ಲಕ್ನೋ: ಅತ್ಯಾಚಾರಕ್ಕೊಳಗಾಗಿದ್ದ ಗಾಜಿಯಾಬಾದ್‍ನ (Ghaziabad) 12 ವರ್ಷದ ಬಾಲಕಿ ಮೆಡಿಕಲ್ ಕಾಲೇಜಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಗಾಜಿಯಾಬಾದ್‍ನ ಖೋಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಬಾಲಕಿಯನ್ನು ಅಕ್ಟೋಬರ್ 1 ರಂದು ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ಇದೀಗ ಸಿ-ಸೆಕ್ಷನ್‍ನಲ್ಲಿ ಬಾಲಕಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಆರ್.ಕೆ.ಗುಪ್ತಾ ತಿಳಿಸಿದ್ದಾರೆ.
Advertisement
Advertisement
ಬಾಲಕಿ 7ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯಾಗಿದ್ದು, ಅವರ ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುತ್ತಿದ್ದ 19 ವರ್ಷದ ಯುವಕ ಆಕೆಗೆ ಬೆದರಿಸಿ ಹಲವು ಬಾರಿ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ತಮ್ಮ ಮಾತು ಕೇಳದೇ ಹೋದರೆ ನಿನ್ನ ತಂದೆ ತಾಯಿಯನ್ನು ಕೊಲ್ಲುತ್ತೇವೆ ಎಂದು ಬೆದರಿಸಿ 21 ವರ್ಷದ ಆರೋಪಿ ಸಹೋದರ ಕೂಡ ಅತ್ಯಾಚಾರ ವೆಸಗಿದ್ದಾನೆ ಎಂದು ಕುಟುಂಬಸ್ಥರು ಪೊಲೀಸರಿಗೆ ಹೇಳಿದ್ದಾರೆ.
Advertisement
Advertisement
ಇಷ್ಟಲ್ಲದೇ ಇಬ್ಬರು ಸಹೋದರರು ಸೇರಿಕೊಂಡು ಹಣಕ್ಕಾಗಿ ಬಾಲಕಿಯನ್ನು ಇನ್ನೊಬ್ಬರಿಗೂ ಹಸ್ತಾಂತರಿಸಿದ್ದಾರೆ. ಇದರಿಂದ ಲೈಂಗಿಕ ಲಾಭವನ್ನು ಕೂಡ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ಈ ವಿಚಾರ ತಿಳಿದು ಆಕೆಯ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಮಹಿಳೆಯರಿಂದ ಸೆಕ್ಯೂರಿಟಿ ಗಾರ್ಡ್ ಮೇಲೆ ದೌರ್ಜನ್ಯ
ಬಾಲಕಿ ಗರ್ಭಿಣಿಯಾದಾಗ ಆಕೆಗೆ ಯಾವುದೇ ಗುಣಲಕ್ಷಣಗಳು ಕಾಣಿಸಲಿಲ್ಲ ಮತ್ತು ಹೆರಿಗೆ ಸಮಯದವರೆಗೂ ಸಾಮಾನ್ಯವಾಗಿಯೇ ಇದ್ದಳು. ಆದರೆ ಆಸ್ಪತ್ರೆಗೆ ಕರೆದೊಯ್ದ ನಂತರ ತನ್ನ ಕಿಡ್ನಿಯಲ್ಲಿ ಕಲ್ಲು ಇದೆ ಮತ್ತು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಳು. ಆದರೀಗ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ಸಂಬಂಧ ಕುಟುಂಬಸ್ಥರು ಇಬ್ಬರು ಸಹೋದರರು ಮತ್ತು 35 ವರ್ಷದ ವ್ಯಕ್ತಿಯ ವಿರುದ್ಧ ಸೆಪ್ಟೆಂಬರ್ 5 ರಂದೇ ದೂರು ದಾಖಲಿಸಿದ್ದು, ಇದೀಗ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಖೋಡಾ ಪೊಲೀಸ್ ಠಾಣೆಯ (Khoda police station) ಇನ್ಸ್‌ಸ್ಪೆಕ್ಟರ್ ಅಲ್ತಾಫ್ ಅನ್ಸಾರಿ ಹೇಳಿದ್ದಾರೆ. ಇದನ್ನೂ ಓದಿ: ಸ್ವಚ್ಛ ನಗರ ಪಟ್ಟಿಯಲ್ಲಿ ಬೆಂಗಳೂರು ಲಾಸ್ಟ್ – ಷರತ್ತಿನೊಂದಿಗೆ ನೂತನ ಕಸದ ಟೆಂಡರ್‌ಗೆ BBMP ಸಿದ್ಧತೆ