ಢಾಕಾ: ದುಷ್ಕರ್ಮಿಗಳು 12 ಹಿಂದೂ ದೇವಾಲಯಗಳಲ್ಲಿದ್ದ (Temples) 14 ವಿಗ್ರಹಗಳನ್ನು ಧ್ವಂಸಗೊಳಿಸಿದ ಘಟನೆ ಬಾಂಗ್ಲಾದೇಶದ (Bangladesh) ಉತ್ತರ ಠಾಕೂರ್‌ಗಾಂವ್ ಜಿಲ್ಲೆಯಲ್ಲಿ ನಡೆದಿದೆ.
ಬಾಂಗ್ಲಾದೇಶದ ಉಪಜಿಲಾದಲ್ಲಿ ಧಾಂತಲಾ, ಪರಿಯಾ ಹಾಗೂ ಚಾರುಲ್ ಯೂನಿಯನ್‍ಗಳ ದೇವಾಲಯಗಳಲ್ಲಿ ಈ ಘಟನೆ ನಡೆದಿದೆ. ದೇವಾಲಯದಲ್ಲಿದ್ದ 14 ವಿಗ್ರಹಗಳನ್ನು ವಿರೂಪಗೊಳಿಸಲಾಗಿದೆ. ಕೆಲವು ವಿಗ್ರಹಗಳು ದೇಗುಲದ ಕೊಳದಲ್ಲಿ ಪತ್ತೆಯಾಗಿವೆ.
Advertisement
Advertisement
ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯಲ್ಲಿ ಭಾಗಿಯಾದವನ್ನು ಬಂಧಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಉಪಜಿಲ್ಲಾ ನಿರ್ಬಾಹಿ ಅಧಿಕಾರಿ ಬಿಪುಲ್ ಕುಮಾರ್ ಮಾತನಾಡಿ, ಮೂರು ಒಕ್ಕೂಟಗಳಲ್ಲಿನ ದೇವಾಲಯಗಳು ರಸ್ತೆ ಬದಿಯಲ್ಲಿವೆ. ಜೊತೆಗೆ ಬಹುತೇಕ ದುರ್ಬಲವಾಗಿವೆ. ಘಟನೆ ನಿನ್ನೆ (ಭಾನುವಾರ) ರಾತ್ರಿ ನಡೆದಿದೆ. ನಾವು ಸ್ಥಳಗಳಿಗೆ ಭೇಟಿ ನೀಡಿದ್ದೇವೆ. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ರಂಗೇರಿದ ಚಾಮುಂಡೇಶ್ವರಿ ಕ್ಷೇತ್ರ- ಸಿದ್ದರಾಮಯ್ಯ ಬೆಂಬಲಿಗರಿಗೆ ಜಿಟಿಡಿ ಸೆಡ್ಡು
Advertisement
ಧಂತಲಾ ಒಕ್ಕೂಟದ ಪೂಜಾ ಉಜ್ಜಪೋನ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಾತನಾಡಿ, ಸುಮಾರು ಐವತ್ತು ವರ್ಷಗಳಿಂದ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುತ್ತಿದ್ದೇವೆ. ಈ ಹಿಂದೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. ನ್ಯಾಯ ಮತ್ತು ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿ ಆಗಮನ ಎಫೆಕ್ಟ್, ನೆಲಮಂಗಲ ಬಳಿ ಗುಂಡಿ ಮುಕ್ತ ಭಾಗ್ಯ- ಜನಾಕ್ರೋಶ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k