ಕಾರವಾರ: ಬೊಲೆರೋ ವಾಹನ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟು 15 ಜನರು ಗಾಯಗೊಂಡ ಘಟನೆ ಉತ್ತರ ಕನ್ನಡದ ಶಿರಸಿಯ ಬನವಾಸಿ ಬಳಿ ನಡೆದಿದೆ.
ಈರಣ್ಣ ಹೊಸಗಟ್ಟಿ ಕುರಸಾಪುರ ಶಿಗ್ಗಾಂವ (25) ಮೃತ ದುರ್ದೈವಿ. ಘಟನೆಯಲ್ಲಿ ಸೋಮಣ್ಣವಡ್ಡರ್, ಸುದೀಪ್, ಸಂತೋಷ್ ಜವಳಗಿ, ತುಕಾರಾಮ ತಳಹಳ್ಳಿ, ಜ್ಯೋತ್ಯಪ್ಪ, ವಿಶ್ವನಾಥ್, ವಾಲ್ಮೀಕಿ, ಈರಣ್ಣ, ಪರಶುರಾಮ ಹಾಗೂ ಗಣೇಶ್ ತೀವ್ರವಾಗಿ ಗಾಯಗೊಂಡಿದ್ದಾರೆ.
ಇವರು ಶಿಗ್ಗಾಂವ ತಾಲೂಕಿನ ಕುರಸಾಪುರದವರಾಗಿದ್ದು, ದಿನಗೂಲಿ ಕಾರ್ಮಿಕರಾಗಿದ್ದಾರೆ. ವಿದ್ಯುತ್ ತಂತಿ ಎಳೆಯುವ ಕೆಲಸದ ನಿಮಿತ್ತ ಬರುವಾಗ ಚಾಲಕನ ಅಜಾಗರೂಕತೆ ಮತ್ತು ಅತಿ ವೇಗದಿಂದ ವಾಹನ ಪಲ್ಟಿಯಾಗಿದೆ ಎನ್ನಲಾಗುತ್ತಿದೆ. ವಾಹನ ಪಲ್ಟಿಯಾಗಿದ್ದರಿಂದ ಓರ್ವ ಸ್ಥಳದಲ್ಲಿಯೇ ಮೃತಪಟ್ಟು 15 ಮಂದಿ ಗಾಯಗೊಂಡಿದ್ದಾರೆ.
ಈ ಬಗ್ಗೆ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.