ಕಾಬೂಲ್: ಅಫ್ಘಾನಿಸ್ತಾನದ (Afghanistan) ಪಕ್ಟಿಕಾ ಪ್ರಾಂತ್ಯದ ಬರ್ಮಾಲ್ ಜಿಲ್ಲೆಯ ಮೇಲೆ ಪಾಕಿಸ್ತಾನ (Pakistan) ಏರ್ ಸ್ಟ್ರೈಕ್ (Air Strike) ಮಾಡಿದೆ. ಈ ದಾಳಿಯಲ್ಲಿ 15 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಡಿಸೆಂಬರ್ 24 ರ ರಾತ್ರಿ ಲಮನ್ ಸೇರಿದಂತೆ ಏಳು ಗ್ರಾಮಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. ವರದಿಗಳ ಪ್ರಕಾರ ಬರ್ಮಾಲ್‌ನ ಮುರ್ಗ್ ಬಜಾರ್ ಗ್ರಾಮವನ್ನು ನಾಶಪಡಿಸಲಾಗಿದೆ.
ತಾಲಿಬಾನ್‌ನ (Taliban) ರಕ್ಷಣಾ ಸಚಿವಾಲಯವು ಬರ್ಮಾಲ್, ಪಕ್ಟಿಕಾ ಮೇಲಿನ ವೈಮಾನಿಕ ದಾಳಿಯ ನಂತರ ಪ್ರತೀಕಾರ ತೀರಿಸುವುದಾಗಿ ಪ್ರತಿಜ್ಞೆ ಮಾಡಿದೆ. ಇದನ್ನೂ ಓದಿ: ಸಿರಿಯಾದಲ್ಲಿ ಬಿಕ್ಕಟ್ಟು – ಅಲ್ಲೋಲ ಕಲ್ಲೋಲ ಎಬ್ಬಿಸಿದೆ ಆಕೆಯ ಒಂದು ವೀಡಿಯೋ; ದೊಡ್ಡಣ್ಣನ ಕುತಂತ್ರದಿಂದ ಹೀಗಾಯ್ತಾ?
ಪಾಕಿಸ್ತಾನದ ಅಧಿಕಾರಿಗಳು ವೈಮಾನಿಕ ದಾಳಿಯನ್ನು ಅಧಿಕೃತವಾಗಿ ದೃಢೀಕರಿಸದಿದ್ದರೂ ಸೇನೆಗೆ ನಿಕಟವಾಗಿರುವ ಭದ್ರತಾ ಮೂಲಗಳು ಗಡಿಯ ಸಮೀಪವಿರುವ ತಾಲಿಬಾನ್ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿವೆ.
ತಮ್ಮ ದೇಶದ ಒಳಗಡೆ ನಡೆಯುತ್ತಿರುವ ಉಗ್ರ ಕೃತ್ಯಗಳಿಗೆ ಅಫ್ಘಾನಿಸ್ತಾನ ಕಾರಣ ಎನ್ನುವುದು ಪಾಕ್ ಆರೋಪ. ಪಾಕಿಸ್ತಾನಿ ತಾಲಿಬಾನ್, ಅಥವಾ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಇತ್ತೀಚಿನ ತಿಂಗಳುಗಳಲ್ಲಿ ಪಾಕಿಸ್ತಾನಿ ಪಡೆಗಳ ಮೇಲೆ ತನ್ನ ದಾಳಿಯನ್ನು ಹೆಚ್ಚಿಸಿದ. ಅಫ್ಘಾನ್‌ನಲ್ಲಿರುವ ತಾಲಿಬಾನ್ ಸರ್ಕಾರ ಈ ಉಗ್ರರಿಗೆ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ದೂರಿದೆ.