ಉಡುಪಿ: ಉಡುಪಿಯ ಮಲ್ಪೆಯಲ್ಲಿ ಗಜ ಗಾತ್ರದ ಮೀನು ಬಲೆಗೆ ಬಿದ್ದಿದೆ. ಡೀಪ್ ಸೀ ಫಿಶ್ಶಿಂಗ್ ಮಾಡುವ ದಿವ್ಯಾಂಶಿ ಹೆಸರಿನ ಬೋಟಿಗೆ ಈ ಮೀನು ಸಿಕ್ಕಿದೆ. ಬಲೆಗೆ ಸಿಕ್ಕ ತೊರಕೆ ಜಾತಿಯ ಮೀನು ಬರೋಬ್ಬರಿ ಸಾವಿರ ಕೆ.ಜಿಗೂ ಅಧಿಕ ಭಾರವಿದೆ.
ನೋಡುವುದಕ್ಕೆ ಆನೆ ಮರಿಯಂತೆ ಕಾಣುವ ತೊರಕೆ ಮೀನು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಈ ಗಾತ್ರದ ಮೀನು ಸಿಗುವುದು ಬಲು ಅಪರೂಪವಂತೆ. ಮಿಥುನ್ ಕುಂದರ್ ಅವರ ಬೋಟಿನಿಂದ ಮೀನುಗಾರಿಕೆ ನಡೆಸುತ್ತಿದ್ದಾಗ, ಬಲೆಗೆ ಈ ಗಜಗಾತ್ರದ ಮೀನು ಸಿಕ್ಕಿದೆ. ಬಳಿಕ ಇದನ್ನು ದಡಕ್ಕೆ ಎಳೆಯಲು ಹರಸಾಹಸ ಪಡಬೇಕಾಯಿತು, ಕ್ರೈನ್ ಸಹಾಯದಿಂದ ಎತ್ತಿ ಮಲ್ಪೆ ಬಂದರಿಗೆ ಸಾಗಿಸಲಾಯಿತು.
Advertisement
Advertisement
ಉಡುಪಿಯ ಮಾರುಕಟ್ಟೆಗೆ ಈ ಮೀನು ಸೇಲ್ ಆಗಿದೆ. ಈ ಒಂದು ಮೀನಿನ ಬೆಲೆ ಅಂದಾಜು 60 ಸಾವಿರ ರೂ. ಇರಬಹುದು ಎನ್ನಲಾಗಿದೆ. ಈ ಮೀನಿಂದ ಸುಮಾರು 80 ಸಾವಿರ ರೂ. ಗಳಿಸಬಹುದು. ಈ ಗಜಗಾತ್ರದ ಮೀನು ಸಾವಿರಾರು ಮತ್ಸ್ಯಪ್ರಿಯರ ಹೊಟ್ಟೆ ಸೇರಿ ಸಂತೃಪ್ತಿ ನೀಡುವುದಂತೂ ಖಂಡಿತ. ಅದರಲ್ಲೂ ತೊರಕೆ ಮೀನು ಸಿಕ್ಕಾಪಟ್ಟೆ ಟೇಸ್ಟಿ ಆಗಿರುವುದರಿಂದ ಜನ ಮುಗಿಬಿದ್ದು ಮೀನಿನ ಮಾಂಸ ಖರೀದಿ ಮಾಡಿದ್ದಾರಂತೆ.
Advertisement
ಮಾಮೂಲಿಯಾಗಿ 5 ರಿಂದ 10 ಕೆಜಿವರೆಗಿನ ಮೀನು ಬಲೆಗೆ ಬೀಳುತ್ತೆ. ಸಾಗರದಾಳದಲ್ಲಿ ಹಾಕಿದ ಬಲೆಗೆ ದೈತ್ಯ ಮೀನು ಬಿದ್ದಿದ್ದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಈ ಮೀನು ಖರೀದಿಗೆ ಭಾರೀ ಹೊತ್ತು ಬಿಡ್ಡಿಂಗ್ ನಡೆದಿದೆ ಎಂಬ ಮಾಹಿತಿಯನ್ನು ಸ್ಥಳೀಯರು ನೀಡಿದ್ದಾರೆ.