ಕರ್ನಾಟಕ ಚಲನಚಿತ್ರ ಅಕಾಡಮಿ ಅಡಿಯಲ್ಲಿ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಮಾ.3 ರಿಂದ ನಡೆದಿದೆ. ಹಲವು ದೇಶಗಳ ಸಿನಿಮಾ ತಯಾರಕರು ಮತ್ತು ಭಾರತೀಯ ಸಿನಿಮಾ ತಯಾರಕರ ಸಂಗಮವೇ ಬೆಂಗಳೂರಿನಲ್ಲಿ ಆಗಿದೆ. ಈ ಮಧ್ಯೆ ಕೆಲ ಕಾರಣಗಳಿಂದಾಗಿ ವಿವಾದಕ್ಕೂ ಚಿತ್ರೋತ್ಸವ ಕಾರಣವಾಗಿದೆ. ಪ್ರತಿ ವರ್ಷವೂ ಒಂದಿಲ್ಲೊಂದು ಕಾರಣದಿಂದಾಗಿ ಸಣ್ಣ ಎಡವಟ್ಟುಗಳು ಆಗುತ್ತವೆ. ಆದರೆ, ಈ ಬಾರಿ ಪ್ರತಿಭಟನೆಯನ್ನೂ ಮಾಡುವಷ್ಟರ ಮಟ್ಟಿಗೆ ವಿವಾದಗಳು ಮುಂದೆ ಸಾಗಿವೆ. ಇದನ್ನೂ ಓದಿ : ಅಂತಾರಾಷ್ಟ್ರೀಯ ಮಹಿಳಾ ದಿನ: ನಟಿಯ ವರ್ಕೌಟ್ ವಿಡಿಯೋ ಗಿಫ್ಟ್ ಕೊಡ್ತಾರಂತೆ ರಾಮ್ ಗೋಪಾಲ್ ವರ್ಮಾ
Advertisement
ಉದ್ಘಾಟನಾ ಸಮಾರಂಭ
Advertisement
ಬೆಂಗಳೂರಿನ ಜಿಕೆವಿಕೆಯಲ್ಲಿ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನಾ ಸಮಾರಂಭ ನಡೆಯಿತು. ಇದಕ್ಕಂದೇ ತಯಾರಾಗಿದ್ದ ಆಹ್ವಾನ ಪತ್ರಿಕೆಯ ತುಂಬಾ ಬರೀ ರಾಜಕಾರಣಿಗಳ ಹೆಸರೇ ತುಂಬಿದ್ದರಿಂದ ‘ಇದೋ ರಾಜಕೀಯ ಸಮಾವೇಶವೋ ಅಥವಾ ಚಿತ್ರೋತ್ಸವೋ?’ ಎಂಬ ಆಂದೋಲನ ಕೂಡ ಸೋಷಿಯಲ್ ಮೀಡಿಯಾದಲ್ಲಿ ನಡೆಯಿತು. ಚಿತ್ರೋದ್ಯಮದ ಮಂದಿ ಇದನ್ನು ನೇರವಾಗಿಯೇ ಟೀಕಿಸಿದರು. ನಂತರ ಈ ಕಾರ್ಯಕ್ರಮದ ವೇದಿಕೆಯಲ್ಲಿ ನಡೆದ ನೃತ್ಯದಲ್ಲಿ ಸಾವರ್ಕರ್ ಕಟೌಟ್ ತಂದರು ಎನ್ನುವ ಕಾರಣಕ್ಕಾಗಿ ಮತ್ತೊಂದು ವಿವಾದ ಶುರುವಾಯಿತು. ಅಂಬೇಡ್ಕರ್ ಕಟೌಟ್ ಗೆ ಯಾಕೆ ಅವಕಾಶ ಕೊಡಲಿಲ್ಲ ಎನ್ನುವ ಕೂಗು ಎದ್ದಿತ್ತು. ಇದನ್ನೂ ಓದಿ : ಜೈಲಿನಲ್ಲಿರೋದು ವಾಸಿ ಅಂತಿದ್ದಾಳೆ ಪೂನಂ ಪಾಂಡೆ
Advertisement
Advertisement
ರಿಷಬ್ ಶೆಟ್ಟಿ ಅಸಮಾಧಾನ
ತಮ್ಮ ನಿರ್ಮಾಣದ ಪೆದ್ರೊ ಸಿನಿಮಾಗೆ ಜಾಗತಿಕ ಮನ್ನಣೆ ಸಿಕ್ಕಿದ್ದರೂ, ಅದು ಸಾಕಷ್ಟು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಭಾಗಿಯಾಗಿದ್ದರೂ, ನಮ್ಮದೇ ನೆಲದಲ್ಲಿ ನಡೆಯುತ್ತಿರುವ ಚಿತ್ರೋತ್ಸವಕ್ಕೆ ಆಯ್ಕೆಯಾಗದೇ ಇರುವುದಕ್ಕೆ ನಿರ್ಮಾಪಕ ರಿಷಬ್ ಶೆಟ್ಟಿ ಅಸಮಾಧಾನಗೊಂಡಿದ್ದರು. ಅದನ್ನು ಮಾಧ್ಯಮಗಳ ಮುಂದೆ ಬಹಿರಂಗವಾಗಿಯೇ ಹೇಳಿದರು. ಅಲ್ಲದೇ, ಇನ್ನೂ ಎರಡು ಚಿತ್ರಗಳ ನಿರ್ಮಾಪಕರು ಕೂಡ ತಮಗೂ ಅನ್ಯಾಯವಾಗಿದೆ ಎಂದು ತಮ್ಮ ವಿರೋಧವನ್ನು ವ್ಯಕ್ತ ಪಡಿಸಿದರು. ಇದನ್ನೂ ಓದಿ : ಶಿವಣ್ಣ ನಟನೆಯ ‘ವೇದ’ ಚಿತ್ರದಲ್ಲಿ ರಾಘು ಶಿವಮೊಗ್ಗ : ನಟನೆಯಲ್ಲೂ ಬ್ಯುಸಿಯಾದ ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ
ಕೊಡವ ಸಂಸ್ಕೃತಿ ಅಪಚಾರ
ಈ ಬಾರಿಯ ಚಿತ್ರೋತ್ಸವದಲ್ಲಿ ‘ದೇವದ ಕಾಡು’ ಸಿನಿಮಾ ಪ್ರದರ್ಶನಕ್ಕಿತ್ತು. ಈ ಸಿನಿಮಾವನ್ನು ನೋಡಿದ ಕೊಡಗಿನವರಾದ ಪ್ರಕಾಶ್ ಕಾರ್ಯಪ್ಪ ತಮ್ಮ ಸಂಸ್ಕೃತಿಗೆ ಧಕ್ಕೆ ತರುವಂತ ಸಿನಿಮಾವಿದು ಎಂದು ಥಿಯೇಟರ್ ನಲ್ಲಿಯೇ ಆಕ್ಷೇಪ ವ್ಯಕ್ತ ಪಡಿಸಿದರು. ಈ ಸಿನಿಮಾವನ್ನು ಆಯ್ಕೆ ಮಾಡಿದ ಕಮೀಟಿಯ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಇಂತಹ ಚಿತ್ರವನ್ನು ಅಕಾಡಮಿ ಹೇಗೆ ಆಯ್ಕೆ ಮಾಡಿತು ಎಂದು ಪ್ರಶ್ನಿಸಿದರು. ಇದು ಭಾರೀ ಗದ್ದಲಕ್ಕೆ ಕಾರಣವಾಯಿತು. ಇದನ್ನೂ ಓದಿ : ಇನ್ಮುಂದೆ ಬಾಲಿವುಡ್ ನಿರ್ದೇಶಕರಿಗೆ ಸಿಗಲ್ಲ ಆಲಿಯಾ ಭಟ್
ವಾಣಿಜ್ಯ ಮಂಡಳಿ ವಿರುದ್ಧ ಅಸಮಾಧಾನ
ಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಭಾಗಿಯಾಗಲು ನಿಯಮಗಳಿವೆ. ಜ್ಯೂರಿ ಕಮೀಟಿ ಆಯ್ಕೆ ಮಾಡಿದ ಚಿತ್ರಗಳನ್ನಷ್ಟೇ ಚಿತ್ರೋತ್ಸವದಲ್ಲಿ ತೋರಿಸಲಾಗುತ್ತದೆ. ಆದರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಳುಹಿಸಿದ ಚಿತ್ರಗಳನ್ನು ನೇರವಾಗಿ ಚಿತ್ರೋತ್ಸವದಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂದು ಕೆಲ ನಿರ್ಮಾಪಕರು ಆರೋಪ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿರುವ ವಾಣಿಜ್ಯ ಮಂಡಳಿ, ಈ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟ ಪಡಿಸಿದ್ದಾರೆ. ಯಾವುದೇ ಕಮೀಟಿ ಇಲ್ಲದೇ, ಯಾವ ಮಾನದಂಡದ ಮೇಲೆ ಸಿನಿಮಾಗಳನ್ನು ಆಯ್ಕೆ ಮಾಡುತ್ತೀರಿ ಎಂಬ ಪ್ರಶ್ನೆ ನಿರ್ಮಾಪಕರದ್ದು. ಇದನ್ನೂ ಓದಿ : ರಾಧಿಕಾ ಪಂಡಿತ್ ಬರ್ತಡೇ ಸೆಲೆಬ್ರೆಷನ್: ಫೋಟೋ ಗ್ಯಾಲರಿ
ಕಿಟ್ ವಿತರಣೆ ಇಲ್ಲ
ಪ್ರತಿ ಚಿತ್ರೋತ್ಸವದಲ್ಲೂ ಭಾಗವಹಿಸುವವರಿಗೆ ಒಂದು ಬ್ಯಾಗ್, ಸಿನಿಮಾ ಮಾಹಿತಿಯುಳ್ಳ ಪುಸ್ತಕ ಮತ್ತು ಸಿನಿಮಾ ಶ್ಕೆಡ್ಯೂಲ್ಡ್ ನೀಡಲಾಗುತ್ತಿತ್ತು. ಚಿತ್ರೋತ್ಸವ ಶುರುವಾಗಿ ವಾರ ಕಳೆದರೂ, ಇನ್ನೂ ಕಿಟ್ ನೀಡಿಲ್ಲ ಎನ್ನುವ ಆಕ್ರೋಶ ಕೆಲವರದ್ದು. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಸಾಕಷ್ಟ ಪರ ವಿರೋಧದ ಮಾತುಗಳು ಕೇಳಿ ಬಂದಿವೆ. ಪೇಪರ್ ಲೆಸ್ ಚಿತ್ರೋತ್ಸವ ಮಾಡಬೇಕೆಂಬ ಸಂಕಲ್ಪದ ಮುನ್ನುಡಿಯಂತಿದೆ ಈ ವರ್ಷದ ಚಿತ್ರೋತ್ಸವ. ಹಾಗಾಗಿ ಸಹಕರಿಸಿ ಎಂದಿದೆ.