ರಾಯ್‍ಪುರ: ಚತ್ತೀಸ್‍ಗಢದ (Chhattisgarh) ನಕ್ಸಲ್ ಪೀಡಿತ ಜಿಲ್ಲೆಯಾದ ದಂತೇವಾಡದಲ್ಲಿ (Dantewada) ನಕ್ಸಲರು ನಿರ್ಮಾಣ ಮಾಡಿಕೊಂಡ 10 ಅಡಿ ಆಳದ ಸುಮಾರು 130 ಅಡಿ ಉದ್ದದ ಸುರಂಗ ಪತ್ತೆಯಾಗಿದೆ.
ಮಾವೋವಾದಿಗಳೊಂದಿಗೆ ಗುಂಡಿನ ಚಕಮಕಿ ನಡೆಸಿ ಭದ್ರತಾ ಪಡೆಗಳು ಹಿಂತಿರುಗುತ್ತಿದ್ದಾಗ ಈ ಅಡಗುತಾಣ ಪತ್ತೆಯಾಗಿದೆ. 10 ಅಡಿ ಆಳದ ಸುರಂಗವನ್ನು ಮೊದಲು ಸ್ಥಳೀಯ ಬುಡಕಟ್ಟು ಯುವಕರನ್ನು ಒಳಗೊಂಡಿರುವ ಜಿಲ್ಲಾ ಮೀಸಲು ಗಾರ್ಡ್ ಜವಾನರು ಪತ್ತೆ ಹಚ್ಚಿದ್ದಾರೆ. ಇದುವರೆಗೂ ಪತ್ತೆಯಾದ ನಕ್ಸಲರ ಅಡುಗು ತಾಣಗಳಲ್ಲಿ ಇದು ಭಾರೀ ದೊಡ್ಡದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಇದು ಜನರ ಸಂಚಾರ ಇಲ್ಲದ ಪ್ರದೇಶದಲ್ಲಿದ್ದು, ಯಾರ ಗಮನಕ್ಕೂ ಬಂದಿರಲಿಲ್ಲ. ಜಿಲ್ಲಾ ಮೀಸಲು ಗಾರ್ಡ್‍ನ ನಮ್ಮ ಜವಾನರೊಬ್ಬರು ಅದನ್ನು ಪತ್ತೆಹಚ್ಚಿದ್ದಾರೆ. ಇದು ಹೊಂಚು ಹಾಕಿ ದಾಳಿ ನಡೆಸಲು ನಿರ್ಮಾಣ ಮಾಡಿರಬಹುದು ಎಂದು ಪೊಲೀಸರು (Police) ತಿಳಿಸಿದ್ದಾರೆ. ಇದನ್ನೂ ಓದಿ: ಕ್ಲಬ್‌ನಲ್ಲಿ ಕೆಲಸ ಮಾಡಿದ್ದಕ್ಕೆ ಮಾಜಿ ಪ್ರೇಯಸಿಯ ಮೂಗನ್ನೇ ಕಚ್ಚಿದ ಭೂಪ!
Advertisement
Advertisement
ಜಿಲ್ಲಾ ಪೊಲೀಸರು ಹಂಚಿಕೊಂಡಿರುವ ಸುರಂಗದ ವೀಡಿಯೊದಲ್ಲಿ ಸುರಂಗದ ಪ್ರವೇಶದ ಸ್ಥಳಗಳನ್ನು ಮಣ್ಣು ಮತ್ತು ಕೋಲುಗಳಿಂದ ಮುಚ್ಚಲಾಗಿದೆ. ಕಿರಿದಾದ ಸುರಂಗವು ಪ್ರತಿ ಆರು ಮೀಟರ್ ತೆರೆದುಕೊಂಡಿದೆ. ತಜ್ಞರ ಪ್ರಕಾರ ಇಂತಹ ಅಡಗುತಾಣಗಳು ಅಬುಜ್ಮದ್ ಪ್ರದೇಶದಲ್ಲಿ ಈ ಹಿಂದೆ ಕಂಡುಬಂದಿದ್ದವು. ಅವುಗಳನ್ನು ಮುಖ್ಯವಾಗಿ ಹಿರಿಯ ಮಾವೋವಾದಿ ನಾಯಕರ ಅಡಗುತಾಣಗಳಾಗಿ ಬಳಸಲಾಗುತ್ತಿತ್ತು. ಇವು ಸಹ ಹಿರಿಯ ನಕ್ಸಲ್ ಮುಖಂಡರ ಅಡುಗುತಾಣಗಳಾಗಿ ನಿರ್ಮಿಸಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
Advertisement
ಅಡಗುತಾಣ ಪತ್ತೆಯಾದ ಬೆನ್ನಲ್ಲೇ ಭದ್ರತಾ ಪಡೆಗಳು ಸುತ್ತಮುತ್ತಲಿನ ಅರಣ್ಯ ಪ್ರದೇಶ ಹಾಗೂ ಇನ್ನಿತರ ಸ್ಥಳಗಳಲ್ಲಿ ನಕ್ಸಲರಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ಈ ಬಗ್ಗೆ ಇದುವರೆಗೂ ಮಾವೋವಾದಿಗಳ ಸುಳಿವು ಪತ್ತೆಯಾದ ಬಗ್ಗೆ ವರದಿಯಾಗಿಲ್ಲ.
2012ರಲ್ಲಿ ಬಿಜಾಪುರದಲ್ಲಿ ಹಿರಿಯ ಮಾವೋವಾದಿ ನಾಯಕ ಗಣಪತಿ ಬಳಸುತ್ತಿದ್ದ 80 ಮೀಟರ್ ಉದ್ದದ ಸುರಂಗ ಪತ್ತೆಯಾಗಿತ್ತು. ನಂತರ, ಬಿಜಾಪುರದ ಕೆರ್ಪರ್ ಪ್ರದೇಶದಲ್ಲಿ, ನಾವು ಕಂಪ್ಯೂಟರ್ ಮತ್ತು ಇತರ ಉಪಕರಣಗಳನ್ನು ಸಂಗ್ರಹಿಸಲು ಬಳಸುತ್ತಿದ್ದ ಸುರಂಗವನ್ನು ಪತ್ತೆಹಚ್ಚಿದ್ದೆವು ಎಂದು ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ ಕೇಸ್ – ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ