ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಕುಂದರಗಿ ಗ್ರಾಮದ ಬಾಲಕಿಯೋರ್ವಳು 14ನೇ ವಯಸ್ಸಿಗೆ ಪೈಲಟ್ ಆಗಿ ಹೊರ ಹೊಮ್ಮುತ್ತಿದ್ದಾಳೆ.
ಆಸ್ಟ್ರೇಲಿಯಾದ ಆಡಿಲೇಡ್ ನಲ್ಲಿ ನೆಲೆಸಿರುವ 9ನೇ ತರಗತಿ ವಿದ್ಯಾರ್ಥಿನಿ ಪ್ರೀತಿಕಾ ಗಾಣಿಗೇರ ಚಿಕ್ಕ ವಯಸ್ಸಿನಲ್ಲಿಯೇ ಪೈಲಟ್ ಆಗುತ್ತಿದ್ದಾಳೆ. ಎಂಟನೇ ವಯಸ್ಸಿನಲ್ಲೇ ಏರ್ ಲೀಗ್ ಎಂಬ ಪ್ರೈಮರಿ ಸ್ಕೂಲ್ ಆಪ್ ಏವಿಯೇಷನ್ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದು, ಸದ್ಯ ವಿಮಾನಗಳನ್ನು ಹಾರಾಡಿಸುವ ಸಾಮರ್ಥ್ಯ ಹೊಂದಿದ್ದಾಳೆ.
ಪ್ರೀತಿಕಾ ಪೈಲಟ್ ಆಗುವ ಜೊತೆಗೆ ಬ್ರೈಟನ್ ಸೆಕೆಂಡರಿ ಸ್ಕೂಲ್‍ನಲ್ಲಿ 9ನೇ ತರಗತಿಯಲ್ಲಿಯೂ ಓದುತ್ತಿದ್ದಾಳೆ. ಇನ್ನೇನು ಎರಡು ವರ್ಷದಲ್ಲಿ ಅಧಿಕೃತವಾಗಿ ಪೈಲಟ್ ಲೈಸೆನ್ಸ್ ಹೊಂದಲಿದ್ದಾಳೆ. ಆಸ್ಟ್ರೇಲಿಯಾ ಸರ್ಕಾರದಿಂದ ಸ್ಕಾಲರ್ ಶಿಪ್ ಪಡೆದು ತರಬೇತಿ ಪಡೆಯುತ್ತಿರುವ ಪ್ರೀತಿಕಾ ಅತೀ ಚಿಕ್ಕ ವಯಸ್ಸಿನಲ್ಲಿ ಪೈಲಟ್ ಆಗಿ ಆಕಾಶದಲ್ಲಿ ಹಾರಾಡಲಿದ್ದಾರೆ.
ಪ್ರೀತಿಕಾ ತಂದೆ- ತಾಯಿ ಆಸ್ಟ್ರೇಲಿಯಾದ ಆಡಿಲೇಡ್ ನಲ್ಲಿ ಕೆಲಸ ಮಾಡುತ್ತಿದ್ದು, ಪ್ರೀತಿಕಾ ಆಡಿಲೇಡ್ ನಲ್ಲೇ ಹುಟ್ಟಿ ಬೆಳೆದಿದ್ದಾಳೆ. ಮುಂದಿನ ದಿನಗಳಲ್ಲಿ ಭಾರತ ದೇಶದ ಹೆಣ್ಣು ಮಕ್ಕಳಿಗಾಗಿ ಪೈಲಟ್ ತರಬೇತಿ ಶಾಲೆ ಆರಂಭಿಸಬೇಕು, ನಾಸಾದಲ್ಲಿ ಎರೋನಾಟಿಕಲ್ ವಿಭಾಗದಲ್ಲಿ ಕೆಲಸ ಮಾಡುವ ಕನಸು ಕಟ್ಟಿಕೊಂಡಿದ್ದಾಳೆ.
ಸದ್ಯ ತಾಯಿಯ ತವರು ಮನೆ ಆಗಿರುವ ಬಾಗಲಕೋಟೆ ನಗರಕ್ಕೆ ಪ್ರೀತಿಕಾ ತನ್ನ ತಾಯಿ ಸಮೇತ ಭೇಟಿ ನೀಡಿದ್ದಾಳೆ. ಇತ್ತ ಪ್ರೀತಿಕಾ ಸಾಹಸ ಮತ್ತು ಸಾಧನೆ ಕುಟುಂಬಸ್ಥರಿಗೆ ಇನ್ನಿಲ್ಲದ ಹರ್ಷ ಮೂಡಿಸಿದೆ.
https://www.youtube.com/watch?v=2kTyI3xPQ0g&feature=youtu.be
https://www.youtube.com/watch?v=tYB1ZcC1f2s&feature=youtu.be
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv