ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ಮತದಾನ (Voting) ಪ್ರಾರಂಭವಾಗಿದೆ. ಅರ್ರೆ ಮೇ 10ಕ್ಕೆ ಮತದಾನ ಅಲ್ವೆ ಎಂದು ನೀವು ಹೇಳಬಹುದು.
ಚುನಾವಣಾ ಆಯೋಗ ಇದೇ ಮೊದಲಬಾರಿಗೆ ರಾಜ್ಯದಲ್ಲಿ ವಿಶೇಷ ಚೇತನರು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ವಯೋವೃದ್ಧರು ತಮ್ಮ ಮನೆಯಿಂದಲೇ ಮತ ಚಲಾಯಿಸಿದ್ದಾರೆ. ಬ್ಯಾಲೆಟ್ ಪೇಪರ್ ಮೂಲಕ ಮಾಡುವ ಮತದಾನದ ಪ್ರಕ್ರಿಯೆಯನ್ನು ಏಪ್ರಿಲ್ 29 ರಿಂದ ಪ್ರಾರಂಭಿಸಲಾಗಿದ್ದು, ಮೇ 6 ರಂದು ಕೊನೆಗೊಳ್ಳಲಿದೆ. ಇದನ್ನೂ ಓದಿ: ಧರ್ಮ, ಜಾತಿ ವಿಭಜನೆ ಬಿಜೆಪಿಗೆ ಲಾಭ, ಜನರಿಗಲ್ಲ: ಪ್ರಿಯಾಂಕಾ ಗಾಂಧಿ
Advertisement
Advertisement
104ರ ವೃದ್ಧೆ ಮತದಾನ:
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಹಿತ್ಲಳ್ಳಿ ಗ್ರಾಮದ 104ರ ವೃದ್ಧೆ ಸುಬ್ಬಿ ಗೋಪಾಲಕೃಷ್ಣ ಭಟ್ ಅವರು ತಮ್ಮ ಮನೆಯಿಂದಲೇ ಮತವನ್ನು ಚಲಾಯಿಸಿದ್ದು ಜಿಲ್ಲೆಯಲ್ಲಿ ಅತ್ಯಂತ ಹಿರಿಯ ಮತದಾರರು ಇವರಾಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಬಿಜೆಪಿ ಭ್ರಷ್ಟ ನಾಯಕರನ್ನು ಜೈಲಿಗೆ ಕಳುಹಿಸುತ್ತೇವೆ: ಬಿಕೆ ಹರಿಪ್ರಸಾದ್
Advertisement
ಜಿಲ್ಲೆಯಲ್ಲಿ ಎಷ್ಟಿದ್ದಾರೆ ಮತದಾರರು?
* ಅಂಗವಿಕಲ ಮತದಾರರ ಸಂಖ್ಯೆ- 14,724
* 80 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆ – 27,399
Advertisement
ಎಲ್ಲಿ ಎಷ್ಟು ಮತದಾನ ?
* 80 ವರ್ಷ ಮೇಲ್ಪಟ್ಟವರಲ್ಲಿ ಮತಚಲಾಯಿಸಿದವರ ಸಂಖ್ಯೆ- 681
* ಅಂಗವಿಕಲರು ಚಲಾಯಿಸಿದ ಮತಗಳು- 176
* ಒಟ್ಟುಮತದಾನ – 857