ಪಾಟ್ನಾ: ಬಿಹಾರದಲ್ಲಿ (Bihar) ಛಾತ್ ಹಬ್ಬದ (Chhath Festivities) ಆಚರಣೆ ವೇಳೆ ವಿವಿಧ ಜಲ ಮೂಲಗಳಲ್ಲಿ ಮುಳುಗಿ ಒಟ್ಟು 13 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಟ್ನಾ (Patna), ಖಗಾರಿಯಾ, ಸಮಸ್ತಿಪುರ್, ಸಹರ್ಸಾ, ದಬರ್ಂಗಾ, ಮುಂಗೇರ್ ಮತ್ತು ಬೆಸುಸರೈಗಳಲ್ಲಿ ಈ ಸಾವುಗಳು ವರದಿಯಾಗಿವೆ. ಪಾಟ್ನಾ ಜಿಲ್ಲೆಯಲ್ಲಿ ಬ್ರಹ್ಮಪುರ ಪ್ರದೇಶದಲ್ಲಿ ಮೂವರು ವ್ಯಕ್ತಿಗಳು ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಖಗಾರಿಯಾದಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಚೌತಮ್ ಮತ್ತು ಪರ್ಬಟಾ ಪ್ರದೇಶಗಳಲ್ಲಿ ಮೂವರು ಮುಳುಗಿದ್ದಾರೆ. ಅಲ್ಲದೆ, ದಬರ್ಂಗಾ ಮತ್ತು ಸಮಸ್ತಿಪುರ್ ಜಿಲ್ಲೆಗಳಲ್ಲಿ ತಲಾ ಇಬ್ಬರು ಮತ್ತು ಬೇಗುಸರೈ, ಮುಂಗರ್ ಮತ್ತು ಸಹರ್ಸಾ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಶೀಘ್ರವೇ ಹೆಚ್‌ಡಿಕೆ ನಿರ್ಮಾಣದ ಪೆನ್ ಡ್ರೈವ್ ಬ್ರದರ್ ಚಿತ್ರ ಬಿಡುಗಡೆ – ಪೋಸ್ಟರ್ ರಿಲೀಸ್
Advertisement
Advertisement
ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಅವರ ಗುರುತು ಪತ್ತೆಗೆ ಅಧಿಕಾರಿಗಳು ಹಾಗೂ ಪೊಲೀಸರು (Police) ಕ್ರಮ ಕೈಗೊಂಡಿದ್ದಾರೆ. ಕಳೆದ ಬಾರಿ ಛಾತ್ ಹಬ್ಬದ ವೇಳೆ ಬಿಹಾರದಾದ್ಯಂತ ಸುಮಾರು 53 ಜನ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದರು. ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಇಬ್ಬರು ಸೇನಾ ಸಿಬ್ಬಂದಿ ಹುತಾತ್ಮ