ChitradurgaCrimeDistrictsKarnatakaLatestLeading NewsMain Post

ಕೋಟೆ ನಾಡಿನಲ್ಲಿ ದಾರುಣ ಘಟನೆ – ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಚಿತ್ರದುರ್ಗ: ಹರಸಾಹಸ ಪಟ್ಟು ಮನೆಯ ಬಾಗಿಲು ಓಪನ್ ಮಾಡ್ತಿರೊ ಪೊಲೀಸರು (Police). ಮನೆಯೊಳಗೆ ದಿಕ್ಕಿಗೊಂದು ಬಿದ್ದಿರೋ ಮೃತ ದೇಹಗಳು. ಈ ಮನಕಲುಕುವ ದೃಶ್ಯಗಳು ಕಂಡುಬಂದಿದ್ದು ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿಯಲ್ಲಿ.

ಹೌದು, ಒಂದೇ ಕುಟುಂಬದ ಮೂವರು ಮಹಿಳೆಯರು (Women) ಆತ್ಮಹತ್ಯೆಗೆ (Suicide) ಮಾಡಿಕೊಂಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಗೋಪನಹಳ್ಳಿಯ ದಲಿತ ಕಾಲೋನಿಯಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದ ತಾಯಿ ಮತ್ತು ಇಬ್ಬರು ಮಕ್ಕಳು ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಆಸೀಸ್‌ಗೆ 4 ರನ್‌ಗಳ ರೋಚಕ ಜಯ – ಸೆಮಿಸ್ ಕನಸು ಜೀವಂತ

ತಿಪ್ಪಕ್ಕ (70), ಮಕ್ಕಳಾದ ಮಾರಕ್ಕ(50), ದ್ಯಾಮಕ್ಕ (40) ಆತ್ಮಹತ್ಯೆ ಮಾಡಿಕೊಂಡವರು. ಕಳೆದ ಒಂದು ತಿಂಗಳ ಹಿಂದೆಯಷ್ಟೇ ತಿಪ್ಪಕ್ಕನ ಮಗ ದ್ಯಾಮಣ್ಣ(45) ಅನಾರೋಗ್ಯದಿಂದ ಸಾವಿಗೀಡಾಗಿದ್ರು. ಮನೆಗೆ ಆಧಾರವಾಗಿದ್ದ ಮನೆ ಮಗನ ಸಾವಿನಿಂದ ಮನನೊಂದು, ತಾಯಿ ಹಾಗೂ ಇಬ್ಬರು ಸಹೋದರಿಯರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅಲ್ಲದೇ ಮದುವೆಯಾಗಿದ್ದ ಇಬ್ಬರು ಸಹೋದರಿಯರೂ ಮಾನಸಿಕ ಕಾಯಿಲೆಯಿಂದ (Metal Health) ಬಳಲುತ್ತಾ ಗಂಡಂದಿರನ್ನು ಬಿಟ್ಟು ತವರು ಮನೆ ಸೇರಿದ್ದರು. ಇದನ್ನೂ ಓದಿ: ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ರು ʻರಾಜಾ ರಾಣಿʼ ಖ್ಯಾತಿಯ ಸಮೀರ್ ಆಚಾರ್ಯ ದಂಪತಿ

CRIME 2

ಮರಳಿ ಬಂದ ಬಳಿಕ ಗ್ರಾಮದಲ್ಲಿ ಯಾರೊಂದಿಗೂ ಮಾತನಾಡದೇ ದೂರ ಉಳಿದಿದ್ದರು. ಗುರುವಾರ ಬೆಳಗಿನ ಜಾವ ಮೂವರು ಮಹಿಳೆಯರು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ಈ ವೇಳೆ ಇಡೀ ದಿನ ಮನೆಯಿಂದ ಯಾರೊಬ್ಬರೂ ಹೊರಬಾರದ ಹಿನ್ನಲೆಯಲ್ಲಿ ರಾತ್ರಿ ಪೊಲೀಸರ (Police) ಸಮ್ಮುಖದಲ್ಲಿ ಗ್ರಾಮಸ್ಥರು, ಮನೆ ಬಾಗಿಲು ತೆಗೆಸಿ, ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಘಟನೆಯಿಂದಾಗಿ ಇಡೀ ಗ್ರಾಮ ಬೆಚ್ಚಿಬಿದ್ದಿದ್ದು, ಸಮೀಪದ ಗ್ರಾಮಗಳಿಗೂ ಆತಂಕ ವ್ಯಾಪಿಸಿದೆ. ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button