Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cricket

13 ವರ್ಷಗಳ ಬಳಿಕ ರಾಜಸ್ಥಾನದ ಅಪರೂಪದ ಸಾಧನೆ- ಸ್ಮಿತ್ ಪಡೆಗೆ 7 ವಿಕೆಟ್‍ಗಳ ಜಯ

Public TV
Last updated: October 19, 2020 11:26 pm
Public TV
Share
3 Min Read
CSK vs RR
SHARE

– ಅಂಕಪಟ್ಟಿಯಲ್ಲಿ ಕೊನೆ ಸ್ಥಾನಕ್ಕೆ ಜಾರಿದ ಚೆನ್ನೈ

ಅಬುಧಾಬಿ: 2020ರ ಐಪಿಎಲ್ ಆವೃತ್ತಿಯಲ್ಲಿ ಪ್ಲೇ ಆಫ್ ಪ್ರವೇಶ ಮಾಡಲು ಗೆಲುವು ಪಡೆಯಲೇ ಬೇಕಿದ್ದ ಪಂದ್ಯದಲ್ಲಿ ಚೆನ್ನೈ ತಂಡ ಸೋಲುಂಡಿದೆ. ಧೋನಿ ಬಳಗದ ವಿರುದ್ಧ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡಲ್ಲೂ ಉತ್ತಮ ಪ್ರದರ್ಶನ ತೋರಿದ ರಾಜಸ್ಥಾನ ರಾಯಲ್ಸ್ ತಂಡ 15 ಎಸೆತ ಬಾಕಿ ಇರುವಂತೆ 7 ವಿಕೆಟ್‍ಗಳ ಭರ್ಜರಿ ಗೆಲುವು ಪಡೆದುಕೊಂಡಿದೆ.

That’s that from Match 37.

A 97-run partnership between Buttler and Smith guide @rajasthanroyals to a 7-wicket win over #CSK.#Dream11IPL pic.twitter.com/B6hDh7HnGV

— IndianPremierLeague (@IPL) October 19, 2020

ಈ ಬಾರಿಯ ಟೂರ್ನಿಯಲ್ಲಿ ಚೆನ್ನೈ ತಂಡ ನೀಡಿದ್ದ ಅತ್ಯಂತ ಕಡಿಮೆ ಮೊತ್ತ 126 ರನ್ ಗಳ ಸುಲಭ ಗುರಿಯನ್ನು ಬೆನ್ನಟ್ಟಿದ್ದ ರಾಜಸ್ಥಾನ ರಾಯಲ್ಸ್ ತಂಡ 17.3 ಎಸೆತಗಳಲ್ಲಿ 3 ವಿಕೆಟ್ ಕಳೆದುಕೊಂಡು 126 ರನ್ ಗಳಿಸುವ ಮೂಲಕ ರಾಜಸ್ಥಾನ ಗೆಲುವು ಪಡೆಯಿತು.

ಇದರೊಂದಿಗೆ ಲೀಗ್ ಹಂತದ ಎರಡು ಪಂದ್ಯಗಳಲ್ಲಿ ರಾಜಸ್ಥಾನ ತಂಡ ಚೆನ್ನೈಗೆ ಸೋಲುಣಿಸಿತು. ಇದಕ್ಕೂ ಮುನ್ನ 2008ರ ಟೂರ್ನಿಯಲ್ಲಿ ರಾಜಸ್ಥಾನ ತಂಡ ಈ ಸಾಧನೆ ಮಾಡಿತ್ತು. ಬರೋಬ್ಬರಿ 13 ವರ್ಷಗಳ ಬಳಿಕ ಮತ್ತೆ ಸ್ಮಿತ್ ನಾಯಕತ್ವದಲ್ಲಿ ರಾಜಸ್ಥಾನ ತಂಡ ಅಪರೂಪದ ಸಾಧನೆ ಮಾಡಿದೆ. ಇತ್ತ ಇದೇ ಮೊದಲ ಬಾರಿಗೆ ಲೀಗ್ ಹಂತದ ಮೊದಲ 10 ಪಂದ್ಯಗಳ ಬಳಿಕ ಚೆನ್ನೈ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.

IPL oct 19

126 ರನ್ ಗಳ ಸುಲಭ ಗುರಿ ಬೆನ್ನಟ್ಟಿದ್ದ ರಾಜಸ್ಥಾನ ತಂಡ ಉತ್ತಮ ಆರಂಭವನ್ನು ಪಡೆಯಲಿಲ್ಲ. ತಂಡ 26 ರನ್ ಗಳಿಸುವ ವೇಳೆ 19 ರನ್ ಗಳಿಸಿದ್ದ ಸ್ಟೋಕ್ಸ್ ಚಹರ್ ಗೆ ವಿಕೆಟ್ ಒಪ್ಪಿಸಿದ್ದರು. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಆರ್ಡರ್ ನಲ್ಲಿ ಬಡ್ತಿ ಪಡೆದು ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಉತ್ತಪ್ಪ ಇಂದು ಕೇವಲ 4 ರನ್ ಗಳಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಕೂಡ ಬಂದಷ್ಟೇ ವೇಗದಲ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಇದರೊಂದಿಗೆ ರಾಜಸ್ಥಾನ ತಂಡ ಕೇವಲ 28 ರನ್ ಗಳಿಗೆ ಪ್ರಮುಖ 3 ವಿಕೆಟ್ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

RR 2

ಈ ಹಂತದಲ್ಲಿ ಒಂದಾದ ಸ್ಮಿತ್, ಬಟ್ಲರ್ ಜೋಡಿ 4ನೇ ವಿಕೆಟ್‍ಗೆ ಬರೋಬ್ಬರಿ 98 ರನ್ ಗಳ ಜೊತೆಯಾಟ ನೀಡಿ ತಂಡಕ್ಕೆ ಗೆಲುವಿನ ಕಾಣಿಕೆ ತಂದು ಕೊಡಲು ಯಶಸ್ವಿಯಾಗಿತ್ತು. ರಾಜಸ್ಥಾನ ಪರ 48 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಗಳೊಂದಿಗೆ 70 ರನ್ ಸಿಡಿಸಿ ಬಟ್ಲರ್ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಬಟ್ಲರ್ ಗೆ ಉತ್ತಮ ಸಾಥ್ ಕೊಟ್ಟ ನಾಯಕ ಸ್ಮಿತ್ 34 ಎಸೆತಗಳಲ್ಲಿ 26 ರನ್ ಗಳಿಸಿ ಅಜೇಯರಾಗಿ ಉಳಿದರು. ಚೆನ್ನೈ ಪರ ದೀಪಕ್ ಚಹರ್ 4 ಓವರ್ ಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದರೇ, ಹಜಲ್‌ವುಡ್ 1 ವಿಕೆಟ್ ಗಳಿಸಿದರು. ಇದನ್ನೂ ಓದಿ: ಐಪಿಎಲ್‍ನಲ್ಲಿ ಧೋನಿ ಐತಿಹಾಸಿಕ ದಾಖಲೆ

CSK DHONI

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ತಂಡ ಟಾಪ್ ಅರ್ಡರ್ ಆಟಗಾರರು ಮಿಂಚಲು ವಿಫಲರಾದ ಕಾರಣ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡ 125 ರನ್ ಗಳಷ್ಟೆ ಗಳಿಸಿತ್ತು. ಚೆನ್ನೈ ಪರ ಡುಪ್ಲೆಸಿಸ್ 10, ವ್ಯಾಟ್ಸನ್ 8, ಸ್ಯಾಮ್ ಕರ್ರನ್ 22 ರನ್ ಗಳಿಸಿ ನಿರಾಸೆ ಮೂಡಿಸಿದರು. ಸಿಎಸ್‍ಕೆ ತಂಡದ ಭರವಸೆಯ ಆಟಗಾರ ರಾಯುಡು 13 ರನ್ ಗಳಿಸಿ ತಿವಾಟಿಯಾಗೆ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ಧೋನಿ, ಜಡೇಜಾ ಜೋಡಿ ಅರ್ಧ ಶತಕದ ಜೊತೆಯಾಟ ನೀಡಿ ತಂಡ ರನ್ ವೇಗವನ್ನು ಹೆಚ್ಚಿಸುವ ಪ್ರಯತ್ನ ಮಾಡಿತ್ತು. ಧೋನಿ 28 ಎಸೆತಗಳಲ್ಲಿ 28 ರನ್ ಗಳಿಸಿದ್ದರು. ಉಳಿದಂತೆ ಜಡೇಜಾ 30 ಎಸೆತಗಳಲ್ಲಿ 35 ರನ್, ಜಾದವ್ 7 ಎಸೆತಗಳಲ್ಲಿ 4 ರನ್ ಗಳಿಸಿ ಅಜೇಯಾರಾಗಿ ಉಳಿದರು. ಚೆನ್ನೈ ವಿರುದ್ಧ ಉತ್ತಮ ಬೌಲಿಂಗ್ ದಾಳಿ ಮಾಡಿದ ಅರ್ಚರ್, ತ್ಯಾಗಿ, ಗೋಪಾಲ್ ಹಾಗೂ ತಿವಾಟಿಯಾ ತಲಾ 1 ವಿಕೆಟ್ ಪಡೆದರು. ಇದನ್ನೂ ಓದಿ: 2ನೇ ಸೂಪರ್ ಓವರಿನಲ್ಲಿ ಬುಮ್ರಾ ಬೌಲಿಂಗ್ ಮಾಡದಿರಲು ಕಾರಣವೇನು?

Dhoni jadeja 1

TAGGED:Chennai Super KingsIPL 2020ms dhoniPublic TVRajasthan Royalsಎಂಎಸ್ ಧೋನಿಐಪಿಎಲ್ 2020ಚೆನ್ನೈ ಸೂಪರ್ ಕಿಂಗ್ಸ್ಪಬ್ಲಿಕ್ ಟಿವಿರಾಜಸ್ಥಾನ ರಾಯಲ್ಸ್
Share This Article
Facebook Whatsapp Whatsapp Telegram

Cinema Updates

Ramya 2
ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುತ್ತೆ ಎಂದು ನಂಬಿದ್ದೇನೆ: ರಮ್ಯಾ
Cinema Karnataka Latest Main Post
Darshan Vijayalakshmi
ಥಾಯ್ಲೆಂಡ್‌ನಲ್ಲಿ ಮ್ಯಾಂಗೋ ಸ್ಟಿಕ್ಕಿ ರೈಸ್ ಸವಿದ ದರ್ಶನ್ ವಿಜಯಲಕ್ಷ್ಮಿ
Cinema Latest Sandalwood Top Stories
Darshan Pavithra
ದರ್ಶನ್‌-ಪವಿತ್ರಾ ಲಿವ್‌ ಇನ್‌ ರಿಲೇಷನ್‌ ಶಿಪ್‌ನಲ್ಲಿದ್ದರು: ಸರ್ಕಾರ ಪರ ವಕೀಲ
Bengaluru City Cinema Court Latest Main Post National Sandalwood
Darshan Court
ದರ್ಶನ್‌ ಜಾಮೀನು ಭವಿಷ್ಯ | ನಾವು ಹೈಕೋರ್ಟ್ ಮಾಡಿದ ತಪ್ಪು ಮಾಡಲ್ಲ, ತರಾತುರಿಯಲ್ಲಿ ಆದೇಶ ಕೊಡಲ್ಲ – ಸುಪ್ರೀಂ
Bengaluru City Cinema Court Latest Main Post National Sandalwood
Appu Cup League
ಅಪ್ಪು ಕಪ್ ಸೀಸನ್ 3; ಜರ್ಸಿ ಅನಾವರಣ
Bengaluru City Cinema Karnataka Latest Top Stories

You Might Also Like

Chikkamagaluru Suicide
Chikkamagaluru

ಮಗನ ಸಾವಿನಿಂದ ಮನನೊಂದ ತಾಯಿ – ಮೃತದೇಹ ಸಿಗುವ ಮುನ್ನವೇ ಕೆರೆಗೆ ಹಾರಿ ಆತ್ಮಹತ್ಯೆ

Public TV
By Public TV
11 minutes ago
Biklu Shiva
Bengaluru City

ಬಿಕ್ಲು ಶಿವ ಕೊಲೆ ಕೇಸ್‌ – ಮತ್ತೊಂದು ರಹಸ್ಯ ಸ್ಫೋಟ, ಕೊಲೆಯಾದ 15 ನಿಮಿಷಕ್ಕೆ ಎ1 ಜಗ್ಗ ಎಸ್ಕೇಪ್‌

Public TV
By Public TV
40 minutes ago
AI ಚಿತ್ರ
Latest

ಉಡುಪಿಯಲ್ಲಿ ಭಾರೀ ಮಳೆ – ಬೈಂದೂರು ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ

Public TV
By Public TV
59 minutes ago
human bridge punjab
Latest

ರಸ್ತೆ ಕುಸಿದು ಉಕ್ಕಿ ಹರಿದ ನೀರು – ಮಾನವ ಸೇತುವೆ ನಿರ್ಮಿಸಿ 35 ಶಾಲಾ ಮಕ್ಕಳನ್ನು ರಸ್ತೆ ದಾಟಿಸಿದ ಗ್ರಾಮಸ್ಥರು

Public TV
By Public TV
1 hour ago
Amit Shah 1
Latest

ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ 6 ತಿಂಗಳು ವಿಸ್ತರಣೆ – ಸದನದಲ್ಲಿ ಅನುಮೋದನೆ

Public TV
By Public TV
1 hour ago
Digital Arrest 2
Crime

Digital Arrest | ಸಿಬಿಐ ಅಧಿಕಾರಿ ಸೋಗಿನಲ್ಲಿ ಕರೆ – ಬ್ಯಾಂಕ್‌ ಅಧಿಕಾರಿಗೆ 56 ಲಕ್ಷಕ್ಕೂ ಅಧಿಕ ಹಣ ವಂಚನೆ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?