– 6 ದಿನಗಳ ಮತ್ತೆ ಅಪಹರಿಸಿ ರೇಪ್
– ಮಾರ್ಗ ಮಧ್ಯೆ ಟ್ರಕ್ ಚಾಲಕರಿಂದಲೂ ಅತ್ಯಾಚಾರ
ಭೋಪಾಲ್: ಹದಿಮೂರು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ಉಮರಿಯಾನಲ್ಲಿ ಬೆಳಕಿಗೆ ಬಂದಿದೆ. ಮಧ್ಯ ಪ್ರದೇಶದ ಸಿಎಂ ಶಿವರಾಜ್ ಸಿಂಗ್ ನೇತೃತ್ವದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯ ವಿಚಾರವಾಗಿ ಜನರಿಗೆ ಜಾಗೃತಿ ಮೂಡಿಸಲು ಮಧ್ಯ ಪ್ರದೇಶ ಸರ್ಕಾರ ರಾಜ್ಯಾದ್ಯಂತ 15 ದಿನಗಳ ಸುಮ್ಮನ್ ಅಭಿಯಾನ ಜಾರಿಗೊಳಿಸಿದೆ. ಇದೇ ಸಮಯದಲ್ಲಿ ಈ ಘಟನೆ ನಡೆದಿದೆ.
ಅಪ್ರಾಪ್ತ ಬಾಲಕಿಯನ್ನು ಜನವರಿ 4 ರಂದು ಅಪಹರಿಸಿದ ಆರೋಪಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆತನ 6 ಮಂದಿ ಸ್ನೇಹಿತರು ಬಾಲಕಿ ಮೇಲೆ 2 ದಿನಗಳವೆಗೆ ಅತ್ಯಾಚಾರ ನಡೆಸಿದ್ದಾರೆ. ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿ ಬಾಲಕಿಯನ್ನು ಜನವರಿ 5ರಂದು ಕಳುಹಿಸಿದ್ದಾರೆ. ಪುನಃ 6 ದಿನಗಳ ಬಳಿಕ ಮತ್ತೆ ಬಾಲಕಿಯನ್ನು ಅಪಹರಿಸಿ ಕಾಡಿನಲ್ಲಿ ಬಂಧಿಸಿ ಈ ಹಿಂದೆ ಅತ್ಯಾಚಾರ ಎಸಗಿದ್ದ 7 ಮಂದಿ ಒಬ್ಬರ ನಂತರ ಒಬ್ಬರು ಅತ್ಯಾಚಾರ ನಡೆಸಿದ್ದಾರೆ.
ಬಾಲಕಿ ಮನೆಗೆ ತೆರಳುವಾಗ ಸಮಯದಲ್ಲಿ ಮತ್ತೆ ಮೂವರು ಟ್ರಕ್ ಚಾಲಕರು ಬಾಲಕಿಯನ್ನು ಅಪಹರಿಸಿ ರಸ್ತೆಬದಿಯ ಉಪಹಾರ ಗೃಹವೊಂದರಲ್ಲಿ ಅತ್ಯಾಚಾರ ನಡೆಸಿದ್ದಾರೆ. ಕೊನೆಗೆ ಬಾಲಕಿ ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಹಿಂದಿರುಗುವಲ್ಲಿ ಯಶಸ್ವಿಯಾದಳು.
ಪ್ರಕರಣ ಕುರಿತಂತೆ ಪೊಲೀಸರು ಐಪಿಸಿ ಸೆಕ್ಷನ್ ಮತ್ತು ಪೋಕ್ಸೋ ಕಾಯಿದೆ ಅಡಿ ದೂರು ದಾಖಲಿಸಿಕೊಂಡಿದ್ದು, ಇಲ್ಲಿಯವರೆಗೂ ಆರು ಆರೋಪಿಗಳನ್ನು ಬಂಧಿಸಿದ್ದು, ಇತರ ಆರೋಪಿಗಳನ್ನು ಹಿಡಿದು ಬಂಧಿಸುವುದಾಗಿ ತಿಳಿಸಿದ್ದಾರೆ.