ಗಾಂಧಿನಗರ: ಸುಮಾರು 15-20 ಹುಡುಗರು ಉದ್ದೇಶಪೂರ್ವಕವಾಗಿ ಮೋರ್ಬಿ ತೂಗುಸೇತುವೆ (Morbi Bridge) ಅಲುಗಾಡಿಸಿದ್ದರಿಂದ ಅವಘಡ ಸಂಭವಿಸಿದೆ ಎಂದು ಘಟನೆಯಲ್ಲಿ ಬದುಕುಳಿದವರು ಆರೋಪಿಸಿದ್ದಾರೆ.
ಭಾನುವಾರ ಸಂಜೆ 6:30ರ ಸುಮಾರಿಗೆ ಸೇತುವೆ ಕುಸಿದು 132 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೋರ್ಬಿ ಸೇತುವೆ ಕುಸಿತದಿಂದ ಗಾಯಗೊಂಡು ಬದುಕುಳಿದವರೆಲ್ಲರನ್ನು ಜಿಎಂಇಆರ್‌ಎಸ್ (GMERS) ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಹೇಗಾಯ್ತು ಎಂಬುದರ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಅಜ್ಜಿಯ ಅಖಂಡ ಭಾರತದ ಕನಸನ್ನು ಈಡೇರಿಸುತ್ತೇನೆ: ರಾಹುಲ್ ಗಾಂಧಿ ಭಾವನಾತ್ಮಕ ಪೋಸ್ಟ್
Advertisement
Advertisement
ಸುಮಾರು 15-20 ಕಿಡಿಗೇಡಿಗಳು ಸೇತುವೆಯ ಹಗ್ಗಗಳನ್ನು ಉದ್ದೇಶಪೂರ್ವಕವಾಗಿ ಅಲುಗಾಡಿಸುತ್ತಿದ್ದರು. ಹೀಗಾಗಿ ಸೇತುವೆ ಕುಸಿಯುವ ಮುನ್ನ ಮೂರು ಬಾರಿ ಜೋರಾಗಿ ಶಬ್ದ ಕೇಳಿ ಬಂತು. ನಾನೂ ಕೆಳಗೆ ಬಿದ್ದೆ. ಆದರೆ ನಾನು ಬೀಳುವಾಗ ಸೇತುವೆಯ ಸುತ್ತಲೂ ಇದ್ದ ರೋಪ್ ಹಿಡಿದಿದ್ದೆ. ನನ್ನ ಜೊತೆಯಲ್ಲಿ ನನ್ನ ಸ್ನೇಹಿತನೂ ಇದ್ದ. ಸುಮಾರು ಏಳು ಜನ ರೋಪ್ ಅನ್ನು ಹಿಡಿದು ಮೇಲಕ್ಕೆ ಏರಲು ಆರಂಭಿಸಿದರು. ಘಟನೆ ವೇಳೆ ನನ್ನ ಕಾಲು ಮತ್ತು ಬೆನ್ನಿಗೆ ಗಾಯಗಳಾಗಿದ್ದು, ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಅಶ್ವಿನ್ ಮೆಹ್ರಾ ಎಂಬವರು ಹೇಳಿದ್ದಾರೆ.
Advertisement
#WATCH | An injured survivor in the #MorbiBridgeCollapse recounts the harrowing moment when the suspension bridge collapsed and how he saved himself pic.twitter.com/MWX3HpwqmT
— ANI (@ANI) October 31, 2022
Advertisement
ಅಹಮದಾಬಾದ್ (Ahlahabad) ನಿವಾಸಿ ವಿಜಯ್ ಗೋಸ್ವಾಮಿ ಮತ್ತು ಅವರ ಕುಟುಂಬಸ್ಥರು ಸಹ ತೂಗು ಸೇತುವೆಗೆ ಭೇಟಿ ನೀಡಿದ್ದರು. ಆದರೆ ಕೆಲವು ಯುವಕರು ಉದ್ದೇಶಪೂರ್ವಕವಾಗಿ ಸೇತುವೆಯನ್ನು ಅಲುಗಾಡಿಸಿದ್ದರಿಂದ ಅರ್ಧದಾರಿಯಲ್ಲೇ ಹಿಂತಿರುಗಿದರು. ಬ್ರಿಟಿಷರ ಕಾಲದ ಈ ಸೇತುವೆಯನ್ನು ನವೀಕರಣಗೊಳಿಸಿ ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಸಾರ್ವಜನಿಕರಿಗಾಗಿ ಪುನಃ ತೆರೆಯಲಾಗಿತ್ತು. ಇದನ್ನೂ ಓದಿ: ಪೊಲೀಸರೇ ಪ್ಲೀಸ್ ನಮ್ಮನ್ನು ಕಳ್ಳರಿಂದ ಕಾಪಾಡಿ – ಕುರಿಗಳಿಂದ ವಿನೂತನ ಪ್ರತಿಭಟನೆ
ಖಾಸಗಿ ಕಂಪನಿಯೊಂದು ಸೇತುವೆ ದುರಸ್ತಿ ಕಾರ್ಯ ನಡೆಸಿತ್ತು. ನವೀಕರಣ ಕಾಮಗಾರಿ ಮುಗಿದ ಬಳಿಕ ಸಾರ್ವಜನಿಕರು ಓಡಾಟಕ್ಕೆ ತೆರಯಲಾಗಿತ್ತು. ಆದರೆ ಸ್ಥಳೀಯ ಪುರಸಭೆ ನವೀಕರಣ ಕಾರ್ಯದ ನಂತರ ಯಾವುದೇ ಫಿಟ್‍ನೆಸ್ ಪ್ರಮಾಣಪತ್ರವನ್ನು ನೀಡಿರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.