ಬೆಂಗಳೂರು: ಒಂದೇ ದಿನ 11.19 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣಿಸುವ ಮೂಲಕ ಹಳೆಯ ದಾಖಲೆ ಉಡೀಸ್ ಮಾಡಿ, `ನಮ್ಮ ಮೆಟ್ರೋ’ (Namma Metro) ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ.
ಆ.10ರಂದು ಸೋಮವಾರ ಒಂದೇ ದಿನ ನಮ್ಮ ಮೆಟ್ರೋದಲ್ಲಿ 11,19,815 ಜನರು ಸಂಚರಿಸಿದ್ದಾರೆ. ಈ ಮೂಲಕ ಹಳೆಯ ರೆಕಾರ್ಡ್ ಉಡೀಸ್ ಮಾಡಿದ್ದು, ಅತಿ ಹೆಚ್ಚಿನ ರೈಡರ್ ಶಿಪ್ ದಾಖಲೆ ಬರೆದಿದೆ. ಇದನ್ನೂ ಓದಿ: ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಆ.17ರವರೆಗೆ ವಿಸ್ತರಣೆ
ಕಳೆದ 5 ತಿಂಗಳ ಹಿಂದಷ್ಟೇ ಅಂದರೆ ಯುಗಾದಿ ಸಂದರ್ಭದಲ್ಲಿ 15 ವರ್ಷಗಳ `ನಮ್ಮ ಮೆಟ್ರೋ’ ಇತಿಹಾಸದಲ್ಲಿ 10.73 ಲಕ್ಷ ಜನರು ಪ್ರಯಾಣಿಸಿದ್ದು, ದಾಖಲೆಯಾಗಿತ್ತು. ಇದೀಗ ಈ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಯಾಗಿದೆ.

