ಪಾಟ್ನಾ: ಬಿಹಾರದ ಹಲವೆಡೆ ಸಿಡಿಲು ಬಡಿದು 10 ಮಂದಿ ಸಾವನ್ನಪ್ಪಿದ್ದು, ಮೃತರ ಕುಟುಂಬಸ್ಥರಿಗೆ ತಲಾ 4 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಘೋಷಿಸಿದ್ದಾರೆ.
Advertisement
ಈ ಕುರಿತಂತೆ ಸೋಮವಾರ ನಿತೀಶ್ ಕುಮಾರ್ ಅವರು, ಗುಡುಗು ಮತ್ತು ಸಿಡಿಲಿನಿಂದಾಗಿ ಪುರ್ನಿಯಾ ಹಾಗೂ ಅರಾರಿಯಾದಲ್ಲಿ ನಾಲ್ಕು ಮಂದಿ ಮತ್ತು ಸುಪೌಲ್‍ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಸ್ಥರಿಗೆ ನನ್ನ ಸಂತಾಪಗಳು ಮತ್ತು ಮೃತರ ಕುಟುಂಬಸ್ಥರಿಗೆ 4 ಲಕ್ಷ ಪರಿಹಾರ ನೀಡಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಸುಮ್ಮನಹಳ್ಳಿ ಬ್ರಿಡ್ಜ್ ಮತ್ತೆ ಕುಸಿತದ ಭೀತಿ – ನೆಲ ಕಾಣುವ ಮಟ್ಟಕ್ಕೆ ಕಿತ್ತು ಹೋದ ಕಾಂಕ್ರಿಟ್ ಸ್ಲ್ಯಾಬ್
Advertisement
Advertisement
ಇಂತಹ ವಾತಾವಾರಣವಿದ್ದಾಗ ಜನರು ಜಾಗರೂಕರಾಗಿರಬೇಕು ಮತ್ತು ಘಟನೆಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುವುದರ ಬಗ್ಗೆ ವಿಪತ್ತು ನಿರ್ವಹಣಾ ಇಲಾಖೆ ನೀಡಿರುವ ಸಲಹೆಗಳನ್ನು ಪಾಲಿಸುವಂತೆ ಜನರಲ್ಲಿ ಮನವಿ ಮಾಡಿ, ಮನೆಯಲ್ಲಿಯೇ ಇರಿ ಮತ್ತು ಕೆಟ್ಟ ವಾತಾವರಣದಲ್ಲಿ ಸುರಕ್ಷಿತವಾಗಿರಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೂ ಸಂಪ್ರದಾಯದಂತೆ ಮರುಮದುವೆಯಾದ್ರು 9 ಮಕ್ಕಳ ತಂದೆ-ತಾಯಿಯಾಗಿರುವ ಮುಸ್ಲಿಂ ದಂಪತಿ