ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾ ಕುರಿತಾದ ಸುದ್ದಿಗಳು ಕ್ಷಣಕ್ಕೊಂದು ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿವೆ. ಮಾ.17 ರಂದು ಅಪ್ಪು ಹುಟ್ಟಿದ ದಿನ. ಅಂದೇ ಈ ಸಿನಿಮಾ ರಿಲೀಸ್ ಆಗುತ್ತಿದೆ. ಜತೆಗೆ ಪುನೀತ್ ನಾಯಕನಾಗಿ ನಟಿಸಿರುವ ಕೊನೆಯ ಚಿತ್ರವಿದು. ಅಲ್ಲದೇ, ಮೂವರು ಸಹೋದರರು ಇದೇ ಮೊದಲ ಬಾರಿಗೆ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಚಿತ್ರಕ್ಕೆ ಸಾಕಷ್ಟು ಬೇಡಿಕೆ ಬರುತ್ತಿದೆ. ಇದನ್ನೂ ಓದಿ : ಸೋನಾಕ್ಷಿ ಸಿನ್ಹಾ ಮೋಸ ಮಾಡಿದ್ರಾ? ಅಸಲಿ ಕಥೆ ಏನು?
Advertisement
ಸಿನಿಮಾ ಬಿಡುಗಡೆ ದಿನ ಅಭಿಮಾನಿಯೊಬ್ಬ ಹತ್ತು ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ಪುನೀತ್ ಹಬ್ಬವನ್ನೇ ಆಚರಿಸುತ್ತಿದ್ದಾನೆ. ರಾಜ್ಯಾದ್ಯಂತ ಅವತ್ತು ಪುನೀತ್ ಕಟೌಟ್ ಗೆ ಹಾರ ಮತ್ತು ಹಾಲಿನ ಅಭಿಷೇಕ ಮಾಡಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಅಲ್ಲದೇ, ಬೃಹತ್ ಕಟೌಟ್ ಗಳು ಕೂಡ ಚಿತ್ರಮಂದಿರದ ಮುಂದೆ ಎದ್ದು ನಿಲ್ಲಲಿವೆ. ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ: ಐದು ಕಾಂಟ್ರವರ್ಸಿಗಳು
Advertisement
Advertisement
ಇಷ್ಟೆಲ್ಲದರ ಮಧ್ಯ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ವಿತರಕರು ಮುಗಿಬಿದ್ದು ಸಿನಿಮಾ ಖರೀದಿಸುತ್ತಿದ್ದಾರೆ. ಈಗಾಗಲೇ ಆಯಾ ಭಾಗ ಮತ್ತು ಏರಿಯಾಗಳಲ್ಲಿ ವಿತರಿಸಲು ಹಲವರು ಮುಂದೆ ಬಂದಿದ್ದಾರೆ. ಆದರೆ, ಆ ಏರಿಯಾ ಮಾತ್ರ ಭಾರೀ ಡಿಮಾಂಡ್ ಕ್ರಿಯೇಟ್ ಮಾಡಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಅಂತಾರಾಷ್ಟ್ರೀಯ ಮಹಿಳಾ ದಿನ: ನಟಿಯ ವರ್ಕೌಟ್ ವಿಡಿಯೋ ಗಿಫ್ಟ್ ಕೊಡ್ತಾರಂತೆ ರಾಮ್ ಗೋಪಾಲ್ ವರ್ಮಾ
Advertisement
ಸಿನಿಮಾ ರಂಗದವರಿಗೆ ಬಿಕೆಟಿ ಏರಿಯಾ ಅಂದರೆ ಚಿನ್ನದ ಮೊಟ್ಟೆ ಇಡುವ ಕೋಳಿ ಇದ್ದಂತೆ. ವಿತರಕರ ಭಾಷೆಯಲ್ಲಿ ಬಿಕೆಟಿ ಅಂದರೆ ಬೆಂಗಳೂರು-ಕೋಲಾರ ಹಾಗೂ ತುಮಕೂರು ಎಂದರ್ಥ. ಈ ಮೂರು ಏರಿಯಾಗಳಲ್ಲಿ ಚಿತ್ರ ಬಿಡುಗಡೆ ವಿತರಕರೊಬ್ಬರು ನಿರ್ಮಾಪಕರಿಗೆ ಬರೋಬ್ಬರಿ 12 ಕೋಟಿ ಆಫರ್ ಕೊಟ್ಟರಂತೆ. ಆದರೆ, ನಿರ್ಮಾಪಕರು ಈ ಆಫರ್ ಒಪ್ಪಿಕೊಂಡಿಲ್ಲ ಎನ್ನಲಾಗುತ್ತಿದೆ. ಈ ಪ್ರಮಾಣದಲ್ಲಿ ಇದೊಂದೆ ಏರಿಯಾಗೆ ಇಷ್ಟು ಮೊತ್ತದ ಹಣಕ್ಕೆ ಎಂದೂ ವಿತರಣಾ ಹಕ್ಕು ಹೋಗಿಲ್ಲ. ಆದರೂ, ದಾಖಲೆಯ ಮೊತ್ತಕ್ಕೆ ಕೇಳಿದ್ದರೂ, ನಿರ್ಮಾಪಕರು ಕೊಟ್ಟಿಲ್ಲವಂತೆ. ಇದನ್ನೂ ಓದಿ : ಜೈಲಿನಲ್ಲಿರೋದು ವಾಸಿ ಅಂತಿದ್ದಾಳೆ ಪೂನಂ ಪಾಂಡೆ
ಜೇಮ್ಸ್ ಬಿಡುಗಡೆ ಆಗುತ್ತಿರುವ ವಾರ ಯಾವುದೇ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಅಲ್ಲದೇ, ಈಗಾಗಲೇ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಒಂದು ರೀತಿಯಲ್ಲಿ ಕ್ರೇಜ್ ಕೂಡ ಕ್ರಿಯೇಟ್ ಆಗಿದೆ. ಹಾಗಾಗಿ ಬಿಕೆಟಿಯಲ್ಲೇ ನಿರ್ಮಾಪಕರಿಗೆ ಅಂದಾಜು 20 ಕೋಟಿ ಬರುವ ಅಂದಾಜಿದೆಯಂತೆ.