಿಹರೆಯದವರಂತೆ ನನ್ನೊಂದಿಗೆ ನಡೆದುಕೊಂಡರೆ ಸಾಕು ಎಂದು ಬಾಲಕಿ ಜಿಯಾಫೆಂಗ್ ತಿಳಿಸಿದ್ದಾಳೆ.