ಬೆಂಗಳೂರು: ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಅಂಬುಲೆನ್ಸ್ ಮಾದರಿಯ 100 ಕೃಷಿ ಸಂಜೀವಿನಿ ವಾಹನಗಳು ಮಾರ್ಚ್ ಅಂತ್ಯಕ್ಕೆ ಲೋಕಾರ್ಪಣೆಗೊಳ್ಳಲಿವೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 330ರ ಅಡಿ ಜೆಡಿಎಸ್ ಸದಸ್ಯ ಗೋವಿಂದ್ ರಾಜು ಪ್ರಸ್ತಾಪ ಮಾಡಿದ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಬಿ.ಸಿ ಪಾಟೀಲ್, ಮಾರ್ಚ್ ಅಂತ್ಯಕ್ಕೆ 100 ಕೃಷಿ ಸಂಜೀವಿನಿ ವಾಹನಗಳನ್ನು ಲೋಕಾರ್ಪಣೆ ಮಾಡುವ ಬಗ್ಗೆ ತಿಳಿಸಿದರು.
Advertisement
ಮಣ್ಣಿನ ಗುಣಮಟ್ಟ, ಕೀಟ ನಾಶಕಗಳಿಂದಾಗುವ ಸಮಸ್ಯೆ ಸೇರಿದಂತೆ ಅನೇಕ ಇತರ ಸಮಸ್ಯೆಗಳನ್ನು ರೈತ ಎದುರಿಸುತ್ತಿದ್ದಾನೆ. ಕೃಷಿ ಸಂಜೀವಿನಿ ಸಕಾಲದಲ್ಲಿ ಬೆಳೆಯ ಎಲ್ಲಾ ಹಂತಗಳಲ್ಲಿ ಸರ್ವೇಕ್ಷಣೆಯನ್ನು ಕೈಗೊಂಡು ಕಂಡುಬಂದಿರುವ ಕೀಟ, ರೋಗ, ಕಳೆಗಳ ನಿರ್ವಹಣಾ ಮಾರ್ಗೋಪಾಯಗಳನ್ನು ಆತನ ಜಮೀನಿಗೆ ಹೋಗಿ ಮಣ್ಣಿನ ಪರೀಕ್ಷೆ ನಡೆಸಿ ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರ ನೀಡುವ ಯೋಜನೆ ಇದಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಬಿಜೆಪಿಯದ್ದು ಸಬ್ ಕಾ ವಿಕಾಸ್ ನಹೀ ಹೇ, ಸಬ್ ಕಾ ಸರ್ವ ನಾಶ್ ಹೇ: ಸಿದ್ದರಾಮಯ್ಯ
Advertisement
Advertisement
ಅಂಬುಲೆನ್ಸ್ ಮಾದರಿ ವಾಹನ ಇದಾಗಿದ್ದು, ಒಬ್ಬ ಕೃಷಿ ಡಿಪ್ಲೋಮಾ ಪದವೀಧರ ಇದರಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಸ್ಥಳದಲ್ಲಿ ರೈತರ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟ ರೈತರ ಸಾಲಮನ್ನಾ ಅಸಾಧ್ಯ: ಎಸ್.ಟಿ. ಸೋಮಶೇಖರ್
Advertisement
ಈಗಾಗಲೇ ಕೊಪ್ಪಳದಲ್ಲಿ ನಾನು ಉಸ್ತುವಾರಿ ಸಚಿವನಾಗಿದ್ದಾಗ 24 ಕೃಷಿ ಸಂಜೀವಿನಿ ವಾಹನಗಳನ್ನು ಪೈಲಟ್ ಪ್ರಾಜೆಕ್ಟ್ ರೂಪದಲ್ಲಿ ಜಾರಿ ಮಾಡಿದ್ದೆ. ಇದನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಾಗಿತ್ತು. ಹೀಗಾಗಿ ಇದನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲು ತೀರ್ಮಾನ ಮಾಡಲಾಗಿದೆ. 164 ವಾಹನಗಳಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ಮಾರ್ಚ್ ಅಂತ್ಯಕ್ಕೆ 100 ವಾಹನ ಲೋಕಾರ್ಪಣೆಗೊಳ್ಳಲಿದೆ. ಉಳಿದ ವಾಹನ ಏಪ್ರಿಲ್‌ನಲ್ಲಿ ಸಿದ್ಧವಾಗಲಿವೆ ಎಂದು ಮಾಹಿತಿ ನೀಡಿದರು.