ಲಂಡನ್: ಇಂಗ್ಲೆಂಡ್‍ನಲ್ಲಿ ಐಕ್ಯೂ ಸ್ಕೋರ್ ಟೆಸ್ಟ್ ಸಂಸ್ಥೆ ನಡೆಸುವ ಬ್ರಿಟಿಷ್ ಮೆನ್ಸಾ ಪರೀಕ್ಷೆಯಲ್ಲಿ ಭಾರತ ಮೂಲದ 11 ವರ್ಷದ ಪೋರಿ ಅತೀಹೆಚ್ಚು ಅಂಕಗಳಿಸಿ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದು, ಈ ಬಾಲಕಿಯ ಐಕ್ಯೂಗೆ ಐಕ್ಯೂ ಸ್ಕೋರ್ ಟೆಸ್ಟ್ ಸಂಸ್ಥೆ ಬೇಷ್ ಎಂದಿದೆ.
ಬ್ರಿಟೀಷ್ ಮೆನ್ಸಾ ಪರೀಕ್ಷೆಯಲ್ಲಿ ಭಾರತದ ಜಿಯಾ ವದೂಚಾ ಅದ್ವೀತಿಯ ಸಾಧನೆಗೈದು ಮನೆಮನ ಮಾತಾಗಿದ್ದಾಳೆ. ಮೆನ್ಸಾ ಪರೀಕ್ಷೆಯ ಪೇಪರ್ ಬಿ ಪರೀಕ್ಷೆಯಲ್ಲಿ ಜಿಯಾ 162 ಅಂಕ ಗಳಿಸಿದ್ದಾಳೆ. ಅಲ್ಲದೆ 11 ವರ್ಷದ ಜಿಯಾ ಈ ವಯಸ್ಸಿನಲ್ಲೇ ಇಷ್ಟೊಂದು ಐಕ್ಯೂ ಸಾಮಥ್ರ್ಯ ಹೊಂದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ:IQ ಟೆಸ್ಟ್ ನಲ್ಲಿ ಐನ್‍ಸ್ಟೈನ್‍ರನ್ನೂ ಮೀರಿಸಿದ ಭಾರತೀಯ ಮೂಲದ ಬಾಲಕಿ
Advertisement
Advertisement
ಈ ಬಗ್ಗೆ ಜಿಯಾ ತಾಯಿ ಮಾತನಾಡಿ, ಈಗ ಆಕೆಯಲ್ಲಿರುವ ಪ್ರತಿಭೆ ಏನೆಂದು ನಮಗೆ ಈಗ ತಿಳಿಯುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಮಗಳಿಗೆ ಯಾವ ರೀತಿ ಓದಿಸಬೇಕು ಎನ್ನುವ ಬಗ್ಗೆ ಯೋಚಿಸುತ್ತಿದ್ದೇವೆ ಎಂದರು. ಬಳಿಕ ಜಿಯಾ ಮಾತನಾಡಿ, ನಾನು ನನ್ನ ಪ್ರತಿಭೆಯನ್ನು ಕೇವಲ ಒಂದೆಡೆ ಕೂತು ವ್ಯರ್ಥಮಾಲು ಇಷ್ಟಪಡಲ್ಲ. ಬದಲಾಗಿ ನನ್ನ ಜೀವನವನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಖುಷಿಯನ್ನು ವ್ಯಕ್ತಪಡಿಸಿದಳು.
Advertisement
ಬ್ರಿಟಿಷ್ ಮೆನ್ಸಾ ಸಂಸ್ಥೆಯು ಐಕ್ಯೂ ಸಂಬಂಧಿಸಿದ ಸಂಶೋಧನೆಯನ್ನು ನಡೆಸುತ್ತದೆ. ಇದೇ ಈ ಸಂಸ್ಥೆಯ ಮುಖ್ಯ ಕೆಲಸವಾಗಿದೆ. ಬ್ರಿಟಿಷ್ ಮೆನ್ಸಾ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿರುವ ಹಿನ್ನೆಲೆ ಜಿಯಾಗೆ ಸಂಸ್ಥೆಯ ಸದಸ್ಯತ್ವ ನೀಡಲಾಗಿದೆ. ಇದನ್ನೂ ಓದಿ:ಬುದ್ಧಿವಂತಿಕೆಯಿಂದ್ಲೇ ದೇಶ-ವಿದೇಶದ ಗಮನ ಸೆಳೆದ 4ರ ಬೆಂಗ್ಳೂರು ಪೋರ
Advertisement
ಅಲ್ಲದೆ ಸಂಸ್ಥೆಯ ಸಿಇಒ ಬಾಲಕಿ ಬಗ್ಗೆ ಪ್ರತಿಕ್ರಿಯಿಸಿ, ಕೇವಲ ಬಾಲಕಿ ಐಕ್ಯೂ ಪರಿಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದಕ್ಕೆ ಆಕೆಯ ಐಕ್ಯೂವನ್ನು ವಿಜ್ಞಾನಿ ಐನ್‍ಸ್ಟೀನ್ ಅಥವಾ ಬೇರೆ ಅವರಿಗೆರ ಹೋಲಿಕೆ ಮಾಡುವುದು ತಪ್ಪು. ಯಾಕೆಂದರೆ ನಾವು ಈಗ ಕೇವಲ ನಾವು ಆಕೆಯ ಐಕ್ಯೂವನ್ನು ಪರೀಕ್ಷೆ ಮಾಡಿ ಅಳೆದಿದ್ದೇವೆ ಅಷ್ಟೇ. ಆದರೆ ಇದನ್ನು ಮೀರಿದ ಪ್ರತಿಭೆ ಆಕೆಯಲ್ಲಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.