ಏರ್‌ ಇಂಡಿಯಾ ವಿಮಾನ ಪತನವಾದ 4 ದಿನದ ಬಳಿಕ ಸಿಕ್‌ ಲೀವ್‌ ಹಾಕಿದ್ರು 100ಕ್ಕೂ ಹೆಚ್ಚು ಪೈಲಟ್‌ಗಳು

Public TV
1 Min Read
Boeing 787 air india dreamliner
ಸಾಂದರ್ಭಿಕ ಚಿತ್ರ

ನವದೆಹಲಿ: ಅಹಮಾದಾಬಾದ್‌ನಲ್ಲಿ ಏರ್‌ ಇಂಡಿಯಾ ವಿಮಾನ ಪತನವಾವಾದ (Air India Plane Crash) 4 ದಿನದಲ್ಲಿ 100ಕ್ಕೂ ಹೆಚ್ಚು ಏರ್‌ ಇಂಡಿಯಾ ಪೈಲಟ್‌ಗಳು (Pilots) ಅನಾರೋಗ್ಯ (Sick Leave) ಕಾರಣಕ್ಕೆ ರಜೆ ತೆಗೆದುಕೊಂಡಿದ್ದರು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ವಿಮಾನಯಾನ ಖಾತೆಯ ರಾಜ್ಯ ಸಚಿವ ಮುರಳೀಧರ್ ಮೊಹೋಲ್, ಆ ದಿನ 51 ಕಮಾಂಡರ್‌ಗಳು ಮತ್ತು 61 ಫ್ಲೈಟ್ ಆಫೀಸರ್‌ಗಳು ಸಿಕ್‌ ಲೀವ್‌ ಪಡೆಯಲು ಮನವಿ ಮಾಡಿದ್ದರು ಎಂದು ಹೇಳಿದ್ದಾರೆ.

ವಿಮಾನ ಹಾರಿಸುವ ಮುನ್ನ ಮಾನಸಿಕ ಆರೋಗ್ಯವನ್ನು ಪೈಲಟ್‌ಗಳು ಹೊಂದಿರಬೇಕೆಂದು ಫೆಬ್ರವರಿ 2023 ರಲ್ಲಿ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ. ವಿಮಾನ ಸಿಬ್ಬಂದಿ ಮತ್ತು ವಾಯು ಸಂಚಾರ ನಿಯಂತ್ರಕರಿಗೆ ಸಂಭಾವ್ಯ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸಲು ಆನ್‌ಲೈನ್‌ ಮೂಲಕ ತರಬೇತಿ ನೀಡುವಂತೆ  ಸೂಚಿಸಲಾಗಿದೆ.  ಇದನ್ನೂ ಓದಿ: 3,000 ಕೋಟಿ ಸಾಲ ವಂಚನೆ ಕೇಸ್‌ – ಅನಿಲ್‌ ಅಂಬಾನಿಗೆ ಸೇರಿದ 50 ಕಂಪನಿಗಳ ಮೇಲೆ ED ದಾಳಿ

Ahmedabad Air India Plane Crash 1

ಸಿಬ್ಬಂದಿ ಆಯಾಸ ಮತ್ತು ತರಬೇತಿಗೆ ಸಂಬಂಧಿಸಿದ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಏರ್‌ ಇಂಡಿಯಾಗೆ ನಾಲ್ಕು ಶೋ-ಕಾಸ್ ನೋಟಿಸ್‌ಗಳನ್ನು ಕಳುಹಿಸಿದೆ. ಕಳೆದ ಆರು ತಿಂಗಳಲ್ಲಿ ಬಹು ಸುರಕ್ಷತಾ ಉಲ್ಲಂಘನೆ ಮತ್ತು ಘಟನೆಗಳಿಗಾಗಿ ಏರ್‌ ಇಂಡಿಯಾ 13 ನೋಟಿಸ್‌ಗಳನ್ನು ಸ್ವೀಕರಿಸಿದೆ.

ಜೂನ್‌ 12 ರಂದು ಅಹಮದಾಬಾದ್‌ನಿಂದ ಲಂಡನ್‌ನ ಗಾಟ್ವಿಕ್‌ ವಿಮಾನ ನಿಲ್ದಾಣಕ್ಕೆ ಏರ್‌ಇಂಡಿಯಾ ಬೋಯಿಂಗ್‌ 787 ಟೇಕಾಫ್‌ ಆಗಿತ್ತು. ಟೇಕಾಫ್‌ ಆದ ಕೆಲ ನಿಮಿಷದಲ್ಲಿ ಪತನಗೊಂಡು ಏರ್‌ ಪೋರ್ಟ್‌ ಸಮಿಪದಲ್ಲಿದ್ದ ಮೆಡಿಕಲ್‌ ಕಾಲೇಜ್‌ ಹಾಸ್ಟೆಲ್‌ ಮೇಲೆ ಬಿದ್ದಿತ್ತು. ಪರಿಣಾಮ 241 ಮಂದಿ ಮೃತಪಟ್ಟರೆ ಒಬ್ಬರು ಪವಾಡಸದೃಶವಾಗಿ ಪಾರಾಗಿದ್ದರು.

Share This Article