-ಎಫ್‌ಎಸ್‌ಎಲ್ ವರದಿಯಲ್ಲಿ ಬಹಿರಂಗ
ಆನೇಕಲ್: ಮೊಬೈಲ್ ಬಳಕೆಯಿಂದ ಸಿಕ್ಕಿಬಿದ್ದಿದ್ದ ಪ್ರಜ್ವಲ್ ರೇವಣ್ಣ (Prajwal Revanna) ಬಳಿಯಿದ್ದ ಪೆನ್‌ಡ್ರೈವ್‌ನಲ್ಲಿ ಇದೀಗ 100 ಸೆಕ್ಸ್ ವಿಡಿಯೋಗಳು ಪತ್ತೆಯಾಗಿವೆ, ಅಲ್ಲದೇ ಜೈಲಿನ ಟಿವಿಯಲ್ಲಿಯೂ ಸೆಕ್ಸ್ ವಿಡಿಯೋ ನೋಡುತ್ತಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಎಫ್‌ಎಸ್‌ಎಲ್ (FSL) ವರದಿ ಬಂದಿದ್ದು, ಸೆಲ್‌ನಲ್ಲಿ ಪತ್ತೆಯಾಗಿದ್ದ ಪೆನ್‌ಡ್ರೈವ್‌ನಲ್ಲಿ ಸುಮಾರು 100 ಅಶ್ಲೀಲ ವಿಡಿಯೋಗಳು ಇರುವುದು ತಿಳಿದುಬಂದಿದೆ. ಅಲ್ಲದೇ ಕೈದಿಗಳ ಬ್ಯಾರಕ್‌ನಲ್ಲಿ ಅಳವಡಿಸಲಾಗಿದ್ದ ಟಿವಿಗೆ ಪೆನ್‌ಡ್ರೈವ್ ಹಾಕಿ ಪ್ರಜ್ವಲ್ ಈ ವೀಡಿಯೊಗಳನ್ನು ವೀಕ್ಷಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಪತ್ತೆಗೆ AI ಮೊರೆ ಹೋದ ಜಿಬಿಎ
ಪೆನ್‌ಡ್ರೈವ್ ಹಾಗೂ ಮೊಬೈಲ್‌ನಲ್ಲಿದ್ದ ಒಟ್ಟು 173 ಫೈಲ್‌ಗಳ ಪೈಕಿ, ಮೊಬೈಲ್‌ನಲ್ಲಿ ಕೇವಲ ಚಲನಚಿತ್ರಗಳು ಮತ್ತು ವೆಬ್ ಸೀರೀಸ್‌ಗಳು ಮಾತ್ರ ದೊರೆತಿವೆ. ಆದರೆ ಪೆನ್‌ಡ್ರೈವ್‌ನಲ್ಲಿ 100 ಅಶ್ಲೀಲ ವಿಡಿಯೋಗಳು ಇರುವುದು ದೃಢಪಟ್ಟಿದೆ. ಆದರೆ ಈ ಪೆನ್‌ಡ್ರೈವ್ ಅನ್ನು ಯಾವ ಸಮಯದಲ್ಲಿ ಬಳಸಲಾಗಿದೆ ಎಂಬುದನ್ನು ಖಚಿತಪಡಿಸಲು ಪೊಲೀಸರು ಮತ್ತೆ ಎಫ್‌ಎಸ್‌ಎಲ್ ತಜ್ಞರ ಸಹಾಯ ಕೋರಿದ್ದಾರೆ.
ಕಳೆದ ತಿಂಗಳು ಆ.11ರಂದು ಸಿಸಿಬಿ ಪೊಲೀಸರು ನಡೆಸಿದ ದಿಢೀರ್ ದಾಳಿಯ ವೇಳೆ ಪ್ರಜ್ವಲ್ ರೇವಣ್ಣ ಸಹಕೈದಿ ಪ್ರತಾಪ್ ರಾಯ್ ಅವರ ಸೆಲ್‌ನಲ್ಲಿ ಮೊಬೈಲ್ ಮತ್ತು ಪೆನ್‌ಡ್ರೈವ್ ಪತ್ತೆಯಾಗಿದ್ದವು. ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಜಪ್ತಿ ಮಾಡಿದ್ದ ವಸ್ತುಗಳನ್ನು ಎಫ್‌ಎಸ್‌ಎಲ್‌ಗೆ ಪರೀಕ್ಷೆಗೆ ಕಳುಹಿಸಲಾಗಿತ್ತು.ಇದನ್ನೂ ಓದಿ: BRICS Summit | ವರ್ಷಗಳ ಹಿಂದೆಯೆ ಅರ್ಜಿ ಸಲ್ಲಿಸಿದ್ರೂ ಪಾಕಿಸ್ತಾನಕ್ಕೆ ಸಿಗದ ಬ್ರಿಕ್ಸ್ ಸದಸ್ಯತ್ವ

