DistrictsKarnatakaLatestMain PostShivamogga

ತಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಅಂತ ಚಾಮುಂಡೇಶ್ವರಿ ಮೇಲೆ ಆಣೆ ಮಾಡಲಿ – ಸಿದ್ದರಾಮಯ್ಯಗೆ ಈಶ್ವರಪ್ಪ ಸವಾಲ್

ಶಿವಮೊಗ್ಗ: ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಅರ್ಕಾವತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಅವರ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಅಂತಾ ಚಾಮುಂಡೇಶ್ವರಿ ಮೇಲೆ ಆಣೆ ಮಾಡಲಿ ಎಂದು ಮಾಜಿ ಸಚಿವ ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲೊಡ್ಡಿದ್ದಾರೆ.

ಬಿಜೆಪಿ ಜನೋತ್ಸವ ಅಲ್ಲ, ಭ್ರಷ್ಟೋತ್ಸವ ಎಂಬ ಸಿದ್ದರಾಮಯ್ಯ ಅವರ ಆರೋಪ ವಿಚಾರವಾಗಿ ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡಿ ಹೇಳಿಲಿ, ಇದು ಜನೋತ್ಸವ ಅಲ್ಲ ಭ್ರಷ್ಟೋತ್ಸವ ಅಂತಾ ಆಗ ನಾನು ಕೂಡಾ ಒಪ್ಪಿಕೊಳ್ಳುತ್ತೇನೆ. ತಾನು ಮುಖ್ಯಮಂತ್ರಿ ಆಗಿದ್ದ ವೇಳೆ ಭ್ರಷ್ಟಾಚಾರ ಮಾಡಿಯೇ ಇಲ್ಲ ಅಂತಾ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿಲಿ. ಬಿಜೆಪಿ ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕಾರ್ಯ ನೋಡಿ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಕೇಂದ್ರದಲ್ಲೂ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಅನೇಕ ಮುಖಂಡರು ಹೊರಗೆ ಬರುತ್ತಿದ್ದಾರೆ. ರಾಜ್ಯದಲ್ಲೂ ಕೂಡಾ ಅನೇಕ ಮುಖಂಡರು ಬಿಜೆಪಿ ಸೇರುತ್ತಿದ್ದಾರೆ. ಅವರ ಪಕ್ಷವನ್ನು ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಬಿಜೆಪಿ ವಿರುದ್ಧ ಆಪಾದನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮದ್ಯದ ನಶೆಯಲ್ಲಿಯೇ ಸಾರಾಯಿ ಬಂದ್ ಮಾಡ್ಬೇಕೆಂದು ಪಂಚಾಯ್ತಿ ಕಟ್ಟಡವೇರಿದ!

SIDDARAMAIAH

ಇದೇ ವೇಳೆ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಮಾಡಿರುವ ಆರೋಪ ಸಂಬಂಧ ಮಾತನಾಡಿದ ಅವರು, ನಾನು ಕೆಂಪಣ್ಣ ಅವರಿಗೆ ನೇರವಾಗಿ ಹೇಳುತ್ತೇನೆ. ನೀವು ಹಿರಿಯರು ಆಗಿದ್ದೀರಾ, ನಿಮ್ಮ ಬಗ್ಗೆ ನನಗೆ ಗೌರವ ಇದೆ. ನೀವು ಏಕೆ ಕಾಂಗ್ರೆಸ್ ಕೈಗೊಂಬೆ ಆಗಿದ್ದೀರಾ. ಒಬ್ಬೊಬ್ಬ ಮಂತ್ರಿ ಒಂದು ಕೇಸಲ್ಲಿ 40% ಪಡೆದಿದ್ದೀರಾ ಅಂತಾ ದಾಖಲೆ ಬಿಡುಗಡೆ ಮಾಡಿ. ಒಂದು ರೆಕಾರ್ಡ್ ಬಿಡುಗಡೆ ಮಾಡದೇ, ನೀವು ಕಾಂಗ್ರೆಸ್ ಏಜೆಂಟ್ ರೀತಿ ಮಾತನಾಡಿದರೆ ನಿಮ್ಮನ್ನು ಜನ ಹೇಗೆ ನಂಬುತ್ತಾರೆ. ಸಿಎಂ, ಪಿಎಂ ಅವರಿಗೆ ಪತ್ರ ಬರೆದೆ ಅಂತೀರಾ, ಪತ್ರ ಬರೆಯೋದು ನಿಮ್ಮ ಕೆಲಸ, ಪತ್ರ ಬರೆದ ತಕ್ಷಣ ಬಗೆಹರಿಯುವುದಿಲ್ಲ. ಪತ್ರ ಬರೆದಿರಬಹುದು, ಎಲ್ಲಾದರೂ ದಾಖಲೆ ಬಿಡುಗಡೆ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿರುವ ವಿಚಾರ ನಿನ್ನೆ ಕೋರ್ ಕಮಿಟಿಯಲ್ಲಿ ಚರ್ಚೆ ಆಗಿದೆ. ಅವರ ಅವಧಿಯಲ್ಲಿ ಏನೇನು ಭ್ರಷ್ಟಾಚಾರ ನಡೆದಿದೆ ಅದನ್ನು ಹೇಳುತ್ತೇವೆ. ಜೊತೆಗೆ ನಮ್ಮ ಸರ್ಕಾರದ ಅಭಿವೃದ್ಧಿ ಕೆಲಸದ ಬಗ್ಗೆಯೂ ಹೇಳುತ್ತೇವೆ. ಕೆಂಪಣ್ಣನಂತಹ ಯಜಮಾನರನ್ನು ದಯವಿಟ್ಟು ಬಿಟ್ಟುಬಿಡಿ. ಸುಮ್ಮನೆ ಅವರಿಗೆ ಕೆಟ್ಟ ಹೆಸರು ತರಬೇಡಿ. ಅವರ ಮುಂದೆ ಬಿಟ್ಟುಕೊಂಡು ಮಾತನಾಡಿದರೆ ನಿಮ್ಮ ಮಾತನ್ನು ಯಾರು ನಂಬುತ್ತಾರೆ. ಒಂದೇ ಒಂದು ದಾಖಲೆ ಬಿಡುಗಡೆ ಮಾಡಲು ತಯಾರಿಲ್ಲ. ಬರಿ ಪುಕ್ಸಟೆ ಮಾತು ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಮನೆಗೆ ಹೋಗುತ್ತಿದ್ದ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

ಜನೋತ್ಸವದ ಬಗ್ಗೆ ಏನೇನು ಅಭಿವೃದ್ಧಿ ಕಾರ್ಯಕ್ರಮ ಮಾಡಿದ್ದೇವೆ ಅಂತಾ ತೋರಿಸುತ್ತೇವೆ. ಕಾಂಗ್ರೆಸ್‍ನವರ ಮಾತನ್ನು ಜನ ನಂಬುವುದಿಲ್ಲ. ಆದರೂ ಭಂಡತನದಿಂದ ನಮ್ಮ ಮೇಲೆ ಆಪಾದನೆ ಮಾಡುತ್ತೀರಾ. ಡಿಕೆಶಿ, ಸಿದ್ದರಾಮಯ್ಯ ಆಪಾದನೆಯನ್ನು ಜನ ನಂಬುವುದಿಲ್ಲ. ಡಿಕೆಶಿ ಇದು ಭ್ರಷ್ಟಾಚಾರ ಸರ್ಕಾರ, 40% ಸರ್ಕಾರ ಎಂದು ಹೇಳುತ್ತಾರೆ. ತಿಹಾರ್ ಜೈಲಿಗೆ ಯಾಕೆ ಸುಮ್ಮನೆ ಹೋಗಿದ್ದ, ಬೇಲ್ ಮೇಲೆ ಯಾಕೆ ಇದ್ದೀಯಾ. ತಿಹಾರ್ ಜೈಲಿಗೆ ಪುಕ್ಸಟೆ ಕಳುಹಿಸುತ್ತಾರಾ. ನಿಮ್ಮ ಮನೆಯಲ್ಲಿ ಕೋಟಿ ಕೋಟಿ ಅಕ್ರಮ ಹಣ ಸಿಕ್ಕಿದ್ದು ಸತ್ಯ ತಾನೇ. ನೀನು ಸತ್ಯ ಹರಿಶ್ಚಂದ್ರನ ರೀತಿ ದಿನ ಮಾತನಾಡುತ್ತಿಯಲ್ಲ. ಬಿಜೆಪಿ ಸರ್ಕಾರ ಭ್ರಷ್ಟಾಚಾರ ಸರ್ಕಾರ ಅಂತೀಯಲ್ಲ ಜನ ನಿನ್ನನ್ನು ನಂಬುತ್ತಾರಾ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಸಿಎಂ ಸ್ಥಾನ, ಶಾಸಕ ಸ್ಥಾನ ಹೋಯಿತು. ಮತ್ತೆ ಮುಖ್ಯಮಂತ್ರಿ ಆಗಬೇಕು ಅಂತಾ ಎಲ್ಲಾ ಆಟ ಆಡುತ್ತಿದ್ದೀರಾ. ಇಡೀ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗಿದೆ. ಕಾಂಗ್ರೆಸ್‍ನ ಅನೇಕ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಅವರು ರಾಜೀನಾಮೆ ಕೊಟ್ಟು ನಮ್ಮ ಪಕ್ಷಕ್ಕೆ ಬರುತ್ತಾರೆ. ಕಾಂಗ್ರೆಸ್ ಪಕ್ಷ, ಸರ್ಕಾರವನ್ನು ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಬಿಜೆಪಿ ಸರ್ಕಾರದ ವಿರುದ್ಧ ಆಪಾದನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ 150ಕ್ಕೂ ಹೆಚ್ಚು ಸ್ಥಾನ ಬಿಜೆಪಿಗೆ ಬರಲಿದೆ ಎಂದಿದ್ದಾರೆ.

ನಂತರ ಮುರುಘಾ ಶ್ರೀ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಒಂದು ಪಿಕ್ ಪಾಕೇಟ್ ಮಾಡಿದ ಮೇಲೆ ಕಳ್ಳ ಸಿಕ್ಕಿ ಹಾಕಿಕೊಳ್ಳುತ್ತಾನೆ. ಆ ಕಳ್ಳ ಸಿಕ್ಕಿದ ಮೇಲೆ ಅವನು ಎಲ್ಲೆಲ್ಲಿ ಕದ್ದಿದ್ದ, ಏನೇನು ಕದ್ದಿದ್ದ, ಯಾರು ಯಾರು ಜೊತೆ ಸಂಪರ್ಕದಲ್ಲಿದ್ದ, ಯಾವ ಯಾವ ಡಾನ್‍ಗಳು ಅವನ ಜೊತೆಗೆ ಇದ್ದಾರೆ. ಈ ತರಹದ ಎಲ್ಲಾ ಸಿಗುತ್ತದೆ. ಕೆಟ್ಟ ಕೆಲಸ ಮಾಡುವವರು ಸಿಕ್ಕೇ ಸಿಗುತ್ತಾರೆ. ಸಿಕ್ಕಿದ ನಂತರ ಪೊಲೀಸ್ ತನಿಖೆ ನಂತರ ಎಲ್ಲಾ ಬಹಿರಂಗ ಆಗುತ್ತದೆ ಎಂದು ತಿಳಿಸಿದ್ದಾರೆ.

Live Tv

Leave a Reply

Your email address will not be published.

Back to top button