ಬೆಂಗಳೂರು: ಕೊಲೆ ಪ್ರಯತ್ನ ಮಾಡಿದ್ದ 12 ಜನ ಮಂಗಳಮುಖಿಯರನ್ನು ಸಿಲಿಕಾನ್ ಸಿಟಿಯ ಆರ್.ಎಂ.ಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.
ಸುಮಿತ್ರ, ರೇಣುಕಾ ಮತ್ತು ಬಬ್ಲು ಸೇರಿ 12 ಜನ ಮಂಗಳಮುಖಿಯರನ್ನು ಪೊಲೀಸರು ಬಂಧಿಸಿದ್ದಾರೆ. ಈ 12 ಜನ ಮಂಗಳಮುಖಿಯರ ಗ್ಯಾಂಗ್ ವಾಣಿಶ್ರೀ ಮತ್ತು ಪ್ರೀತಿ ಎಂಬ ಮಂಗಳಮುಖಿಯರ ಗ್ಯಾಂಗ್ ಮೇಲೆ ಆಟ್ಯಾಕ್ ಮಾಡಿ ಕೊಲೆ ಮಾಡಲು ಪ್ರಯತ್ನ ಮಾಡಿದ್ದರು.
ದೀಪಾವಳಿ ಹಬ್ಬದ ಕಲೆಕ್ಷನ್ ವಿಚಾರವಾಗಿ ಶ್ರೀರಾಂಪುರದಿಂದ ಆರ್.ಎಂ.ಸಿ ಯಾರ್ಡ್ ಗೆ ಬಂದಿದ್ದ ಸುಮಿತ್ರ ಗುಂಪು ಜನರ ಬಳಿ ದಬ್ಬಾಳಿಕೆಯಿಂದ ಹೆಚ್ಚಿನ ಹಣ ಕಲೆಕ್ಷನ್ ಮಾಡುತ್ತಿದ್ದರು. ಇದನ್ನು ತಿಳಿದ ವಾಣಿಶ್ರೀ ಮತ್ತು ಗುಂಪು ನಮ್ಮ ಏರಿಯಾಗೆ ಬಂದು ಹಣ ಕಲೆಕ್ಟ್ ಮಾಡಬೇಡಿ ಎಂದಿದ್ದರು. ಈ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು.
ಈ ಘಟನೆಯ ನಂತರ ವಾಪಾಸ್ ಹೋದ ಸುಮಿತ್ರ ಟೀಂ ಮತ್ತೆ ಅವರ ಏರಿಯಾದಿಂದ ಗುಂಪಿನ ಸದಸ್ಯರನ್ನು ಕರೆದುಕೊಂಡು ಬಂದು ವಾಣಿಶ್ರೀ ಮತ್ತು ಪ್ರೀತಿ ಇದ್ದ ಜಾಗಕ್ಕೆ ಹೋಗಿ ಹಲ್ಲೆ ಮಾಡಿ ಚಾಕುವಿನಿಂದ ಕೊಲೆಗೆ ಯತ್ನಿಸಿದ್ದರು. ಬಳಿಕ ವಾಣಿಶ್ರೀ ಗುಂಪಿನ ಸದಸ್ಯರ ಕೂದಲು ಕಟ್ ಮಾಡಿ ವಿಕೃತಿ ಮೆರೆದು ಎಸ್ಕೇಪ್ ಆಗಿದ್ದರು.
ಈ ವಿಚಾರವಾಗಿ ವಾಣಿಶ್ರೀ ಮತ್ತು ಗುಂಪು ನಮ್ಮ ಮೇಲೆ ಕೊಲೆ ಪ್ರಯತ್ನ ನಡೆದಿದೆ ಎಂದು ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ವಿಚಾರವಾಗಿ 12 ಜನ ಮಂಗಳಮುಖಿಯರನ್ನು ಆರ್.ಎಂ.ಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.