ಬೆಂಗಳೂರು: ಹಲವು ದಿನಗಳಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯ ಏರಿಳಿತ ಮುಂದುವರಿದಿದೆ. ರಾಜ್ಯದಲ್ಲಿ ಇಂದು 1,186 ಹೊಸ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ 635 ಪ್ರಕರಣಗಳು ವರದಿಯಾಗುವ ಮೂಲಕ ಸ್ವಲ್ಪ ಇಳಿಕೆ ಕಂಡರೂ, ಮೈಸೂರಿನಲ್ಲಿ 121 ಪ್ರಕರಣ ವರದಿಯಾಗಿ ಆತಂಕಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಇಂದು ಕೊರೊನಾದಿಂದ ಇಬ್ಬರು ಸಾವನ್ನಪ್ಪಿದ್ದು, ಇಲ್ಲಿಯವರೆಗೆ ಸಾವನ್ನಪ್ಪಿದವರ ಸಂಖ್ಯೆ 40,187 ಕ್ಕೆ ಏರಿಕೆಯಾಗಿದೆ. ಇಂದು 1,118 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 40,00,331 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ 7,922 ಸಕ್ರಿಯ ಪ್ರಕರಣಗಳಿವೆ. ಇದನ್ನೂ ಓದಿ: ಸಂಧಾನಕ್ಕೂ ಸಿದ್ಧ, ಸಮರಕ್ಕೂ ಬದ್ಧ: ಆರೋಪದ ಬಗ್ಗೆ ಮುರುಘಾ ಶ್ರೀ ಮೊದಲ ಮಾತು
ಇಂದಿನ ಪಾಸಿಟಿವಿಟಿ ರೇಟ್ ಶೇ.4.30 ಇದೆ. ಇಂದು 19,561 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 27,562 ಜನರನ್ನು (ಆರ್‌ಟಿಪಿಸಿಆರ್ 20,697 + 6,865 ರ‍್ಯಾಪಿಡ್ ಆಂಟಿಜನ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ ಬೆಂಗಳೂರು ನಗರ 635, ಬಾಗಲಕೋಟೆ 0, ಬಳ್ಳಾರಿ 27, ಬೆಳಗಾವಿ 6, ಬೆಂಗಳೂರು ಗ್ರಾಮಾಂತರ 13, ಬೀದರ್ 0, ಚಾಮರಾಜನಗರ 27, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 40, ಚಿತ್ರದುರ್ಗ 2, ದಕ್ಷಿಣ ಕನ್ನಡ 23, ದಾವಣಗೆರೆ 6, ಧಾರವಾಡ 28, ಗದಗ 0, ಹಾಸನ 62, ಹಾವೇರಿ 2, ಕಲಬುರಗಿ 12, ಕೊಡಗು 27, ಕೋಲಾರ 13, ಕೊಪ್ಪಳ 5, ಮಂಡ್ಯ 10, ಮೈಸೂರು 121, ರಾಯಚೂರು 19, ರಾಮನಗರ 8, ಶಿವಮೊಗ್ಗ 42, ತುಮಕೂರು 19, ಉಡುಪಿ 15, ಉತ್ತರ ಕನ್ನಡ 14, ವಿಜಯಪುರ 5 ಹಾಗೂ ಯಾದಗಿರಿಯಲ್ಲಿ 2 ಪ್ರಕರಣ ವರದಿಯಾಗಿದೆ. ಇದನ್ನೂ ಓದಿ: ಪಿಎಸ್‌ಐ ಅಕ್ರಮ- ಮಹಿಳಾ ಕೋಟಾದಲ್ಲಿ ಮೊದಲ ರ‍್ಯಾಂಕ್ ಪಡೆದು ನಾಪತ್ತೆಯಾಗಿದ್ದಾಕೆ ಕೊನೆಗೂ ಲಾಕ್