ChikkaballapurDistrictsKarnatakaLatestMain Post

ಪೊಲೀಸರೇ ಪ್ಲೀಸ್ ನಮ್ಮನ್ನು ಕಳ್ಳರಿಂದ ಕಾಪಾಡಿ – ಕುರಿಗಳಿಂದ ವಿನೂತನ ಪ್ರತಿಭಟನೆ

ಚಿಕ್ಕಬಳ್ಳಾಪುರ: ಪೊಲೀಸರೇ (Police) ನಮ್ಮನ್ನು ಕಳ್ಳರಿಂದ ಕಾಪಾಡಿ, ನಮ್ಮ ಸ್ನೇಹಿತರನ್ನು ಕಳವು ಮಾಡಿದವರನ್ನು ಜೈಲಿಗೆ ಹಾಕಿ, ಹಿಂಗಂತ ಸ್ವತಃ ಕುರಿಗಳೇ (Sheep) ತಮ್ಮ ಕತ್ತಿನಲ್ಲಿ ಪ್ಲೇಕಾರ್ಡ್ ಧರಿಸಿ ಪ್ರತಿಭಟನೆ (Protest) ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕು ಕಚೇರಿ ಬಳಿ ನಡೆಯಿತು.

ಕಳೆದ ಒಂದು ತಿಂಗಳಿಂದ ನಿತ್ಯ ನಿರಂತರ ಎಂಬಂತೆ ತಾಲೂಕಿನ ಹಲವು ಕಡೆ ಕುರಿಕಳ್ಳರ ಕಾಟ ಹೆಚ್ಚಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ, ಸೊಣ್ಣಮಾರನಹಳ್ಳಿ, ಕೋಡಿಹಳ್ಳಿ, ರಾಜಘಟ್ಟ ಸುತ್ತಮುತ್ತಲ ಗ್ರಾಮಗಳಲ್ಲಿ ರಾತ್ರೋ ರಾತ್ರಿ ಕುರಿಗಳನ್ನು ಕಳವು ಮಾಡಿಕೊಂಡು ಹೋಗುತ್ತಿದ್ದಾರೆ. ಮಧ್ಯರಾತ್ರಿ ಗ್ರಾಮಗಳಿಗೆ ನುಗ್ಗೋ ಕುರಿ ಕಳ್ಳರು ಕುರಿ ಮಾಲೀಕರ ಮನೆಗೆ ಹೊರಗಡೆಯಿಂದ ಬೀಗ ಜಡಿದು ಕುರಿ ದೊಡ್ಡಿಗಳಲ್ಲಿರುವ ನೂರಾರು ಕುರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5 ಕಡೆ ಈ ರೀತಿಯ ಪ್ರಕರಣಗಳು ನಡೆದಿದ್ದು, ಈ ಸಂಬಂಧ ದೂರು ದಾಖಲಿಸಲಾಗಿದೆ. ಪ್ರತಿ ದಿನ ಕುರಿ ಕಳವು ಪ್ರಕರಣಗಳು ಒಂದಲ್ಲ ಒಂದು ಗ್ರಾಮದಲ್ಲಿ ಸಂಭವಿಸುತ್ತಿರೋದ್ರಿಂದ ಕುರಿ ಸಾಕಾಣಿಕೆದಾರರು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಇದನ್ನೂ ಓದಿ: ನಾನು ಬಹಳಷ್ಟು ಕಷ್ಟ ಅನುಭವಿಸಿದೆ – ದೇವಾಲಯದ ವಸ್ತು ವಾಪಸ್ ತಂದಿಟ್ಟ ಕಳ್ಳ

ಕುರಿ ಕಳ್ಳರಿಂದ ಕುರಿಗಳನ್ನು ರಕ್ಷಣೆ ಮಾಡಿಕೊಳ್ಳಲು ಇಡೀ ರಾತ್ರಿ ರೈತರು (Farmers) ಜಾಗರಣೆ ಇರುವಂತಾಗಿದೆ. ನೆಮ್ಮದಿಯ ನಿದ್ದೆ ಮಾಡಲಾಗದೆ ಕುರಿ ಮಾಲೀಕರು ಹೈರಾಣಾಗಿದ್ದಾರೆ. ಹಲವು ಮಂದಿ ಅದರಲ್ಲೂ ಬಡವರೇ ಕುರಿ ಸಾಕಾಣಿಕೆ ಮಾಡೋದು ಜಾಸ್ತಿ ಅಂತಹವರ ಮೇಲೆಯೇ ಕಳ್ಳರು ದಾಳಿ ಮಾಡಿ ಕೇವಲ ಒಂದು ಎರಡು ಅಲ್ಲ, ಸಿಕ್ಕ ಸಿಕ್ಕಷ್ಟು ಅನ್ನೋ ಹಾಗೆ ಒಂದೊಂದು ಕಡೆ 20, 25, 30 ಕುರಿಗಳನ್ನು ಒಮ್ಮೆಲೆ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಇದನ್ನೂ ಓದಿ: ನಾಯಿಯ ಮೇಲೆ ಅತ್ಯಾಚಾರ – ಫುಡ್ ಡೆಲಿವರಿ ಬಾಯ್ ಅರೆಸ್ಟ್

ಹೀಗಾಗಿ ಕಳವಾದ ಕುರಿ ಮಾಲೀಕರು ಸಂಕಷ್ಟಕ್ಕೆ ಕನ್ನಡಪರ ಸಂಘಟನೆಗಳು ಸ್ಪಂದಿಸಿದ್ದು, ಕರವೇ ಮುಖಂಡ ರಾಜಘಟ್ಟ ರವಿ ನೇತೃತ್ವದಲ್ಲಿ ಕುರಿ ಮಾಲೀಕರು ತಮ್ಮ ಕುರಿಗಳ ಕುತ್ತಿಗೆಗೆ ಪ್ಲೇಕಾರ್ಡ್ ಹಾಕಿ ತಾಲೂಕು ಕಚೇರಿ ಎದುರು ಆಗಮಿಸಿ ಪ್ರತಿಭಟನೆ ನಡೆಸಿದರು. ತಹಶೀಲ್ದಾರ್ ಮೋಹನ್ ಕುಮಾರಿಗೆ ಕುರಿ ಕಳ್ಳರ ಕಾಟ ತಪ್ಪಿಸುವಂತೆ ಮನವಿ ಪತ್ರ ಸಲ್ಲಿಸಿದರು. ಇನ್ನೂ ಕುರಿ ಮಾಲೀಕರು ಮಾತನಾಡಿ ರಾತ್ರೋ ರಾತ್ರಿ ಸದ್ದಿಲ್ಲದೆ ಮನೆಗೆ ಬೀಗ ಜಡಿದು ದೊಡ್ಡ ದೊಡ್ಡ ಕುರಿಗಳನ್ನೇ ಟಾರ್ಗೆಟ್ ಮಾಡಿ ಕಳವು ಮಾಡಿಕೊಂಡು ಹೋಗಿದ್ದಾರೆ. ಹಾಲು ಕುಡಿಯೋ ಕುರಿ ಮರಿ ಬಿಟ್ಟು ಅದರ ತಾಯಿಯನ್ನು ಕದ್ದೊಯ್ದಿದ್ದಾರೆ, ಇದ್ರಿಂದ ನಮಗೆ ದಿಕ್ಕೇ ತೋಚದಂತಾಗಿದೆ ಎಂದು ಅಳಲು ಅಸಹಾಯಕತೆ ತೋಡಿಕೊಂಡರು. ಇನ್ನೂ ಕರವೇ ಮುಖಂಡ ರಾಜಘಟ್ಟ ರವಿ ಮಾತನಾಡಿ, ಕುರಿಗಳು ಕಳವು ಪ್ರಕರಣ ವಿಶೇಷ ಪ್ರಕರಣ ಅಂತ ಪರಿಗಣಿಸಿ ಸರ್ಕಾರ ಯಾವುದಾದರೂ ಯೋಜನೆ ಮೂಲಕ ಪರಹಾರ ಕೊಡಬೇಕು. ಬಡವರ ಪರ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button