ಬೆಂಗಳೂರು: ಹಾಸಿಗೆಯಲ್ಲಿ ನಿದ್ದೆ ಮಾಡಲಿರುವ 23 ಮಂದಿಗೆ ಭಾರತೀಯ ಕಂಪನಿಯೊಂದು 1 ಲಕ್ಷ ರೂ. ನೀಡಲಿದೆ.
ಕಳೆದ ನವೆಂಬರ್ ತಿಂಗಳಿನಲ್ಲಿ ವೇಕ್ ಫಿಟ್ ಕಂಪನಿ ನಿದ್ದೆ ಮಾಡಲು ಇಷ್ಟ ಇರುವ ಮಂದಿಗೆ 1 ಲಕ್ಷ ರೂ. ನೀಡುವುದಾಗಿ ತಿಳಿಸಿತ್ತು. ಈ ಸಂಬಂಧ ಅರ್ಜಿ ಆಹ್ವಾನಿಸಿತ್ತು. ಒಟ್ಟು 1.7 ಲಕ್ಷ ಮಂದಿ ನಿದ್ದೆ ಮಾಡಲು ಅರ್ಜಿ ಸಲ್ಲಿಸಿದ್ದು, ಈ ಪೈಕಿ ಅಂತಿಮವಾಗಿ ಮೊದಲ ಬ್ಯಾಚಿಗೆ 23 ಮಂದಿಯನ್ನು ಆಯ್ಕೆ ಮಾಡಲಾಗಿದೆ.
Advertisement
Advertisement
ಈ ಪೈಕಿ ಭಾರತದ 8 ನಗರಗಳಿಂದ 19 ಮಂದಿ, ಅಮೆರಿಕ ಮತ್ತು ಸ್ಲೋವಾಕಿಯಾದಿಂದ ಇಬ್ಬರು ಆಯ್ಕೆ ಆಗಿದ್ದಾರೆ. ಅಂತಿಮ ಪಟ್ಟಿಯಲ್ಲಿ ಬೆಂಗಳೂರಿನ 7 ಮಂದಿ ಆಯ್ಕೆ ಆಗಿರುವುದು ವಿಶೇಷ. 100 ದಿನಗಳ ಕಾಲ ಈ ವ್ಯಕ್ತಿಗಳು ಪ್ರತಿ ರಾತ್ರಿ 9 ಗಂಟೆಗಳ ಕಾಲ ನಿರಂತರ 100 ದಿನ ನಿದ್ದೆ ಮಾಡಿದರೆ ಕಂಪನಿ 1 ಲಕ್ಷ ರೂ. ನೀಡಲಿದೆ.
Advertisement
ಜಾಹೀರಾತು ನೀಡುವಾಗ ಕಂಪನಿ ನಿದ್ದೆ ಮಾಡುವವರು ಪೈಜಾಮಾ ಹಾಕಿಕೊಂಡೆ ಮಲಗಬೇಕು ಎಂದು ಷರತ್ತು ವಿಧಿಸಿತ್ತು.
Advertisement
ಜೀವನದಲ್ಲಿ ನಿದ್ದೆಯನ್ನು ಆದ್ಯತೆಯನ್ನಾಗಿ ಮಾಡಲು ಯಾವುದೇ ಹಂತಕ್ಕೆ ಹೋಗುವ ಅಭ್ಯರ್ಥಿಗಾಗಿ ನಾವು ಹುಡುಕುತ್ತಿದ್ದೇವೆ. ಮನುಷ್ಯನ ಮಲಗುವ ಹವ್ಯಾಸ ಹಾಗೂ ಅದರಿಂದ ಅವರ ಆರೋಗ್ಯದ ಮೇಲೆ ಆಗುವ ಪರಿಣಾಮಗಳನ್ನು ಅಧ್ಯಯನ ಮಾಡುವುದು ನಮ್ಮ ಕಂಪನಿಯ ಉದ್ದೇಶ ಎಂದು ವೇಕ್‍ಫಿಟ್ ಕಂಪನಿಯ ನಿರ್ದೇಶಕ ಹಾಗೂ ಸಹ-ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಅಂದು ತಿಳಿಸಿದ್ದರು.
ಕಂಪನಿ ಇಂಟರ್ನಿಗಳು ಮಲಗುವ ಮಾದರಿಗಳನ್ನು ಗಮನಿಸುತ್ತದೆ. ಅಲ್ಲದೆ ಕೌನ್ಸಿಲಿಂಗ್ ಸೆಷನ್ಸ್ ಹಾಗೂ ಸ್ಲೀಪ್ ಟ್ರ್ಯಾಕರ್ಸ್‍ಗಳನ್ನು ನೋಡಲಾಗುತ್ತದೆ. ಇದರಿಂದ ಅಭ್ಯರ್ಥಿಗಳು ತಮ್ಮ ಹಾಸಿಗೆಗಳನ್ನು ಬಳಸುವ ಮೊದಲು ಹಾಗೂ ನಂತರ ಅವರು ನಿದ್ರೆಯ ಅನುಭವಗಳನ್ನು ತಿಳಿಯಲು ಇದು ಕಂಪನಿಗೆ ಸಹಾಯ ಮಾಡುತ್ತದೆ. ಕೆಲಸದ ಜೀವನ ಹಾಗೂ ವೈಯಕ್ತಿಕ ಜೀವನವನ್ನು ಬ್ಯಾಲೆನ್ಸ್ ಮಾಡಲು ಈ ರೀತಿಯ ಪ್ರಯೋಗ ಮಾಡಲಾಗಿದೆ ಎಂದು ಅವರು ವಿವರಿಸಿದ್ದರು.