ಬೆಂಗಳೂರು: ರಾಜ್ಯ ಸರ್ಕಾರ ನಿನ್ನೆಯಷ್ಟೇ 262 ಹೊಸ 108 ಅಂಬುಲೆನ್ಸ್ (108 Ambulance) ಖರೀದಿಗೆ ಒಪ್ಪಿಗೆ ಸೂಚಿಸಿದೆ. ಆದ್ರೆ, ಇರುವ 108 ಅಂಬುಲೆನ್ಸ್‌ಗೆ ಸಂಬಂಧಿಸಿದ ನೂರೆಂಟು ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ಯಾವುದೇ ಪ್ರಯತ್ನಗಳನ್ನು ನಡೆಸಿದಂತೆ ಕಾಣುತ್ತಿಲ್ಲ.
Advertisement
108 ಅಂಬುಲೆನ್ಸ್ ನಿರ್ವಹಣೆ ಹೊಣೆ ಹೊತ್ತಿರುವ ಹೈದರಾಬಾದ್ ಮೂಲದ ಜಿವಿಕೆ (GVK) ಸಂಸ್ಥೆ ವಿರುದ್ಧ ನೌಕರರ ಸಂಘ ಸಿಡಿದೆದ್ದಿದೆ. ಸಿಬ್ಬಂದಿಯ ವೇತನ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 31 ಕೋಟಿ ಹಣ ಬಿಡುಗಡೆ ಮಾಡಿದೆ. ಆದ್ರೆ, ಇದನ್ನು ಸಿಬ್ಬಂದಿಗೆ ವರ್ಗಾಯಿಸುವ ಕೆಲಸವನ್ನು ಜಿವಿಕೆ ಸಂಸ್ಥೆ ಮಾಡಿಲ್ಲ. ಇದನ್ನೂ ಓದಿ: ವಿಕೃತಕಾಮಿ ಉಮೇಶ್ ರೆಡ್ಡಿಗೆ ರಿಲೀಫ್ – ಸುಪ್ರೀಂನಿಂದ ಗಲ್ಲು ಶಿಕ್ಷೆ ರದ್ದು
Advertisement
Advertisement
ಕೇಳಿದ್ರೆ, ಹೈದರಾಬಾದ್ ಹೆಡ್ ಆಫೀಸ್‍ನಿಂದ ವೇತನ ಹೆಚ್ಚಳದ ಆದೇಶ ಬಂದಿಲ್ಲ ಎಂದು ಬೆಂಗಳೂರು (Bengaluru) ಕಚೇರಿ ಅಧಿಕಾರಿಗಳು ಹೇಳುತ್ತಿದ್ದು, ಇದಕ್ಕೆ ಸಿಟ್ಟಿಗೆದ್ದಿರುವ 108 ಅಂಬುಲೆನ್ಸ್ ನೌಕರರ ಸಂಘ ಮತ್ತೊಮ್ಮೆ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದೆ. ಕೂಡಲೇ ಆರೋಗ್ಯ ಸಚಿವರು ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದೆ. ಜಿವಿಕೆ ಕಂಪನಿಯನ್ನು ವಜಾ ಮಾಡುವಂತೆ ಪಟ್ಟು ಹಿಡಿದಿದೆ. ಇದನ್ನೂ ಓದಿ: ಕೋಟೆ ನಾಡಿನಲ್ಲಿ ದಾರುಣ ಘಟನೆ – ಒಂದೇ ಕುಟುಂಬದ ಮೂವರು ಆತ್ಮಹತ್ಯೆ