ಬೆಂಗಳೂರು: ಕ್ರಿಕೆಟ್ ಟೂರ್ನಮೆಂಟ್ ಗಳಲ್ಲಿ (Cricket Tournament) ಆಡುವ ಅವಕಾಶ ಕೊಡಿಸುವುದಾಗಿ ಕೋಚ್ ಒಬ್ಬ ವಂಚನೆ ಮಾಡಿರುವ ಪ್ರಕರಣವೊಂದು ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ಗೌರವ್ ದಿಮಾನ್, ವಂಚನೆ ಮಾಡಿರುವ ಬೆಂಗಳೂರಿನ ರೋರಾ ಕ್ರಿಕೆಟ್ ಅಕಾಡೆಮಿ (Roar Cricket Academy) ಕೋಚ್. ಈತ ಅದೇ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ಯುವಕನಿಗೆ ಆಮಿಷ ಒಡ್ಡಿ 12 ಲಕ್ಷ ರೂ. ವಂಚಿಸಿದ್ದಾನೆ.
Advertisement
Advertisement
ನಡೆದಿದ್ದೇನು..?: ಕೋಚ್ ಗೌರವ್ ದಿಮಾನ್, ಯುವಕನ ಪೋಷಕರನ್ನ ಪರಿಚಯ ಮಾಡಿಕೊಂಡಿದ್ದ. ಬಳಿಕ ಕೆಲವು ಟೂರ್ನಮೆಂಟ್ ಗಳಲ್ಲಿ ಮಗನಿಗೆ ಆಡಲು ಅವಕಾಶ ಕೊಡಿಸುವುದಾಗಿ ಆಮೀಷ ಒಡ್ಡಿದ್ದಾನೆ. ಹಾಗೆ ಈ ಹಿಂದೆ ಆಡುತ್ತಿದ್ದ ಕ್ಲಬ್ ಗೆ ಆಡದಂತೆ ಷರತ್ತು ಹಾಕಿದ್ದ. ಬಳಿಕ ಟೂರ್ನಮೆಂಟ್ ಗಳಲ್ಲಿ ಆಡಲು ಒಳ್ಳೆ ಬ್ಯಾಟ್ ಗಳು, ತರಬೇತಿ ನೀಡುವುದಾಗಿ ಹೇಳಿದ್ದ. ಇದಕ್ಕಾಗಿ ಯುವಕನ ಪೋಷಕರ ಬಳಿ ಹಂತ ಹಂತವಾಗಿ 12.23 ಲಕ್ಷ ರೂ. ಪಡೆದಿದ್ದ. ಆದರೆ ಯುವಕನಿಗೆ ಯಾವುದೇ ಟೂರ್ನಮೆಂಟ್ ಗಳಲ್ಲಿ ಅವಕಾಶವಾಗಲಿ, ಕ್ರಿಕೆಟ್ ಐಟಂಗಳನ್ನ ಕೊಡಿಸದೇ ವಂಚನೆ ಮಾಡಿದ್ದಾನೆ.
Advertisement
Advertisement
ಈ ಬಗ್ಗೆ ಕೋಚ್ ಗೌರವ್ ದಿಮಾನ್ ಹಣ ವಾಪಸ್ ಕೇಳಿದಾಗ ಬೆದರಿಕೆ ಹಾಕಿದ್ದಾನೆ. ಜೊತೆಗೆ ಮಗನ ಭವಿಷ್ಯ ಹಾಳು ಮಾಡುವುದಾಗಿ ಹಾಗೂ ಕೊಲೆ ಮಾಡಿಸುವುದಾಗಿ ಕೋಚ್ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಸಿಂಹಗಳಿಗೆ ಅಕ್ಬರ್-ಸೀತಾ ನಾಮಕರಣ ಮಾಡಿದ್ದ ಅಧಿಕಾರಿ ಅಮಾನತು
ಸದ್ಯ ಪ್ರಕರಣ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.