– ಇವರು ಈಗ ವಿಶ್ವದ ಅತ್ಯಂತ ಹಿರಿಯ ಯೂಟ್ಯೂಬರ್
ಹೈದರಾಬಾದ್: ಯೂಟ್ಯೂಬ್‍ನಲ್ಲಿ ವಿವಿಧ ಬಗೆಯ ಅಡುಗೆಗಳನ್ನು ಹೇಳಿಕೊಡುವ ಅನೇಕ ಚಾನಲ್‍ಗಳಿವೆ. ಚೆಫ್‍ಗಳಿಂದ ಹಿಡಿದು ಗೃಹಿಣಿಯರೂ ಕೂಡ ಯೂಟ್ಯೂಬ್‍ನಲ್ಲಿ ಅಡುಗೆ ವಿಡಿಯೋಗಳನ್ನ ಹಾಕ್ತಿರ್ತಾರೆ. ಇವರೆಲ್ಲರ ಮಧ್ಯೆ ತನ್ನ ಹಳ್ಳಿ ಸ್ಟೈಲ್ ಅಡುಗೆಗಳ ಮೂಲಕ 106 ವರ್ಷದ ವದ್ಧೆಯೊಬ್ಬರು ಈಗ ಇಂಟರ್ನೆಟ್ ಸ್ಟಾರ್ ಆಗಿದ್ದಾರೆ.
ಆಂಧ್ರಪ್ರದೇಶದ ಮಸ್ತಾನಮ್ಮ ವಿಶ್ವದ ಅತ್ಯಂತ ಹಿರಿಯ ಯೂಟ್ಯೂಬರ್ ಎನಿಸಿಕೊಂಡಿದ್ದಾರೆ. ಮಸ್ತಾನಮ್ಮ ಅವರು ಕಂಟ್ರಿ ಫುಡ್ಸ್ ಎಂಬ ಸ್ವಂತ ಯೂಟ್ಯೂಬ್ ಚಾನಲ್ ಹೊಂದಿದ್ದಾರೆ. ಮಸ್ತಾನಮ್ಮ ಅವರ ಚಾನಲ್‍ಗೆ ಸದ್ಯಕ್ಕೆ 2 ಲಕ್ಷದ 61 ಸಾವಿರಕ್ಕೂ ಹೆಚ್ಚು ಸಬ್ಸ್‍ಸ್ಕ್ರೈಬರ್‍ಗಳಿದ್ದಾರೆ.
Advertisement
Advertisement
ಹಳ್ಳಿ ವಾತಾವರಣದಲ್ಲಿ, ಸೌದೆ ಒಲೆಯಲ್ಲಿ ಮಸ್ತಾನಮ್ಮ ಅಡುಗೆ ಮಾಡ್ತಾರೆ. ಚಿಕನ್ ಬಿರಿಯಾನಿ, ಮೀನು ಸಾರು, ಮೊಟ್ಟೆಯ ರೆಸಿಪಿಗಳು, ಬದನೆಕಾಯಿ ಮಸಾಲಾ, ಬೆಂಡೇಕಾಯಿ ಫ್ರೈ, ಫ್ರೆಂಚ್ ಫ್ರೈಸ್ ಹೀಗೆ ವಿವಿಧ ಬಗೆಯ ವೆಜ್ ಹಾಗೂ ನಾನ್ ವೆಜ್ ಅಡುಗೆಗಳನ್ನ ಮಾಡೋದು ಹೇಗೆ ಅನ್ನೋದನ್ನ ಮಸ್ತಾನಮ್ಮ ವಿಡಿಯೋಗಳಲ್ಲಿ ತೋರಿಸಿಕೊಡ್ತಾರೆ. ಅಜ್ಜಿಯ ಅಡುಗೆಗಳನ್ನ ತುಂಬಾ ಇಷ್ಟ ಪಡೋ ಮಸ್ತಾನಮ್ಮ ಅವರ ಮರಿಮೊಮ್ಮಗ ಕೆ. ಲಕ್ಷ್ಮಣ್ ಈ ಯೂಟ್ಯೂಬ್ ಚಾನಲ್‍ನ ನಿರ್ವಹಣೆ ಮಾಡ್ತಾರೆ.
Advertisement
Advertisement
ಒಂದು ರಾತ್ರಿ ತುಂಬಾ ಹಸಿವಾಗಿ ನಾನು ಮತ್ತು ನನ್ನ ಸ್ನೇಹಿತರು ಸೇರಿ ಅಡುಗೆ ಮಾಡಿದೆವು. ಜನರು ಅಡುಗೆ ಮಾಡೋದನ್ನ ಕಲಿಯಲು ಸಹಾಯವಾಗವಂತೆ ಯೂಟ್ಯೂಬ್ ಚಾನಲ್ ಶುರು ಮಾಡಬೇಕು ಅಂದುಕೊಂಡೆವು. ಆಶ್ಚರ್ಯಕರ ರೀತಿಯಲ್ಲಿ ನಮ್ಮ ಮೊದಲ ವಿಡಿಯೋ ವೈರಲ್ ಆಯ್ತು. ಆಗಲೇ ಈ ಚಾನಲ್ ಶುರು ಮಾಡಿದ್ದು. ತಾಜಾ ಸಾಮಗ್ರಿಗಳನ್ನ ಬಳಸಿ ಸಾಂಪ್ರದಾಯಿಕ ಶೈಲಿಯಲ್ಲಿ ಹೇಗೆ ಅಡುಗೆ ಮಾಡಬಹುದು ಅನ್ನೋದನ್ನ ಜನರು ಅರ್ಥ ಮಾಡಿಕೊಂಡು ಕಲಿತುಕೊಳ್ಳಲು ನಮ್ಮ ಅಜ್ಜಿಯ ಸಹಾಯ ಪಡೆದು ಚಾನಲ್ ಆರಂಭಿಸಿದೆವು. ಮೊದಲಿಗೆ ನಾವು ವಿಡಿಯೋ ಮಾಡುವಾಗ ಅಜ್ಜಿಗೆ ಏನಾಗುತ್ತಿದೆ ಎಂದು ಗೊತ್ತಾಗುತ್ತಿರಲಿಲ್ಲ. ಆದ್ರೆ ಅವರಿಗೆ ಇದರ ಬಗ್ಗೆ ಅರ್ಥವಾದ ನಂತರ ತುಂಬಾ ಖುಷಿಪಟ್ರು ಅಂತಾರೆ ಲಕ್ಷ್ಮಣ್.
ಗ್ರಾಮದಲ್ಲಿ ಮಸ್ತಾನಮ್ಮ ಅವರ ಅಡುಗೆ ಅಂದ್ರೆ ಎಲ್ಲರಿಗೂ ಪ್ರಿಯ. ವಿಡಿಯೋಗಳಲ್ಲಿ ಮಸ್ತಾನಮ್ಮ ಅವರು ಅಡುಗೆ ಮಾಡಿ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಬಡಿಸೋದನ್ನ ನೋಡಬಹುದು.