ಇಸ್ಲಾಮಾಬಾದ್: ದಕ್ಷಿಣ ಪಾಕಿಸ್ತಾನದಲ್ಲಿ (Pakistan) ಆಳವಾದ ಕಂದಕಕ್ಕೆ ಮಿನಿಬಸ್ ಬಿದ್ದು, 11 ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಪ್ರವಾಹದಿಂದ ಕೊಚ್ಚಿಹೋದ ರಸ್ತೆಯಲ್ಲಿ ನೀರು ತುಂಬಿದ ಹಳ್ಳಕ್ಕೆ ಬಸ್ ಬಿದ್ದಿದೆ. ಅಪಘಾತದಲ್ಲಿ ಮೃತಪಟ್ಟ ಮಕ್ಕಳು 2ರಿಂದ 8 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಖಾದಿಮ್ ಹುಸೇನ್ ತಿಳಿಸಿದ್ದಾರೆ. ಇದನ್ನೂ ಓದಿ: ಹೆಲಿಕಾಪ್ಟರ್ ಪತನ – ಮೆಕ್ಸಿಕನ್ ರಾಜ್ಯದ ಭದ್ರತಾ ಮುಖ್ಯಸ್ಥ ಸೇರಿ ಐವರ ಸಾವು
Advertisement
Advertisement
ಡ್ರೈವರ್‌ಗೆ ರಸ್ತೆಯ ಡೈವರ್ಶನ್ ಚಿಹ್ನೆಯನ್ನು ನೋಡಲಾಗಿಲ್ಲ. ಆದ್ದರಿಂದ ವ್ಯಾನ್ ಸೆಹ್ವಾನ್ ಷರೀಫ್ ಪಟ್ಟಣದ ಬಳಿ 25 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಅಪಘಾತದಲ್ಲಿ 14ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಹುಸೇನ್ ಮಾಹಿತಿ ನೀಡಿದ್ದಾರೆ.
Advertisement
ಪಾಕಿಸ್ತಾನವು ಈ ವರ್ಷ ದಾಖಲೆಯ ಮಾನ್ಸೂನ್ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿತ್ತು. ದೇಶದ ಮೂರನೇ ಒಂದು ಭಾಗ ನೀರಿನಲ್ಲಿ ಮುಳುಗಿತ್ತು. 8 ಮಿಲಿಯನ್ ಜನರನ್ನು ಸ್ಥಳಾಂತರಿಸಲಾಗಿತ್ತು. ಮೂಲಸೌಕರ್ಯ ಕೊರತೆ ದೇಶವನ್ನು ಮತ್ತಷ್ಟು ಕಂಗೆಡಿಸಿದೆ. ಇದನ್ನೂ ಓದಿ: ಗಾಜಾದ ನಿರಾಶ್ರಿತರ ಶಿಬಿರದಲ್ಲಿ ಭೀಕರ ಅಗ್ನಿ ಅವಘಡ – 7 ಮಕ್ಕಳು ಸೇರಿ 21 ಸಾವು
Advertisement
ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, 2018 ರಲ್ಲಿ ಪಾಕಿಸ್ತಾನದ ರಸ್ತೆಗಳಲ್ಲಿ 27,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.