ಕೀವ್/ಮಾಸ್ಕೋ: ಇನ್ಮುಂದೆ ಉಕ್ರೇನ್ ವಿರುದ್ಧ ಯುದ್ಧ (Russia Ukraine War)) ಮಾಡುವುದಿಲ್ಲ, ಮಾತುಕತೆಗೆ ಸಿದ್ಧರಿದ್ದೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಹೇಳಿದ ನಂತರವೂ ರಷ್ಯಾ ಅಟ್ಟಹಾಸ ಮುಂದುವರಿದಿದೆ.
Russia’s brutal war against ????????directly impacts Moldova again. ????????border police found rocket fragments near Larga village in northern ????????. We strongly condemn today’s intensified attacks of Russia & stand with those who lost loved ones in Dnipro & across ????????. Peace must prevail. pic.twitter.com/JhlYNExoiG
— Maia Sandu (@sandumaiamd) January 14, 2023
Advertisement
ಉಕ್ರೇನಿನ ಡ್ನಿಪ್ರೊ ನಗರದ 9 ಅಂತಸ್ತಿನ ಕಟ್ಟಡದ ಮೇಲೆ ಮತ್ತೆ ಭೀಕರ ಕ್ಷಿಪಣಿ ದಾಳಿ (Missile Strike) ನಡೆಸಿದ್ದು, ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಈಗಾಗಲೇ ಸತತ ದಾಳಿಯಿಂದ ರಷ್ಯಾ, ಉಕ್ರೇನಿನ ಮೂಲ ಸೌಕರ್ಯಗಳನ್ನ (Ukraine Infrastructure) ನಾಶಪಡಿಸಿದೆ. ಇದೀಗ ದಾಳಿಯ ಹೊಸ ಅಲೆ ಮುಂದುವರಿಸಿದೆ. ಇದನ್ನೂ ಓದಿ: ಸಾನ್ಯ ಜೊತೆ ರೂಪೇಶ್ ಶೆಟ್ಟಿ ಮೀಟಿಂಗ್: ಮದುವೆ ಬಗ್ಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ
Advertisement
Eternal memory to all whose lives were taken by ???????? terror! The world must stop evil. Debris clearance in Dnipro continues. All services are working. We're fighting for every person, every life. We'll find everyone involved in terror. Everyone will bear responsibility. Utmost. pic.twitter.com/zG4rIF8nzC
— Володимир Зеленський (@ZelenskyyUa) January 14, 2023
Advertisement
ಶನಿವಾರ ತಡರಾತ್ರಿ ನಡೆದ ದಾಳಿಯಲ್ಲಿ ಡ್ನಿಪ್ರೊ ನಗರ ಹೊರತುಪಡಿಸಿ, ಕೀವ್ ಹಾಗೂ ಇತರ ಸ್ಥಳಗಳಲ್ಲಿ ನಿರ್ಣಾಯಕ ಮೂಲ ಸೌಕರ್ಯಗಳನ್ನು ದಮನ ಮಾಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಉಕ್ರೇನ್ನಲ್ಲಿ ವಿದ್ಯುತ್, ನೀರು ಹಾಗೂ ಮೂಲ ಸೌಕರ್ಯಗಳ ಕೊರತೆ ಎದುರಾಗಲಿದೆ ಎಂದು ಉಕ್ರೇನಿನ ಇಂಧನ ಸಚಿವರು ಎಚ್ಚರಿಸಿದ್ದಾರೆ.
Advertisement
ರಷ್ಯಾದ ದಾಳಿಯಲ್ಲಿ ಉಕ್ಕಿನ ತಯಾರಿಕಾ ನಗರವಾದ ಕ್ರಿವಿ ರಿಹ್ನಲ್ಲಿ ಒಬ್ಬರು ಸಾವನ್ನಪ್ಪಿದ್ದು ಮತ್ತೊಬ್ಬರು ಗಾಯಗೊಂಡಿದ್ದರು. ಅಲ್ಲದೇ ಝಲೆನ್ಸ್ಕಿ (Volodymyr Zelenskyy) ತವರು ನಗರದಲ್ಲಿ 6 ಮನೆಗಳು ಹಾನಿಗೊಳಗಾದವು.
ಇದೀಗ ಡ್ನಿಪ್ರೊ ಅಪಾರ್ಟ್ಮೆಂಟ್ ದಾಳಿಯಲ್ಲಿ ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಅದಕ್ಕಾಗಿ ಉಕ್ರೇನ್ ತನ್ನ ನಾಗರಿಕರ ಮೇಲಿನ ದಾಳಿ ಕೊನೆಗೊಳಿಸಲು ಹೆಚ್ಚಿನ ಶಸ್ತ್ರಾಸ್ತ್ರಗಳಿಗಾಗಿ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಗೆ ಮನವಿ ಮಾಡಿದೆ. ಇದನ್ನೂ ಓದಿ: Exclusive- ‘ಮೇರುನಟ’ ವಿಷ್ಣುವರ್ಧನ್ ಸಮಾಧಿ ನೆಲಸಮ ಆಗತ್ತಾ? ಆತಂಕ ಹೊರಹಾಕಿದ ಅಭಿಮಾನಿ
ಇತ್ತೀಚೆಗೆ “ನಮ್ಮ ಕ್ಷಿಪಣಿಗಳು 1,300ಕ್ಕೂ ಹೆಚ್ಚು ಮಂದಿ ಇದ್ದ ಉಕ್ರೇನಿಯನ್ ಸೈನ್ಯದ ಕ್ರಾಮಾಟೋರ್ಸ್ನಲ್ಲಿರುವ ಎರಡು ಬ್ಯಾರಲ್ಗಳಿಗೆ ಅಪ್ಪಳಿಸಿದ್ದು, ಅವರಲ್ಲಿ 600 ಮಂದಿ ಉಕ್ರೇನ್ ಸೈನಿಕರು ಸಾವನ್ನಪ್ಪಿದ್ದಾರೆ” ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ಹೇಳಿಕೆ ನೀಡಿದ್ದರು. ಆದರೆ ಉಕ್ರೇನ್ ಸೈನಿಕರು ಈ ದಾಳಿಯಲ್ಲಿ ಸಾವನ್ನಪ್ಪಿಲ್ಲ ಎಂದು ಹೇಳಿ ಆರೋಪ ತಳ್ಳಿಹಾಕಿತ್ತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k