– ಬೆಂಗಳೂರಿನ ಪ್ರಮುಖ ರಸ್ತೆಗಳೆಲ್ಲ ಖಾಲಿ ಖಾಲಿ
ಬೆಂಗಳೂರು: 14 ದಿನಗಳ ಟೈಟ್ ನೈಟ್ ಕರ್ಫ್ಯೂ ರಾತ್ರಿ 9 ಗಂಟೆಯಿಂದ ಆರಂಭವಾಗಿದ್ದು, ಬೆಂಗಳೂರಿನ ಎಲ್ಲ ಫ್ಲೈ ಓವರ್ ಗಳು ಬಂದ್ ಆಗಿವೆ. ನಗರದ ಪ್ರಮುಖ ರಸ್ತೆಗಳೆಲ್ಲ ಖಾಲಿ ಖಾಲಿ ಆಗಿದ್ದು, ಅಲ್ಲಲ್ಲಿ ಕೆಲವೊಂದು ವಾಹನಗಳು ಕಾಣ ಸಿಗುತ್ತಿವೆ. ನೈಟ್ ಕರ್ಫ್ಯೂ ಬೆಳಗ್ಗೆ 6 ಗಂಟೆವರೆಗೂ ಇರಲಿದೆ.
Advertisement
ಮೆಜೆಸ್ಟಿಕ್ ನ ಸಂಗೊಳ್ಳಿ ರಾಯಣ್ಣ ಫ್ಲೈ ಓವರ್, ಚರ್ಚ್ ಸ್ಟ್ರೀಟ್ ರಸ್ತೆ, ಎಂಜಿ ರೋಡ್ ಒಂದು ಬದಿಯನ್ನ ಬಂದ್ ಮಾಡಲಾಗಿದೆ. ಅದೇ ರೀತಿ ಕೆ.ಆರ್. ಮಾರ್ಕೆಟ್ ನ ಕೆಳಭಾಗದ ರೋಡ್ ಮತ್ತೆ ಸರ್ವೀಸ್ ರಸ್ತೆಗೆ ವೆಹಿಕಲ್ ಗಳಿಗೆ ಡೈ ವರ್ಷನ್ ನೀಡಿ ಕ್ಲೋಸ್ ಮಾಡಲಾಗಿದೆ. ರಾತ್ರಿ 10 ಗಂಟೆ ಆಗುತ್ತಿದ್ದಂತೆ ಜನ ಸಂಚಾರ ಸಹ ವಿರಳವಾಗಿದೆ. ಬಹುತೇಕರು ಮನೆ ಸೇರಿಕೊಳ್ಳುವ ಅವಸರದಲ್ಲಿದ್ದಂತೆ ಕಾಣಿಸುತ್ತಿದೆ.
Advertisement
Advertisement
ಬೆಂಗಳೂರಿನಲ್ಲಿ ಈ ಬಾರಿ ನೈಟ್ ಕರ್ಫ್ಯೂ ಬಹಳ ಟಫ್ ಇರುತ್ತೆ. ಈ ಬಾರಿಯೂ ಯಾರಿಗೂ ಪಾಸ್ ಇಲ್ಲ. ಸುಖಾಸುಮ್ಮನೆ ಹೊರಗೆ ಬಂದರೆ ವಾಹನಗಳನ್ನ ವಶಕ್ಕೆ ಪಡೆದು ದಂಡ ಹಾಕಲಾಗುತ್ತದೆ. ಅಗತ್ಯ ಸೇವೆಗಳ ಓಡಾಟಕ್ಕೆ ದಾಖಲೆ ಅಗತ್ಯ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ಎಚ್ಚರಿಕೆ ನೀಡಿದ್ದಾರೆ.
Advertisement
ಇತ್ತ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ನೈಟ್ ಕರ್ಫ್ಯೂ ಆರಂಭವಾಗಿದೆ. ರಾತ್ರಿ 9 ಗಂಟೆ ಆಗುತಿದ್ದಂತೆ ರಸ್ತೆಗಿಳಿದಿರುವ ಪೊಲೀಸರು ಅಂಗಡಿಗಳನ್ನು ಮುಚ್ಚುವಂತೆ ಸೂಚಿಸುತ್ತಿದ್ದಾರೆ. ನಗರಗಳ ಪ್ರಮುಖ ರಸ್ತೆಗಳನ್ನ ಬ್ಯಾರಿಕೇಡ್ ಹಾಕಿರುವ ಪೊಲೀಸರು, ಮೈಕ್ ಮೂಲಕ ಜನರನ್ನು ಜಾಗೃತಗೊಳಿಸುತ್ತಿದ್ದಾರೆ.