14 ಕಡೆ ಕುಕ್ಕರ್ ಬ್ಲಾಸ್ಟ್ ಆಗಿದೆ, ತಗೊಳೋ ಮುನ್ನ ಎಚ್ಚರ: ರಮೇಶ್ ಜಾರಕಿಹೊಳಿ

Public TV
1 Min Read
Ramesh Jarkiholi

ಬೆಳಗಾವಿ: ಗ್ರಾಮೀಣ ಶಾಸಕರು ಮೊದಲು ಕುಕ್ಕರ್ (Cooker) ಕೊಟ್ರು, ಈಗ ಮಿಕ್ಸರ್ ಕೊಟ್ಟಿದ್ದಾರೆ. ಬೆಂಗಳೂರಿನ ಕಾಂಗ್ರೆಸ್ ಎಂಎಲ್‌ಎ ಕ್ಷೇತ್ರದಲ್ಲಿ ಬ್ಲಾಸ್ಟ್ ಆಗಿದೆ. 14 ಕಡೆ ಕುಕ್ಕರ್ ಬ್ಲಾಸ್ಟ್ (Coocker Blast) ಆಗಿದೆ ಎಂದು ಮೊನ್ನೆ ಮಾಧ್ಯಮಗಳಲ್ಲಿ ತೋರಿಸಿದ್ದಾರೆ. ಯಾವುದಕ್ಕೂ ಹುಷಾರಾಗಿರಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಹೇಳಿದ್ದಾರೆ.

Ramesh Jarkiholi 1

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಕ್ಕರ್ ಫ್ಯಾಕ್ಟರಿ ಇರುವುದು ಕನಕಪುರದಲ್ಲಿ. ಅಲ್ಲಿ ಯಾರಿದ್ದಾರೆ? ಡುಪ್ಲಿಕೇಟ್ ಮಾಡುವ ಮಹಾನಾಯಕರಿದ್ದಾರೆ. ಕುಕ್ಕರ್ ನೋಡಿ ಹುಷಾರಾಗಿ ತೆಗೆದುಕೊಳ್ಳಬೇಕು. ಮಾರ್ಕೆಟ್‌ನಲ್ಲಿ ಐಎಸ್‌ಐ ಮಾರ್ಕ್ ಇರುವ ಕುಕ್ಕರ್ 1,200 ರೂ.ಗೆ ಸಿಗುತ್ತದೆ. ಆದರೆ ಇದು 200 ರಿಂದ 300 ರೂ.ಗೆ ಸಿಗುತ್ತದೆ. ಬಡವರು ಆಸೆಗೆ ತೆಗೆದುಕೊಂಡು, ನಾಳೆ ಜೀವಕ್ಕೆ ಹಾನಿಮಾಡಿಕೊಳ್ಳುತ್ತಾರೆ ಎಂದು ಎಚ್ಚರಿಸಿದರು.

ramesh jarkiholi

ನಾವು ಹುಷಾರಾಗಿರಬೇಕು. ಇಲ್ಲ ಎಂದರೆ ಅವರು ಅಲರ್ಟ್ ಆಗ್ತಾರೆ. ನಾವು ಹೇಗೆ ಎಂಎಲ್‌ಸಿಯಲ್ಲಿ ವಿಫಲವಾದೆವು, ಅದೇ ರೀತಿ. ಜೀವನದಲ್ಲಿ ಮೊದಲ ಬಾರಿಗೆ ಚುನಾವಣೆಯನ್ನು ತುಂಬಾ ಹಗುರವಾಗಿ ತೆಗೆದುಕೊಂಡೆವು. ಹೀಗಾಗಿಯೇ ನಮ್ಮ ಸೋಲಾಯಿತು. ನಮ್ಮ ಗುಂಪಿನಲ್ಲಿದ್ದವರೇ ನಮಗೆ ವೋಟ್ ಹಾಕಿಲ್ಲ. ಅವರ ಹೆಸರು ಹೇಳಲು ಆಗಲ್ಲ ಎಂದರು. ಇದನ್ನೂ ಓದಿ: ವೀರೇಂದ್ರ ಪಾಟೀಲ್, ನಿಜಲಿಂಗಪ್ಪಗೆ ಕಾಂಗ್ರೆಸ್ ಅಪಮಾನ ಮಾಡಿಲ್ಲ: ಡಿಕೆಶಿ

Ramesh Jarkiholi 1

ಮಹಾಂತೇಶ ಕವಟಗಿಮಠ ಅವರಿಗೆ ಎರಡನೇ ಸ್ಥಾನ ಬರಬೇಕಾಗಿತ್ತು. ಆದರೆ ಬಿಜೆಪಿ ತಪ್ಪು ಗ್ರಹಿಕೆಯಿಂದ ಫೇಲ್ ಆಗಿದೆ. ಆ ಬಗ್ಗೆ ಈಗ ಹೆಚ್ಚು ಮಾತನಾಡೋದು ಬೇಡ. ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ರಮೇಶ್ ಜಾರಕಿಹೊಳಿ ಮನವಿ ಮಾಡಿಕೊಂಡರು. ಇದನ್ನೂ ಓದಿ: ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಕೇಸ್ – ಕೋರ್ಟ್‌ನಲ್ಲಿ ಇಂದು ಏನಾಯ್ತು?

Share This Article
Leave a Comment

Leave a Reply

Your email address will not be published. Required fields are marked *