ಬೆಂಗಳೂರು: ತೆಲೆಸ್ಸೇಮಿಯಾ ಬಾಧಿತ ಬಾಲಕನನ್ನು ವಿವಿ ಪುರಂ ಪೊಲೀಸರು ಒಂದು ದಿನದ ಪೊಲೀಸ್ ಇನ್ಸ್ ಪೆಕ್ಟರ್ ಮಾಡಿ ಬಾಲಕನ ಆಸೆಯನ್ನು ಈಡೇರಿಸಿದ ಘಟನೆ ಬೆಂಗಳೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಶಶಾಂಕ್(12) ತೆಲೆಸ್ಸೇಮಿಯಾ ರೋಗದಿಂದ ಬಳಲ್ತಿರೋ ಬಾಲಕ. ತೆಲೆಸ್ಸೇಮಿಯಾ ಅನ್ನೋದು ರಕ್ತ ಸಂಬಂಧಿತ ಕಾಯಿಲೆಯಾಗಿದ್ದು, ಈ ಕಾಯಿಲೆ ಉಳ್ಳವರಿಗೆ ಮೂರು ತಿಂಗಳಿಗೊಮ್ಮೆ ಹಳೆ ರಕ್ತ ಬದಲಾಯಿಸಿ ಹೊಸ ರಕ್ತ ನೀಡಬೇಕು.
Advertisement
ಶಶಾಂಕ್ ಮೂಲತಃ ಚಿಂತಾಮಣಿ ಮೂಲದವನಾಗಿದ್ದು, ಸದ್ಯ ವಾಣಿವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಶಶಾಂಕ್ ಪೊಲೀಸ್ ಇನ್ಸ್ ಪೆಕ್ಟರ್ ಆಗುವ ಕನಸು ಕಂಡಿದ್ದನು. ಸದ್ಯ ಶಶಾಂಕ್ ಆಸೆಯನ್ನು ವಿವಿ ಪುರಂ ಪೊಲೀಸ್ ಇನ್ಸ್ ಪೆಕ್ಟರ್ ಟಿಡಿ ರಾಜು ಈಡೇರಿಸಿದ್ದಾರೆ.
Advertisement
ಸದ್ಯ ಶಶಾಂಕ್ ಒಂದು ದಿನದ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದಾನೆ. ಶಶಾಂಕ್ ಇನ್ಸ್ ಪೆಕ್ಟರ್ ಪೋಷಾಕು ಧರಿಸಿ ಇನ್ಸ್ ಪೆಕ್ಟರ್ ಚೇರ್ ನಲ್ಲಿ ಕುಳಿತು ತನ್ನ ಆಸೆಯನ್ನು ಈಡೇರಿಸಿಕೊಂಡಿದ್ದಾನೆ. ಅಲ್ಲದೇ ವಿವಿ ಪುರಂ ಪೊಲೀಸರು ಶಶಾಂಕ್ ಗೆ ನಕಲಿ ಗನ್ ಹಾಗೂ ವಾಕಿಟಾಕಿ ಕೂಡ ನೀಡಿದ್ದರು. ಸದ್ಯ ಬಾಲಕ ಶಶಾಂಕ್ ಒಂದು ದಿನದ ಇನ್ಸ್ ಪೆಕ್ಟರ್ ಆಗಿ ಖುಷಿಪಟ್ಟಿದ್ದಾನೆ.