ಮಂಡ್ಯ: ಲೋಕಸಭೆ ಚುನಾವಣೆಗೆ (Lok Sabha Elections 2024) ಮಂಡ್ಯ ಬಿಜೆಪಿ-ಜೆಡಿಎಸ್ (BJP-JDS Alliance) ಮೈತ್ರಿ ಟಿಕೆಟ್ 100% ನನಗೆ ಎಂದು ಸಂಸದೆ ಸುಮಲತಾ (Sumalatha) ಭರವಸೆ ಮಾತುಗಳನ್ನಾಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಮಂಡ್ಯ (Mandya) ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ 100% ನನಗೆ. ಯಶ್-ದರ್ಶನ್ ದೊಡ್ಡ ಶಕ್ತಿ ಬರೋದು ಇದ್ರೆ ಹಾರ್ಟ್ಲಿ ವೆಲ್‌ಕಮ್. ಕರ್ನಾಟಕದಲ್ಲಿ ಯಾವಾಗ ಅಭ್ಯರ್ಥಿ ಪಟ್ಟಿ ಬರುತ್ತೊ ಅವಗ್ಲೆ ನಮ್ಮದು ಕೂಡ ಬರುತ್ತೆ. ಶುಭ ಸಮಾರಂಭಕ್ಕೆ ಐದು ವರ್ಷದಲ್ಲಿ ಭಾಗವಹಿಸಿದ್ದೇನೆ. ಆದರೆ ಈ ಸಂದರ್ಭದಲ್ಲಿ ಅದು ಹೈಲೆಟ್ ಆಗ್ತಿದೆ ಅಷ್ಟೆ. ದೆಹಲಿಗೆ ಹೋಗುವ ಅವಶ್ಯಕತೆ ಇಲ್ಲ. ನನ್ನ ಬರಲು ಹೇಳಿದ್ರೆ ಮಾತ್ರ ಹೋಗ್ತೇನೆ. ಆ ತರಹದ ಪ್ಲಾನ್ ಆಗಿಲ್ಲ. ಚುನಾವಣೆ ತಯಾರಿ ವಿಚಾರ ಯಾವುದೇ ನಿರ್ದಿಷ್ಟ ಪ್ಲಾನ್ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಟಿಕೆಟ್ ಘೋಷಣೆಗೂ ಮುನ್ನ ಆದಿಚುಂಚನಗಿರಿಗೆ ಸುಮಲತಾ ಭೇಟಿ
Advertisement
Advertisement
ಮಂಡ್ಯದಲ್ಲಿ ಮನೆ ಕಟ್ಟುವ ವಿಚಾರವಾಗಿ ಮಾತನಾಡಿ, ಮಂಡ್ಯದಲ್ಲಿ ನನ್ನ ಮನೆ ಇದೆ. ಅದು ರೆಂಟ್ ಮನೆ. ಮುಂದೆ ಮಂಡ್ಯದಲ್ಲಿ ಮನೆ ಕಟ್ಟುತ್ತೇವೆ. ಇದು ನಮ್ಮ ಮನೆ. ಅಂಬರೀಶ್ ಇದ್ದ ಕಾಲದಿಂದಲೂ ಈ ಮನೆಯಲ್ಲಿ ರೆಂಟ್‌ನಲ್ಲೇ ಇದ್ವಿ. ಅಂಬರೀಶ್ ಅವರು ಎಲೆಕ್ಷನ್ ಗೆದ್ದವರು ಸಾಧಕ-ಬಾಧಕ ಗೊತ್ತಿದೆ. ಹನಕೆರೆ ಬಳಿ ಲ್ಯಾಂಡ್ ತೆಗೆದುಕೊಂಡು ಗುದ್ದಲಿ ಪೂಜೆ ಮಾಡಿ ಮನೆ ಕಟ್ಟುವ ಆಸೆ ಇತ್ತು. ಆದ್ರೆ ಅದರಲ್ಲಿ ರಾಜಕಾರಣ ನಡೆಯಿತು. ಮನೆ ಕಟ್ಟುವಾಗ ಅಡಚಣೆ, ಪ್ಲಾಬ್ಲಂ ಕ್ರಿಯೆಟ್ ಮಾಡಿದ್ರು. ನ್ಯೂಟ್ರಲ್ ಆಗೋದು ವಾಸಿ ಅಂತ ಆಗಿದ್ದೇನೆ. ದೇವರು ಆಶೀರ್ವಾದ ಮಾಡಿದ್ರೆ ಮುಂದೆ ಮನೆ ಕಟ್ಟೋಣ. ನನಗಿಂತ ಅಭಿಗೆ ಮಂಡ್ಯದಲ್ಲಿ ಮನೆ ಕಟ್ಟಲು ತುಂಬಾ ಆಸೆ ಇದೆ ಎಂದು ತಿಳಿಸಿದರು.
Advertisement
ಕಳೆದ ಬಾರಿ ನಾನು ನಿಂತಿದ್ದು ಪಕ್ಷೇತರ ಅಭ್ಯರ್ಥಿಯಾಗಿ. ಯಾವುದೇ ಒಂದು ಅನುಭವ ಇಲ್ಲದೆ ಚುನಾವಣೆಗೆ ನಿಂತಿದ್ದೆ. ನನಗೆ ಬೇಕಾದವರು ನಿಮ್ಮ ಜೊತೆ ಇರ್ತೇವೆ ಅಂತ ಗಟ್ಟಿಯಾಗಿ ನಿಂತಿದ್ರು. ಇವಾಗ ಸಂದರ್ಭ ಬೇರೆ ಇರುತ್ತೆ. ಚಿಹ್ನೆಯಿಂದ ನಿಲ್ತೇನೆ, ಪಕ್ಷ ಮತ್ತು ಪಕ್ಷದ ಲೀಡರ್ ಏನು ಹೇಳ್ತಾರೆ ನೋಡಬೇಕು. ಇದು ಬೇರೆ ರೀತಿಯಲ್ಲಿ ಚುನಾವಣೆ ನಡೆಯುತ್ತದೆ. ಪ್ರಚಾರ, ಹೋರಾಟ, ಕ್ಯಾಂಪೇನ್ ಡಿಫೆರೆಂಟ್ ಇರುತ್ತೆ. ಯಶ್, ದರ್ಶನ್ ಬಂದ್ರೆ ಬಲ ಇರುತ್ತೆ. ಎಲ್ಲರೂ ಸಪೋರ್ಟ್ ಆಗಿ ಇದ್ದಾರೆ. ನನಗೋಸ್ಕರ ಬರಿ ಸಪೋರ್ಟ್ ಅಲ್ಲ ತ್ಯಾಗ ಮಾಡಿದ್ರು ಅವರು. ಇಬ್ಬರು ಸೂಪರ್ ಸ್ಟಾರ್‌ಗಳು 25 ದಿನ ಸ್ವಾರ್ಥ ಇಲ್ಲದೆ ನನ್ನ ಪರ ನಿಂತಿದ್ರು. ಪದೇ ಪದೇ ಎಲ್ಲಾ ಬಿಟ್ಟು ಬನ್ನಿ ಅನ್ನೋದು ಸರಿಯಲ್ಲ. ನನಗೆ ಮನಸ್ಸು ಒಪ್ಪಲ್ಲ. ಯಶ್, ದರ್ಶನ್ ಒಂದೊಂದು ಮೂವಿ ಮಾಡ್ತಿರುತ್ತಾರೆ. ಅದನ್ನೆಲ್ಲ ಬಿಟ್ಟು ಬನ್ನಿ ಅನ್ನೋದು ಸರಿಯಲ್ಲ. ಅವರು ಬರೋದು ಇದ್ರೆ ಖಂಡಿತವಾಗಿಯೂ ಹಾರ್ಟ್ಲಿ ವೆಲ್ ಕಮ್. ದೊಡ್ಡ ಶಕ್ತಿಯಾಗಿ ನನಗೆ ಇರುತ್ತೆ ಎಂದು ಹೇಳಿದರು. ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲೇ ಸಂಸದೆ ಸುಮಲತಾಗೆ ಶುಭ ಸೂಚನೆ
Advertisement
ಯಶ್ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಲ್ಲ ಎಂಬ ವಿಚಾರವಾಗಿ ಮಾತನಾಡಿ, ರಾಜಕಾರಣ ಗಲೀಜು ಅಂತ ಹೇಳಿದ್ದಾರೆ. ಟೀಕೆ ಬಗ್ಗೆ ತಿಳಿದುಕೊಂಡಿದ್ದಾರೆ. ಅವರು ಬರ್ತಿನಿ ಅಂದರೆ ಸಂತೋಷ ಪಡ್ತೇನೆ. ನನ್ನ ಮನೆಯ ಮಕ್ಕಳು ಥರ ಓಡಾಡಿದ್ದಾರೆ. ಅವತ್ತಿನ ಸ್ಥಿತಿಯಲ್ಲಿ ನನ್ನ ಜೊತೆ ನಿಂತಿದ್ದರು. ಅವರು ಬರಲಿಲ್ಲ ಅಂದ್ರೂ ನಾನು ಬೇಜಾರ್ ಮಾಡ್ಕೋಳಲ್ಲ ಎಂದು ತಿಳಿಸಿದರು.
ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಕುರಿತು ಪ್ರತಿಕ್ರಿಯಿಸಿ, ಇದು ಅತ್ಯಂತ ಭಯಾನಕ ವಿಚಾರ. ಎಲ್ಲರೂ ಸೇರಿ ಖಂಡಿಸಬೇಕು. ಯಾರೂ ಸಮರ್ಥನೆ ಮಾಡೊ ಕೆಲಸ ಮಾಡಬಾರದು. ಅವರಿಗೆ ಕಠಿಣಾತಿ ಕಠಿಣ ಶಿಕ್ಷೆ ಕೊಡಿಸಬೇಕು. ಎಲ್ಲರೂ ಒಂದೇ ಟ್ರ‍್ಯಾಕ್‌ನಲ್ಲಿ ಹೋಗಬೇಕು. ಬೇರೆ ಬೇರೆ ಹೇಳಿಕೆ ಕೊಡೋದು ಅವರ ಪರವಾದ ರೀತಿಯಲ್ಲಿ ಹೇಳಿಕೆ ಕೊಡೋದು ಮಹಾಪರಾಧ. ಮಂಗಳೂರು ಕುಕ್ಕರ್ ಬ್ಲಾಸ್ಟ್ ರೀತಿ ಅಂತಾನೇ ಹೇಳ್ತಾರೆ. ಆದ್ರೆ ಎಲ್ಲದ್ದೂ ಊಹೆನೆ ಇದೆ. ಪೊಲೀಸರು ಸಹ ಕೆಲಸ ಮಾಡ್ತಿದ್ದಾರೆ. ಅವರನ್ನ ಬೇಗ ಅರೆಸ್ಟ್ ಮಾಡ್ತಾರೆ ಎಂಬ ವಿಶ್ವಾಸ ಇದೆ. ರಾಜ್ಯದಲ್ಲಿ ಕಾನೂನು ಸೂವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕಿಂತ ಹೆಚ್ಚಾಗಿ, ಉಗ್ರವಾದಿ ಅಥವಾ ಆತಂಕವಾದಿಗಳು ಈ ರೀತಿಯ ಕೃತ್ಯಗಳನ್ನ ಮಾಡಬಹುದು ಎಂಬಂತೆ ಪ್ರೋತ್ಸಾಹವಂತೂ ಬಂದೇ ಬರುತ್ತೆ. ಯಾರೇ ಆದ್ರೂ ಇದನ್ನ ಉತ್ತೇಜನ ನೀಡುವಂತಹ ಹೇಳಿಕೆ ಕೊಡಬಾರ್ದು ಎಂದರು. ಇದನ್ನೂ ಓದಿ: ಸಂಧಾನ ಬಳಿಕವೂ ಶಮನವಾಗದ ಸುಮಲತಾ-ಸಚ್ಚಿದಾನಂದ ನಡುವಿನ ಮುನಿಸು!