ಬೆಂಗಳೂರು: ರಾಜ್ಯ ಬಜೆಟ್‍ನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಲೋಕೋಪಯೋಗಿ ಇಲಾಖೆಗೆ ಶೇಕಡಾವಾರು ಟಾಪ್ ಅನುದಾನ ಬಿಡುಗಡೆ ಮಾಡುವ ಮೂಲಕ, ಅಣ್ಣನ ಮೇಲಿನ ಪ್ರೀತಿ ವ್ಯಕ್ತಪಡೆಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಜೆಟ್‍ನಲ್ಲಿ ಲೋಕೋಪಯೋಗಿ ಇಲಾಖೆಗೆ 9,271 (4%) ಕೋಟಿ ರೂ. ಅನುದಾನ ನೀಡಿದ್ದರು. ಆದರೆ ಈ ಬಾರಿ ಕುಮಾರಸ್ವಾಮಿ ಅವರು 10,200 (4%) ಕೋಟಿ ರೂ.ಗಳ ಅನುದಾನ ಹಂಚಿಕೆ ಮಾಡುವ ಮೂಲಕ 929 ಕೋಟಿ ರೂ. ಹೆಚ್ಚಿನ ಹಣವನ್ನು ಲೋಕೋಪಯೋಗಿ ಇಲಾಖೆಗೆ ನೀಡಿದ್ದಾರೆ.
Advertisement
Advertisement
ಶಿಕ್ಷಣ ಇಲಾಖೆಯನ್ನು ಕುಮಾರಸ್ವಾಮಿ ಅವರು ಭಾರೀ ಕಡೆಗಣನೆ ಮಾಡಿದ್ದು, ಸಿದ್ದರಾಮಯ್ಯ ಅವರಿಗಿಂತ 283 ಕೋಟಿ ರೂ. ಕಡಿಮೆ ಅನುದಾನ ಬಿಡುಗಡೆ ಮಾಡಲಾಗಿದೆ. ಒಳಾಡಳಿತ ಹಾಗೂ ಸಾರಿಗೆ ಇಲಾಖೆಗೆ ಕಳೆದ ಬಾರಿಗಿಂತ 862 ಕೋಟಿ ರೂ. ಕಡಿಮೆ ಅನುದಾನ ಹಂಚಿಕೆಯಾಗಿದೆ.
Advertisement
ಹೀಗಾಗಿ ಇಲ್ಲಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರು ಯಾವ ಇಲಾಖೆಗೆ ಎಷ್ಟು ಹಣವನ್ನು ಮೀಸಲಿಟ್ಟಿದ್ದಾರೆ ಎನ್ನುವ ಮಾಹಿತಿಯನ್ನು ನೀಡಲಾಗಿದೆ.