ಮಾಸ್ಕೋ: ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾ ಸೇನೆ (Russian Army) ಪರವಾಗಿ ಹೋರಾಡುತ್ತಿದ್ದ 12 ಮಂದಿ ಭಾರತೀಯರು (Indians) ಸಾವನ್ನಪ್ಪಿದ್ದು, 16 ಮಂದಿ ನಾಪತ್ತೆಯಾಗಿದ್ದಾರೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಶುಕ್ರವಾರ ತಿಳಿಸಿದೆ.
ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal) ಅವರಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇಂದಿನವರೆಗೆ ರಷ್ಯಾ ಸೇನೆಯಲ್ಲಿ ಒಟ್ಟು 126 ಮಂದಿ ಭಾರತೀಯರು ಸೇವೆ ಸಲ್ಲಿಸುತ್ತಿದ್ದರು. ಈ ಪೈಕಿ 12 ಮಂದಿ ಸಾವನ್ನಪ್ಪಿದ್ದಾರೆ. 96 ಮಂದಿ ರಷ್ಯಾದ ಸಶಸ್ತ್ರ ಪಡೆಗಳಿಂದ ಬಿಡುಗಡೆಯಾಗಿದ್ದು, ಭಾರತಕ್ಕೆ ಮರಳಿದ್ದಾರೆ ಎಂದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 2027ರ ವೇಳೆಗೆ ಮೈಸೂರು-ಕುಶಾಲನಗರ 4 ಪಥದ ರಸ್ತೆ ಕಾಮಗಾರಿ ಪೂರ್ಣ – ಯದುವೀರ್
ಅಲ್ಲದೇ 18 ಮಂದಿ ರಷ್ಯಾ ಸೇನೆಯಲ್ಲಿ ಉಳಿದುಕೊಂಡಿದ್ದು, ಈ ಪೈಕಿ 16 ಮಂದಿ ಎಲ್ಲಿದ್ದಾರೆ ಅನ್ನೋ ಮಾಹಿತಿ ತಿಳಿದಿಲ್ಲ. ರಷ್ಯಾದ ಸೇನಾಧಿಕಾರಿಗಳು ಅವರು ಕಾಣೆಯಾಗಿರುವುದಾಗಿ ತಿಳಿಸಿದ್ದಾರೆ. ಹಾಗಾಗಿ ಉಳಿದ ಭಾರತೀಯರನ್ನ ಶೀಘ್ರವೇ ಭಾರತಕ್ಕೆ ಕಳುಹಿಸುವಂತೆ ಹೇಳಿದ್ದೇವೆ ಎಂದು ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಇದನ್ನೂ ಓದಿ: Delhi Poll | ಗರ್ಭಿಣಿಯರಿಗೆ 21,000 ರೂ., ಪ್ರತಿ ಮಹಿಳೆಗೆ 2,500 ರೂ., 500 ರೂ.ಗೆ ಗ್ಯಾಸ್ ಸಿಲಿಂಡರ್ – ಬಿಜೆಪಿ ʻಸಂಕಲ್ಪ ಪತ್ರʼ ಬಿಡುಗಡೆ