ವಾಷಿಂಗ್ಟನ್: ಬಂಗಲೆಗೆ ಬರುತ್ತಿದ್ದ ಹಾವುಗಳ ಕಾಟದಿಂದ ತಪ್ಪಿಸಿಕೊಳ್ಳಲು ಮನೆ ಮಾಲೀಕ, ಬರೋಬ್ಬರಿ 13.50 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದ ಮನೆಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಅಮೆರಿಕಾದ ಮೇರಿಲ್ಯಾಂಡ್‍ನಲ್ಲಿ ನಡೆದಿದೆ.
Advertisement
ಈ ವ್ಯಕ್ತಿ ಮನೆಯನ್ನು ಖರೀರಿದಿಸುವ ಮುನ್ನ ಆ ಮನೆಯಲ್ಲಿ ಬಾಡಿಗೆಗಿದ್ದವರು ಕೂಡ ಹಾವುಗಳ ಕಾಟದಿಂದ ರೋಸಿ ಹೋಗಿದ್ದರಂತೆ. ಆದರೆ ಈತ ಧರ್ಯ ಮಾಡಿ ಮನೆಯನ್ನು ಖರೀದಿ ಮಾಡಿದ್ದಾನೆ. ಆದರೆ ಮನೆಗೆ ಬಂದಿದ್ದೇ ತಡ ಹಾವುಗಳು ಪ್ರತಿನಿತ್ಯ ಮನೆಗೆ ಬರುತ್ತಿದ್ದವಂತೆ. ಕಣ್ಣು ಹಾಯಿಸಿದಲೆಲ್ಲ ಹಾವು ಕಾಣಿಸಿಕೊಳ್ಳುತ್ತಿದ್ದು, ಇದರಿಂದ ಕಂಗಾಲಾದ ಮಾಲೀಕ ಒಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾನೆ.ಇದನ್ನೂ ಓದಿ: ನಾನ್ ಬೆಡ್‍ಶೀಟ್, ತಲೆದಿಂಬು- ಬೆಡ್‍ರೂಮ್ ಫೋಟೋ ವೈರಲ್
Advertisement
ICYMI – Update Big Woods Rd, house fire 11/23; CAUSE, accidental, homeowner using smoke to manage snake infestation, it is believed heat source (coals) too close to combustibles; AREA of ORIGIN, basement, walls/floor; DAMAGE, >$1M; no human injures; status of snakes undetermined https://t.co/65OVYAzj4G pic.twitter.com/xSFYi4ElmT
— Pete Piringer (@mcfrsPIO) December 3, 2021
Advertisement
ಒಂದಿಷ್ಟು ಕಲ್ಲಿದ್ದಲು ತಂದು ಅದಕ್ಕೆ ಬೆಂಕಿ ಕೊಟ್ಟಿದ್ದಾನೆ. ಕಲ್ಲಿದ್ದಲಿನಿಂದ ಬರುವ ಹೊಗೆ ತಳಲಾರದೇ ಹಾವುಗಳು ಓಡಿಹೋಗಬಹುದು ಎನ್ನುವುದು ಅವನ ಲೆಕ್ಕಾಚಾರವಾಗಿತ್ತು. ಆದರೆ ಬೆಂಕಿಯು ತಕ್ಷಣ ಮನೆಯಲ್ಲಿದ್ದ ಪೀಠೋಪಕರಣಗಳಿಗೆ ವ್ಯಾಪಿಸಿದೆ. 10 ಸಾವಿರ ಚದರ ಅಡಿ ವಿಸ್ತೀರ್ಣದ ಇಡೀ ಬಂಗಲೆ ಸುಟ್ಟು ಕರಕಲಾಗಿದೆ. ಇದನ್ನೂ ಓದಿ: ಫೋಟೋಶೂಟ್‌ಗಾಗಿ ಬಂದಿದ್ದ ಮಹಿಳೆ ಮೇಲೆ ಲಾಡ್ಜ್‌ನಲ್ಲಿ ಗ್ಯಾಂಗ್‌ರೇಪ್
Advertisement
13 ಕೋಟಿ ರೂಪಾಯಿ ಬೆಲೆ ಬಾಳುವ ಮನೆಗೆ ಹಾವುಗಳ ಕಾಣಕ್ಕೆ ಬೆಂಕಿ ಇಟ್ಟು, ಸುಟ್ಟು ಭಸ್ಮವಾಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ನೆಟ್ಟಿಗರು ಕಾಮೆಂಟ್ ಮಡುತ್ತಿದ್ದಾರೆ. ಇದನ್ನೂ ಓದಿ: ತುಮಕೂರಿನಲ್ಲಿ ಮತ್ತೆ ಕೊರೊನಾ ಭೀತಿ – 42 ಪುಟ್ಟ ಮಕ್ಕಳಿಗೆ ವಕ್ಕರಿಸಿದ ಕೋವಿಡ್