– ಕಣ್ಣೂರು ಮಠದಲ್ಲಿ ಮಾಗಡಿ ಪೊಲೀಸರಿಂದ ಸ್ಥಳ ಮಹಜರು
ರಾಮನಗರ: ಮಾಗಡಿ ತಾಲೂಕಿನ ಕಂಚುಗಲ್ ಬಂಡೆಮಠದ ಬಸವಲಿಂಗ ಶ್ರೀ (BandeMutt Sri) ಗಳ 11ನೇ ದಿನದ ಕಾರ್ಯ ಇಂದು ನಡೆದಿದೆ. ಸಿದ್ದಗಂಗಾಶ್ರೀಗಳ ನೇತೃತ್ವದಲ್ಲಿ ಶಿವಗಣಾರಾಧನೆ ಕಾರ್ಯಕ್ರಮಕ್ಕೆ ನಡೆಸಲಾಗಿದ್ದು, ಮಠಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಮತ್ತೊಂದೆಡೆ ಪೊಲೀಸ್ ಕಸ್ಟಡಿಯಲ್ಲಿರೋ ಆರೋಪಿಗಳ ವಿಚಾರಣೆ ಮುಂದುವರಿದಿದ್ದು ಇಂದು ಸ್ಥಳ ಮಹಜರು ನಡೆಸಲಾಗಿದೆ. ಅಲ್ಲದೇ ವಿಚಾರಣೆ ವೇಳೆ ಕಣ್ಣೂರು ಶ್ರೀ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.
Advertisement
ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣ ಸಂಬಂಧ ಕಸ್ಟಡಿಯಲ್ಲಿರೋ ಮೂವರು ಆರೋಪಿಗಳ ವಿಚಾರಣೆ ಮೂರನೇ ದಿನವೂ ತೀವ್ರಗೊಂಡಿದೆ. ವಿಚಾರಣೆ ವೇಳೆ ಕಣ್ಣೂರು ಮಠದ ಮೃತ್ಯುಂಜಯ ತಪ್ಪೊಪ್ಪಿಕೊಂಡಿರೋ ಸ್ವಾಮೀಜಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಬಸವಲಿಂಗ ಶ್ರೀ ವಿಚಾರದಲ್ಲಿ ತಪ್ಪು ಮಾಡಿದ್ದೇನೆ, ಅದರ ಹೊರತಾಗಿ ಇನ್ಯಾರನ್ನೂ ಟಾರ್ಗೆಟ್ ಮಾಡಿಲ್ಲ ಅಂತಾ ಪಶ್ಚಾತ್ತಾಪ ವ್ಯಕ್ತಪಡಿಸಿರೋ ಬಗ್ಗೆ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಅಲ್ಲದೇ ಇಂದು ಮೃತ್ಯುಂಜಯ ಶ್ರೀಗಳ ಜೊತೆ ಕಣ್ಣೂರು ಮಠದಲ್ಲೂ ಸ್ಥಳ ಮಹಜರು ಮಾಡಲಾಗಿದೆ. ಕಣ್ಣೂರು ಮಠ (Kannuru Mutt) ದ ಮೊದಲ ಮಹಡಿಯ ವಿಶ್ರಾಂತಿ ಕೊಠಡಿ ಕಂಪ್ಯೂಟರ್, ಬೀರು, ಲಾಕರ್ ಗಳನ್ನ ಪರೊಶೀಲಿಸಿರೋ ಪೊಲೀಸರು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
Advertisement
Advertisement
ಇನ್ನೂ ಮತ್ತೊಂದೆಡೆ ಮಠದ ಆವರಣದಲ್ಲಿ ನಡೆದ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀ ಸೇರಿ ಹಲವು ಮಠಾಧೀಶರು ಭಾಗಿಯಾಗಿದ್ರು. ಬಸವಲಿಂಗ ಶ್ರೀಗಳ ಗದ್ದುಗೆಯಲ್ಲಿ ಶಿವಪೂಜೆ ಮಾಡಿ ಸಿದ್ದಗಂಗಾ ಶ್ರೀಗಳ ಪಾದಪೂಜೆಯನ್ನ ನೆರವೇರಿಸಲಾಯಿತು. ಮಠಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಠದ ಮುಖಂಡರು ಸೇರಿ ನೂರಾರು ಭಕ್ತಾದಿಗಳು ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಬಂಡೇಮಠ ಶ್ರೀಗಳ ಆತ್ಮಹತ್ಯೆ ಕೇಸ್- ವೀರಶೈವ ಲಿಂಗಾಯತ ಮುಖಂಡನಿಗೆ ನೋಟಿಸ್
Advertisement
ಇದೇವೇಳೆ ಮಾತನಾಡಿದ ವೀರಶೈವ ಲಿಂಗಾಯತ ನಿಗಮದ ಅಧ್ಯಕ್ಷ ಪರಮಶಿವಯ್ಯ ಮಾತನಾಡಿ ಬಂಧನ ಆಗಿರೋ ಕಣ್ಣೂರು ಶ್ರೀ ನಡೆ ಹಿಂದಿನಿಂದಲೂ ಸರಿ ಇಲ್ಲ. ಸಾಕಷ್ಟು ಹಗರಣ ಮಾಡಿ ಇತರ ಮಠಗಳು ಇವರನ್ನ ದೂರ ಇಟ್ಟಿದ್ರು. ಆದರೆ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ ಬಸವಲಿಂಗ ಶ್ರೀಗೆ ಇವರು ಅನ್ಯಾಯ ಮಾಡಿದ್ದಾರೆ. ಈಗ ಅವರ ಬಂಧನ ಆಗಿದೆ. ಅವರು ಜೀವನ ಪೂರ್ತಿ ಜೈಲಿನಲ್ಲಿರಬೇಕು, ಕಾನೂನಿನ ಪ್ರಕಾರ ತಕ್ಕ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ರು. ಅಲ್ಲದೇ ಶೀಘ್ರದಲ್ಲೇ ಬಂಡೇಮಠಕ್ಕೆ ನೂತನ ಮಠಾಧೀಶರ ನೇಮಕ ಮಾಡಲಾಗುವುದು. ಸಿದ್ದಗಂಗಾ ಶ್ರೀಗಳ ನಿರ್ಣಯದಂತೆ ಸಚ್ಚಾರಿತ್ರ್ಯ, ವಿದ್ಯಾವಂತ, ಆಧ್ಯಾತ್ಮಿಕ ಜ್ಞಾನ ಇರುವವರ ನೇಮಕ ಮಾಡಲಾಗುವು ಎಂದರು.
ಒಟ್ಟಾರೆ ಬಸವಲಿಂಗ ಶ್ರೀಗಳ ಆತ್ಮಹತ್ಯೆಯಿಂದಾಗಿ ಮಠದ ಭಕ್ತರು ಹಾಗೂ ಮಕ್ಕಳಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ. 25ವರ್ಷಗಳ ಕಾಲ ಮಠ ಮುನ್ನಡೆಸಿ ಅಭಿವೃದ್ಧಿ ಮಾಡಿದ್ದನ್ನ ಭಕ್ತರು ಸ್ಮರಿಸಿದ್ದಾರೆ. ಅಲ್ಲದೇ ಪೊಲೀಸರ ತನಿಖೆ ಕೂಡಾ ತೀವ್ರಗೊಂಡಿದ್ದು ಪ್ರಕರಣದ ಮತ್ತಷ್ಟು ಆರೋಪಿಗಳ ಬಂಧನವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಬಂಡೇ ಮಠ ಶ್ರೀ ಆತ್ಮಹತ್ಯೆ ಪ್ರಕರಣ – ಮತ್ತೊಂದು ಪ್ರಭಾವಿ ಮಠದ ಶ್ರೀ ಭಾಗಿ?
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]