ಲಕ್ನೋ: ವೇಗವಾಗಿ ಬಂದ 13 ಮರಳು ತುಂಬಿದ ಟ್ರ್ಯಾಕ್ಟರ್‌ಗಳು ಉತ್ತರ ಪ್ರದೇಶದ ಆಗ್ರಾದ ಟೋಲ್ ಗೇಟ್‍ನ್ನು ಮುರಿದ ಘಟನೆ ನಡೆದಿದೆ.
ಈ 13 ಟ್ರ್ಯಾಕ್ಟರ್‌ಗಳಿಗೆ ಅಕ್ರಮ ಮರಳನ್ನು ತುಂಬಲಾಗಿತ್ತು. ಇದರಿಂದಾಗಿ ಟ್ರ್ಯಾಕ್ಟರ್‌ನಲ್ಲಿದ್ದ ಚಾಲಕರು ಟೋಲ್ ಟ್ಯಾಕ್ಸ್ ಅನ್ನು ಪಾವತಿಸಲು ನಿಲ್ಲಿಸದೇ, ಆ ಗೇಟ್‍ನ್ನೇ ಮುರಿದುಕೊಂಡು ಹೋಗಿದ್ದಾರೆ. ಟ್ರ್ಯಾಕ್ಟರ್‌ಗಳು ಅತಿವೇಗದಲ್ಲಿ ಹಾದು ಹೋಗುವುದರಿಂದ ಗೇಟ್ ಮುರಿದಿದೆ. ಟೋಲ್ ಟ್ಯಾಕ್ಸ್ ಸಿಬ್ಬಂದಿ ಲಾಠಿ ಬೀಸಿ ವಾಹನಗಳನ್ನು ನಿಲ್ಲಿಸಲು ಪ್ರಯತ್ನಿಸಿದರೂ ಆ 13 ಟ್ರ್ಯಾಕ್ಟರ್ ನಿಲ್ಲಲಿಲ್ಲ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
ये है भाजपा और रेत माफ़िया के डबल इंजन की दबंगई!
भाजपा सरकार के बैरियर भी उनकी ही तरह दिखावटी हैं। pic.twitter.com/38Gj9C1lf2
— Akhilesh Yadav (@yadavakhilesh) September 4, 2022
Advertisement
ವೈರಲ್ ಆಗುತ್ತಿರುವ ಈ ವೀಡಿಯೋ 53 ಸೆಕೆಂಡ್‍ಗಳಿವೆ. ಈ ವೀಡಿಯೋವನ್ನು ಹಂಚಿಕೊಂಡ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದು, ಬಿಜೆಪಿಯ ಡಬಲ್ ಇಂಜಿನ್‍ನ ಸರ್ಕಾರ ಮರಳು ಮಾಫಿಯಾದಲ್ಲಿ ಧೈರ್ಯವನ್ನು ತೋರಿಸುತ್ತಿವೆ. ಬಿಜೆಪಿಯ ಅಡೆತಡೆಗಳು ಅವುಗಳಂತೆಯೇ ನಕಲಿಯಾಗಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ತಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಅಂತ ಚಾಮುಂಡೇಶ್ವರಿ ಮೇಲೆ ಆಣೆ ಮಾಡಲಿ – ಸಿದ್ದರಾಮಯ್ಯಗೆ ಈಶ್ವರಪ್ಪ ಸವಾಲ್
Advertisement
Advertisement
ಘಟನೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಟ್ರ್ಯಾಕ್ಟರ್‌ನ ಕೆಲವು ಚಾಲಕನ್ನು ಬಂಧಿಸಿದ್ದಾರೆ. ಆರೋಪಿಗಳೆಲ್ಲರೂ ಧೋಲ್‍ಪುರ್(ರಾಜಸ್ಥಾನ)ಕ್ಕೆ ಸೇರಿದವರಾಗಿದ್ದಾರೆ. ಇದನ್ನೂ ಓದಿ: ಗಣೇಶಮೂರ್ತಿ ಸ್ಥಾಪಿಸಿದ ಬಿಜೆಪಿ ನಾಯಕಿ ರೂಬಿಖಾನ್‌ಗೆ ಮುಸ್ಲಿಂ ಧರ್ಮಗುರುಗಳಿಂದ ಕೊಲೆ ಬೆದರಿಕೆ