ಕೊರೊನಾ ಸೋಂಕಿತರು 7 ದಿನದಲ್ಲಿ ರಿಕವರಿ ಹೊಂದಿದ್ರೂ, 14 ದಿನ ಕ್ವಾರಂಟೈನ್ ಕಡ್ಡಾಯ: WHO

Public TV
2 Min Read
SC2004 COVID19 1642888921 1200

ಜೀನಿವಾ/ನವದೆಹಲಿ: ಕೋವಿಡ್-19 ಸೋಂಕಿತರು 7 ದಿನಗಳಲ್ಲಿ ಚಿಕಿತ್ಸೆ ಪಡೆದು ಆರೋಗ್ಯ ಸರಿಹೊಂದಿದರೂ ಕೂಡ 14 ದಿನ ಕ್ವಾರಂಟೈನ್ ಕಡ್ಡಾಯವಾಗಿ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ (WHO) ಪುನರುಚ್ಚರಿಸಿದೆ.

CORONA

ಈಗಾಗಲೇ ಕೋವಿಡ್-19 ಸೋಂಕಿತರು 7 ದಿನಗಳಲ್ಲಿ ಹುಷಾರಾಗಿ ಕ್ವಾರಂಟೈನ್‍ನಿಂದ ಹೊರಬಂದು ಎಲ್ಲಾ ಕಡೆ ಹೋಗುತ್ತಾರೆ ಇದರಿಂದ ಕೋವಿಡ್ ಸೋಂಕಿತನ ದೇಹದಲ್ಲಿದ್ದ ಅಲ್ಪಪ್ರಮಾಣದ ಸೋಂಕಿನ ಅಂಶ ಕೊರೊನಾ ಹರಡಲು ಕಾರಣವಾಗುತ್ತದೆ ಎಂದು WHO ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ದಿನದಲ್ಲಿ 50 ಸಾವಿರಕ್ಕೂ ಹೆಚ್ಚು ಕೋವಿಡ್-19 ಕೇಸ್!

corona who

ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ WHO ಕೋವಿಡ್-19 ನಿರ್ವಹಣಾ ತಂಡದ ಸದಸ್ಯ ಅಬ್ಬಿ ಮೊಹಮ್ಮದ್, ದೇಶದಲ್ಲಿ ಕೊರೊನಾ ಸೊಂಕಿತರು 7 ದಿನಗಳಲ್ಲಿ ರಿಕವರಿ ಹೊಂದುತ್ತಾರೆ. ಆದರೆ ಅವರ ದೇಹದಲ್ಲಿ ಅಲ್ಪಪ್ರಮಾಣದ ವೈರಾಣು ಉಳಿದುಕೊಂಡಿರುತ್ತದೆ. ಆದರೆ 14 ದಿನಗಳ ಕಾಲ ಕ್ವಾರಂಟೈನ್ ಹೊಂದಿದರೆ ಸೋಂಕಿತ ಪೂರ್ಣ ಪ್ರಮಾಣದಲ್ಲಿ ಸರಿಹೊಂದುತ್ತಾರೆ. ಇದರಿಂದ ಸೋಂಕಿನ ಹರಡುವಿಕೆ ಕಡಿಮೆ ಆಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಮಿಕ್ಸಿಂಗ್ ಡೋಸ್ 4 ಪಟ್ಟು ಪ್ರಭಾವಿ- ಸಂಶೋಧಕರು

 

ಈ ನಡುವೆ ಕೊರೊನಾ ವಿಶ್ವವ್ಯಾಪಿ ಮತ್ತೆ ಸದ್ದು ಮಾಡುತ್ತಿದೆ. ಭಾರತದಲ್ಲಿ ಕೊರೊನಾ ಮತ್ತು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಭಾರೀ ಏರಿಕೆ ಕಾಣುತ್ತಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 58,097 ಹೊಸ ಕೋವಿಡ್-19 ಪ್ರಕರಣಗಳು ವರದಿ ಆಗಿದೆ. ಜೊತೆಗೆ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 2,135ಕ್ಕೂ ಹೆಚ್ಚು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.  ಇದನ್ನೂ ಓದಿ: ವಿಶ್ವಕ್ಕೆ ಮತ್ತೆ ಕೊರೊನಾ ಕಿರಿಕಿರಿ – ಅಮೆರಿಕಾದಲ್ಲಿ ಪ್ರತಿ ಆರು ಮಂದಿಯಲ್ಲಿ ಒಬ್ಬರಿಗೆ ಸೋಂಕು

ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಸೇರಿದಂತೆ ದೇಶದ ಒಟ್ಟು 24 ರಾಜ್ಯಗಳಲ್ಲಿ ಓಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು 653 ಮಂದಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ದೆಹಲಿ 464, ಕರ್ನಾಟಕ 226, ಕೇರಳ 185, ರಾಜಸ್ಥಾನ 174, ಗುಜರಾತ್ 154, ತಮಿಳುನಾಡು 121, ತೆಲಂಗಾಣ 84. ಹರಿಯಾಣ 71, ಒಡಿಶಾ 37, ಉತ್ತರಪ್ರದೇಶ 31, ಆಂಧ್ರಪ್ರದೇಶ 24, ಪಶ್ಚಿಮ ಬಂಗಾಳ 20, ಮಧ್ಯಪ್ರದೇಶ 9, ಉತ್ತರಾಖಂಡ 8, ಗೋವಾ 5. ಮೇಘಾಲಯ 5, ಚಂಡೀಗಢ 3, ಜಮ್ಮು ಮತ್ತು ಕಾಶ್ಮೀರ 3, ಅಂಡಮಾನ್ ಮತ್ತು ನಿಕೋಬಾರ್ 2, ಪಂಜಾಬ್ 2, ಹಿಮಾಚಲಪ್ರದೇಶ, ಲಡಾಖ್, ಮಣಿಪುರ ತಲಾ 1 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *