ಜಕಾರ್ತ: ಇಂಡೊನೇಷ್ಯಾದ ಮೂರು ಚರ್ಚ್‍ಗಳ ಮೇಲೆ ಆತ್ಮಹತ್ಯಾ ಬಾಂಬರ್ ಗಳು ನಡೆಸಿದ ದಾಳಿಯಲ್ಲಿ 13 ಮಂದಿ ಸಾವನ್ನಪ್ಪಿದ್ದು, 41ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ದೇಶದ ಎರಡನೇ ದೊಡ್ಡ ನಗರವಾದ ಸುರಭಯದಲ್ಲಿರುವ ಸಂತ ಮೇರಿಯಾ ರೋಮ್ ಕ್ಯಾಥೋಲಿಕ್ ಚರ್ಚ್, ಡಿಪೊನಿಗೊರೊದ ಚರ್ಚ್ ಹಾಗೂ ಪಂಟಕೊಸ್ತಾ ಚರ್ಚ್ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ.
Advertisement
Advertisement
ಕ್ಯಾಥೋಲಿಕ್ ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆಯ ವೇಳೆ ಮೊದಲ ದಾಳಿ ನಡೆದಿದೆ. ಈ ವೇಳೆ ಶಂಕಿತ ಬಾಂಬರ್ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಇದಾದ ಕೆಲವೇ ನಿಮಿಷದಲ್ಲಿ ಡಿಪೊನಿಗೊರೊದ ಚರ್ಚ್ ನಲ್ಲಿ ಎರಡನೇ ಬಾಂಬ್ ಸ್ಪೋಟವಾಗಿದೆ. ಮೂರನೇ ಬಾಂಬ್ ದಾಳಿ ಪಂಟಕೊಸ್ತಾ ಚರ್ಚ್ ಮೇಲಾಗಿದೆ ಎಂದು ಪೊಲೀಸ್ ವಕ್ತಾರ ಪ್ರಾನ್ಸ್ ಬರುಂಗ್ ಮಾಂಗೇರಾ ಸುದ್ದಿಗಾರಿರಗೆ ಮಾಹಿತಿ ನೀಡಿದ್ದಾರೆ.
Advertisement
ಘಟನೆ 13 ಮಂದಿ ಸಾವನ್ನಪ್ಪಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸೇರಿದಂತೆ 40 ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Advertisement
ಮುಸ್ಲಿಮರನ್ನು ಹೊಂದಿರುವ ಇಂಡೋನೇಷ್ಯಾದಲ್ಲಿ ಅಲ್ಪಸಂಖ್ಯಾತರಾಗಿರುವ ಕ್ರಿಶ್ಚಿಯನ್ ಸಮುದಾಯದ ಮೇಲೆ ಮೊದಲಿನಿಂದಲೂ ಇಲ್ಲಿ ದಾಳಿ ನಡೆಯುತ್ತಿದೆ. 2000ರಲ್ಲಿ ಕ್ರಿಸ್‍ಮಸ್ ದಿನ ಚರ್ಚ್ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ 15 ಮಂದಿ ಮೃತಪಟ್ಟಿದ್ದರು ಮತ್ತು ಸುಮಾರು 100 ಜನ ಗಾಯಗೊಂಡಿದ್ದರು.