ಹಾಂಗ್ ಕಾಂಗ್: 11 ತಿಂಗಳ ಮಗುವಿಗೆ ತಾಯಿ ಹಾಲುಣಿಸುತ್ತಿದ್ದಾಗ ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಚೀನಾದ (China) ಹಾಂಗ್ ಕಾಂಗ್‌ನಲ್ಲಿ (Hong Kong) ನಡೆದಿದೆ.
25 ವರ್ಷದ ಮಹಿಳೆ ತನ್ನ 11 ತಿಂಗಳ ಮಗುವಿಗೆ ಮನೆಯಲ್ಲಿ ಹಾಲುಣಿಸುತ್ತಿದ್ದ ವೇಳೆ ಮಗು ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದೆ. ಇದರ ಪರಿಣಾಮ ತಾಯಿ ಗಾಬರಿಗೊಂಡು ಮಗುವಿನ ಬೆನ್ನನ್ನು ತಟ್ಟಿದ್ದಾಳೆ. ಆದರೆ ಮಗು ಯಾವುದೇ ಪ್ರತಿಕ್ರಿಯೆ ನೀಡದ ಪರಿಣಾಮ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಇದನ್ನೂ ಓದಿ: ಇಂಜಿನ್‌ನಲ್ಲಿ ಬೆಂಕಿ; ಹಾರಾಟ ನಡೆಸುತ್ತಿದ್ದ ಯುಎಸ್ ಬೋಯಿಂಗ್ ಕಾರ್ಗೋ ವಿಮಾನದಿಂದ ಹೊಮ್ಮಿತು ಬೆಂಕಿ ಜ್ವಾಲೆ
Advertisement
Advertisement
ಮಗು ಕಳೆದ ಎರಡು ದಿನಗಳಿಂದ ಜ್ವರ ಮತ್ತು ಶೀತದಿಂದ ಅನಾರ‍್ಯೋಗ್ಯಕ್ಕೆ ತುತ್ತಾಗಿತ್ತು. ಪುಟ್ಟ ಮಗುವಿಗೆ ನುಂಗುವ ಅಭಿವೃದ್ಧಿವರ್ತನಗಳು ಸಂಪೂರ್ಣವಾಗಿ ಸಮನ್ವಯಗೊಂಡಿರಲಿಲ್ಲ. ಹಾಲು ಕುಡಿಯುವಾಗ ವೇಗವಾಗಿ ನುಂಗುವ ಸಾಮರ್ಥ್ಯ ಮಗುವಿಗೆ ಇರಲಿಲ್ಲ. ಇದರಿಂದ ಮಗು ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.
Advertisement
Advertisement
ಕಳೆದ ವರ್ಷ ಬ್ರೆಜಿಲ್‌ನಲ್ಲಿ ಐದು ತಿಂಗಳ ಮಗು ಹಾಲು ಕುಡಿಯುವಾಗ ಇದೇ ರೀತಿ ಉಸಿರುಗಟ್ಟಿ ಸಾವನ್ನಪ್ಪಿತ್ತು. ಇದನ್ನೂ ಓದಿ: ಇರಾನ್ ಮೇಲೆ ಪಾಕ್ ಪ್ರತಿದಾಳಿ – ನಾಲ್ಕು ಮಕ್ಕಳು ಸೇರಿ 7 ಮಂದಿ ಹತ್ಯೆ