ದಾವಣಗೆರೆ: ನಗರದ ಪಿಬಿ ರಸ್ತೆಯ ಬಾರ್ ವೊಂದರ ಬಳಿ ರಾಶಿ ರಾಶಿ ಆಧಾರ್ ಕಾರ್ಡ್ ಗಳು ಪತ್ತೆಯಾಗಿದೆ.
ನಗರದ ಪಿ.ಬಿ ರಸ್ತೆಯ ಬಳಿ ಇರುವ ಭವಾನಿ ಬಾರ್ ಬಳಿ ವ್ಯಕ್ತಿಯೊಬ್ಬ ಮದ್ಯ ಸೇವನೆ ಮಾಡಿ ಮಲಗಿದ್ದಾನೆ. ಇತನ ಬ್ಯಾಗನಿಂದ ರಾಶಿ ರಾಶಿ ಆಧಾರ್ ಕಾರ್ಡ್ ಗಳು ಬಿದ್ದಿದ್ದವು. ಇದರಿಂದ ಅನುಮಾನಗೊಂಡು ಸಾರ್ವಜನಿಕರು ಕುಡುಕ ವ್ಯಕ್ತಿಯನ್ನು ಮಾತನಾಡಿಸಲು ಪ್ರಯತ್ನಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.
ಸಾರ್ವಜನಿಕರು ಪತ್ತೆಯಾಗಿದ್ದ ಆಧಾರ್ ಕಾರ್ಡ್ ನಲ್ಲಿದ್ದ ಫೋನ್ ನಂಬರಿಗೆ ಕರೆ ಮಾಡಿದಾಗ, ಆಧಾರ್ ಕಾರ್ಡ್ ಗಳು ಗ್ರಾಹಕರ ಕೈ ಸೇರಿಲ್ಲವೆಂದು ತಿಳಿದುಬಂದಿದೆ. ಖುದ್ದು ಸಾರ್ವಜನಿಕರೆ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ನಂಬರ್‍ಗಳಿಗೆ ಕರೆ ಮಾಡಿ ಆಧಾರ್ ಕಾರ್ಡ್ ಗಳನ್ನು ಸಂಬಂಧಪಟ್ಟವರಿಗೆ ತಲುಪಿಸಿದ್ದಾರೆ.
ಅಲ್ಲದೇ ನಕಲಿ ಆಧಾರ್ ಕಾರ್ಡ್ ಗಳ ಜಾಲ ಇರುವ ಬಗ್ಗೆ ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದು, ರಾಶಿಗಟ್ಟಲೇ ಆಧಾರ್ ಕಾರ್ಡ್ ಗಳು ಕುಡುಕನ ಬಳಿಗೆ ಎಲ್ಲಿಂದ ಬಂದವು ಎಂಬ ಬಗ್ಗೆ ಅನುಮಾನಗೊಂಡಿದ್ದಾರೆ. ಪತ್ತೆಯಾದ ಆಧಾರ್ ಕಾರ್ಡ್ ಗಳ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
https://www.youtube.com/watch?v=OtOXXrAb-tM