ಡಮಾಸ್ಕಸ್: ಟರ್ಕಿ ಬೆಂಬಲಿತ ಹೋರಾಟಗಾರರು ಉತ್ತರ ಸಿರಿಯಾದ ಜನನಿಬಿಡ ಮಾರುಕಟ್ಟೆಯ ಮೇಲೆ ನಡೆಸಿದ ಮಿಶೆಲ್ ದಾಳಿಯಲ್ಲಿ ಕನಿಷ್ಠ 14 ಮಂದಿ ನಾಗರಿಕರು ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಯುದ್ಧ ನಿಗಾ ಘಟಕ ಹಾಗೂ ಪ್ಯಾರಾಮೆಡಿ ಗ್ರೂಪ್ ವರದಿ ಮಾಡಿದೆ.
ಉತ್ತರ ಸಿರಿಯಾದ ಅಲ್-ಬಾಬ್ ಪಟ್ಟಣದಲ್ಲಿ ದಾಳಿ ನಡೆದಿದೆ. ಮೃತಪಟ್ಟ 14 ಮಂದಿಯಲ್ಲಿ 5 ಮಕ್ಕಳೂ ಇದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಹಿಂದೂಗಳಿಗೂ ಇಲ್ಲಿ ನನ್ನಷ್ಟೇ ಹಕ್ಕಿದೆ – ಬಾಂಗ್ಲಾದೇಶ ಪ್ರಧಾನಿ ಹೇಳಿಕೆ
ಇತ್ತೀಚೆಗೆ ಟರ್ಕಿ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಕನಿಷ್ಠ 11 ಸಿರಿಯನ್ ಪಡೆಗಳು ಮತ್ತು ಯುಎಸ್ ಬೆಂಬಲಿತ ಕುರ್ದಿಶ್ ಹೋರಾಟಗಾರರು ಮೃತಪಟ್ಟಿದ್ದರು. ಅದರ ಬೆನ್ನಲ್ಲೇ ಅಲ್-ಬಾಬ್ ಪಟ್ಟಣದ ಮೇಲೆ ಈ ದಾಳಿ ನಡೆದಿದೆ. ಇದನ್ನೂ ಓದಿ: ಮಲಗಿದ್ದಾಗ ಐಟಿಬಿಪಿ ಶಿಬಿರದಿಂದ ಯೋಧರ ಎರಡು AK-47 ರೈಫಲ್ ಕಳವು – ವಿಶೇಷ ತಂಡದಿಂದ ತಲಾಶ್
ಈ ಕುರಿತು ಪ್ರತಿಕ್ರಿಯಿಸಿರುವ ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾಲಯವು ಸಿರಿಯಾದ ಪಡೆಗಳು ಈ ದಾಳಿ ನಡೆಸಿದ್ದು, ಇದು ಟರ್ಕಿಯ ದಾಳಿಗೆ ಪ್ರತೀಕಾರ. ದಾಳಿಯಲ್ಲಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದು, 38 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.