ರಾಯ್ ಪುರ್: ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯಲ್ಲಿ ಸೋಮವಾರ ನಕ್ಸಲರು ನಡೆಸಿದ ದಾಳಿಯಲ್ಲಿ 24 ಮಂದಿ ಸಿಆರ್‍ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.
ಬುರ್ಕಾಪಾಲ್ ಮತ್ತು ಛಿಂಟಾಗುಫಾ ಪ್ರದೇಶದ ನಡುವೆ ಯೋಧರು ಮತ್ತು ನಕ್ಸಲರ ನಡುವೆ ಗುಂಡಿನ ದಾಳಿ ನಡೆದಿತ್ತು. ಮಧ್ಯಾಹ್ನ ನಡೆದ ಈ ಚಕಮಕಿಯಲ್ಲಿ 24 ಮಂದಿ ಯೋಧರು ಪ್ರಾಣತ್ಯಾಗ ಮಾಡಿದ್ದಾರೆ. ಘಟನೆಯಲ್ಲಿ ಆರು ಮಂದಿ ಸಿಆರ್ ಪಿಎಫ್ ಯೋಧರು ಗಾಯಗೊಂಡಿದ್ದಾರೆ.
Advertisement
ಘಟನಾ ಸ್ಥಳಕ್ಕೆ ಗಾಯಗೊಂಡವರನ್ನು ಕರೆತರಲು ಹೆಲಿಕಾಪ್ಟರ್ ಅನ್ನು ರವಾನಿಸಲಾಗಿದ್ದು, ಎನ್‍ಕೌಂಟರ್ ಕಾರ್ಯಾಚರಣೆ ಈಗಲೂ ಮುಂದುವರಿಯುತ್ತಿದೆ.
Advertisement
ಸಿಆರ್‍ಪಿಎಫ್ ಯೋಧರು ಇಲ್ಲಿನ ಅರಣ್ಯದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ನಕ್ಸಲರು ಯೋಧರ ಮೇಲೆ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
Jawans injured in CRPF-Naxals encounter in Chhattisgarh's Sukma shifted to hospital in Raipur. pic.twitter.com/6x5zZKANVy
— ANI (@ANI_news) April 24, 2017
Advertisement
Sukma attack: Chhattisgarh CM has cancelled his engagements in Delhi and has rushed for Raipur where he will hold a meeting later today
— ANI (@ANI_news) April 24, 2017
Chhattisgarh: Bastar IG Vivekanand Sinha and DIG Sunderraj leave for Sukma
— ANI (@ANI_news) April 24, 2017