ಲಂಡನ್: ಗುಂಡಿನ ದಾಳಿಯಲ್ಲಿ ಒಂದು ಮಗುವೂ ಸೇರಿದಂತೆ 6 ಮಂದಿ ಮೃತಪಟ್ಟಿರುವ ಘಟನೆ ಇಂಗ್ಲೆಂಡ್ ದೇಶದ ಪ್ಲೈಮೌತ್ ನಗರದಲ್ಲಿ ನಡೆದಿದೆ.
ನೈರುತ್ಯ ಇಂಗ್ಲೆಂಡ್ ಪ್ರಾಂತ್ಯದ ಪ್ಲೈಮೌತ್‍ನಲ್ಲಿ ಗುರುವಾರ ಸಂಜೆ ದುರ್ಘಟನೆ ನಡೆದಿದ್ದು, ಇಬ್ಬರು ಮಹಿಳೆಯರು, ಮೂವರು ಪುರುಷರು ಸ್ಥಳದಲ್ಲೇ ಬಲಿಯಾಗಿದ್ದಾರೆ. ಈ ಪೈಕಿ ಸಾವಿಗೀಡಾದ ಓರ್ವನನ್ನು ಗುಂಡಿನ ದಾಳಿಗೈದ ಆಗಂತುಕನೇ ಇರಬೇಕು ಎಂದು ಶಂಕಿಸಲಾಗಿದೆ.
Advertisement
The incident in Plymouth is shocking and my thoughts are with those affected.
I have spoken to the Chief Constable and offered my full support.
I urge everyone to remain calm, follow police advice and allow our emergency services to get on with their jobs.
— Priti Patel (@pritipatel) August 12, 2021
Advertisement
ಸಾಧಾರಣವಾಗಿ ಆ ಭಾಗದಲ್ಲಿ ಇಂತಹ ಕೃತ್ಯಗಳು ಕಡಿಮೆಯಾಗಿದ್ದು, ಬರೋಬ್ಬರಿ 11 ವರ್ಷಗಳ ನಂತರ ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಲ್ಲಿನ ಹೋಮ್ ಸೆಕ್ರೆಟರಿ ಪ್ರೀತಿ ಪಟೇಲ್, ಪ್ಲೈಮೌತ್‍ನಲ್ಲಿ ನಡೆದ ದುರ್ಘಟನೆ ಅತ್ಯಂತ ಆತಂಕಕಾರಿಯಾಗಿದ್ದು, ಅದಕ್ಕಾಗಿ ವಿಷಾದಿಸುತ್ತೇನೆ. ಗುಂಡಿನ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಮನೆಯವರಿಗೆ ಸಾಂತ್ವನ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾರುಗಳಿಗೆ ಬೆಂಕಿ ಹಚ್ಚಿದವರನ್ನು ಸಂಜೆಯೊಳಗೆ ಬಂಧನ ಮಾಡೋ ಸಾಧ್ಯತೆ: ಸತೀಶ್ ರೆಡ್ಡಿ
Advertisement
Advertisement
ಈ ಘಟನೆಯನ್ನು ಕಣ್ಣಾರೆ ಕಂಡ ಶಾರೋನ್ ಟರ್ನರ್ ಅಲ್ಲಿ ಏನೇನು ನಡೆಯಿತು ಎನ್ನುವುದನ್ನು ಹಂಚಿಕೊಂಡಿದ್ದಾರೆ. ಶಸ್ತ್ರ ಹಿಡಿದುಕೊಂಡು ಬಂದಿದ್ದ ವ್ಯಕ್ತಿ ಬಾಗಿಲನ್ನು ಒದ್ದು ಒಳಗೆ ಪ್ರವೇಶಿಸಿ ತಕ್ಷಣ ಗುಂಡಿನ ಮಳೆ ಸುರಿಸಿದ. ಮನೆಯೊಳಗಿದ್ದ ತಾಯಿ, ಮಗುವನ್ನು ಗುಂಡಿಕ್ಕಿ ಕೊಂದ. ಆತ ಕಪ್ಪು ಮತ್ತು ಬೂದು ಬಣ್ಣದ ಬಟ್ಟೆ ತೊಟ್ಟಿದ್ದ ಎಂದು ಹೇಳಿದ್ದಾರೆ. ಬಳಿಕ ಅಲ್ಲಿಂದ ಹೊರಬಂದ ಆತ ಮತ್ತಿಬ್ಬರಿಗೆ ಗುಂಡಿಕ್ಕಿದ್ದಾನೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: BJP ಜೊತೆಗೆ ಟ್ವಿಟ್ಟರ್ ಕೈಜೋಡಿಸಿ ಪ್ರಜಾತಂತ್ರ ಹತ್ತಿಕ್ಕುವ ಕೃತ್ಯದಲ್ಲಿ ತೊಡಗಿದೆ: ಪ್ರಿಯಾಂಕಾ ಗಾಂಧಿ
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಮುಂದುವರಿದಿದ್ದು, ದುರ್ಘಟನೆ ನಡೆದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸುಮಾರು 11 ವರ್ಷಗಳ ನಂತರ ಈ ಬಗೆಯ ಘಟನೆ ನಡೆದಿರುವುದರಿಂದ ಸಹಜವಾಗಿಯೇ ಅಲ್ಲಿನ ನಿವಾಸಿಗಳು ಭಯಭೀತರಾಗಿದ್ದಾರೆ.