ಪರಭಾಷೆಯಲ್ಲೂ 100 ಕೋಟಿ ಬಾಚಿದ ‘ಕಾಂತಾರ’: ನಿದ್ದೆಗೆಟ್ಟ ಬಾಲಿವುಡ್

Public TV
2 Min Read
KANTARA FILM

ರಿಷಬ್ ಶೆಟ್ಟಿ (Rishabh Shetty) ಅವರ ಕಾಂತಾರ ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಪರಭಾಷೆ ಸಿನಿಮಾ ರಂಗದಲ್ಲೂ ನೂರು ಕೋಟಿ ಕ್ಲಬ್ ಸೇರಿದೆ. ಈ ಮೂಲಕ ಪರಭಾಷೆಯಲ್ಲಿ ನೂರು ಕೋಟಿ ಕ್ಲಬ್ ಸೇರಿದ 2ನೇ ಸಿನಿಮಾ ಇದಾಗಿದೆ. ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಮಾತ್ರವಲ್ಲ, ಬಾಲಿವುಡ್ ನಲ್ಲೂ ದಾಖಲೆ ರೀತಿಯಲ್ಲಿ ಹಣ ಹರಿದು ಬರುತ್ತಿದೆ. ಹಾಗಾಗಿ ಸಹಜವಾಗಿಯೇ ಬಾಲಿವುಡ್ ಸಿನಿಮಾ ರಂಗವನ್ನು ನಿದ್ದೆಗೆಡಿಸಿದೆ.

KANTARA

ಈ ಹಿಂದೆ ಇದೇ ಹೊಂಬಾಳೆ ಬ್ಯಾನರ್ (Hombale Films) ನಲ್ಲಿ ನಿರ್ಮಾಣವಾದ ಕೆಜಿಎಫ್ 2 ಸಿನಿಮಾ ಬಾಕ್ಸ್ ಆಫೀಸಿನಲ್ಲಿ (Box Office) ಧೂಳ್ ಎಬ್ಬಿಸಿತ್ತು. ಐನೂರು ಕೋಟಿಗೂ ಅಧಿಕ ಹಣವನ್ನು ಗಳಿಕೆ ಮಾಡಿತ್ತು. ಇದೀಗ ಅದೇ ಬ್ಯಾನರ್ ನಲ್ಲಿ ತಯಾರಾದ ಕಾಂತಾರ (Kantara) ಚಿತ್ರ ಕೂಡ ಮಗದೊಂದು ದಾಖಲೆ ಬರೆಯಲು ಸಜ್ಜಾಗಿದೆ. ಬಾಲಿವುಡ್ ನಲ್ಲೂ ಸಿನಿಮಾ ಸಖತ್ ಆಗಿ ಪ್ರದರ್ಶನ ಕಾಣುತ್ತಿದೆ. ವೀಕೆಂಡ್‌ನಲ್ಲಂತೂ ಹಣದ ಹೊಳೆಯೇ ಹರಿಯುತ್ತಿದೆ. ಇದನ್ನೂ ಓದಿ:ಪುನೀತ್ ಪ್ರಥಮ ಪುಣ್ಯಸ್ಮರಣೆ: ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾವುಕ ಪತ್ರ

kantara 2

ಒಂದು ಕಡೆ ಗಳಿಕೆಯಲ್ಲಿ ಸಿನಿಮಾ ದಾಖಲೆ (Record) ಬರೆದಿದ್ದರೆ, ಮತ್ತೊಂದು ಕಡೆ ರಿಷಬ್ ಶೆಟ್ಟಿ ಅವರಿಗೆ ಅಪರೂಪದ ಗಳಿಕೆಯೊಂದು ಕೂಡಿ ಬಂದಿದೆ.  ಕಾಂತಾರ ಸಿನಿಮಾ ನೋಡಿ ಅಚ್ಚರಿ ಎನ್ನುವಂತೆ ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರಿಗೆ ಕರೆ ಮಾಡಿದ್ದರು ಸೂಪರ್ ಸ್ಟಾರ್ ರಜನಿಕಾಂತ್. ಅದೊಂದು ಅನಿರೀಕ್ಷಿತ ಕರೆ ಆಗಿದ್ದರಿಂದ ರಿಷಬ್ ಕೂಡ ಅಚ್ಚರಿ ಪಟ್ಟಿದ್ದರು. ಸೂಪರ್ ಸ್ಟಾರ್ ಒಬ್ಬರು ಸಿನಿಮಾ ನೋಡಿ, ಕರೆ ಮಾಡಿದ್ದರಿಂದ ಅವರಿಗೆ ಕೃತಜ್ಞತೆ ಹೇಳುವುದಕ್ಕಾಗಿ ರಿಷಬ್ ರೆಡಿಯಾಗಿದ್ದರು. ಅಷ್ಟರಲ್ಲೇ ಮತ್ತೊಂದು ಸರ್ ಪ್ರೈಸ್ ನೀಡಿದ್ದಾರೆ ರಜನಿ. ಸ್ವತಃ ರಿಷಬ್ ಅವರನ್ನು ತಮ್ಮ ಮನೆಗೆ ಕರೆದು ಸನ್ಮಾನ ಮಾಡಿದ್ದಾರೆ.

kantara 3 1

ಕಾಂತಾರ ಮೂಲಕ ನ್ಯಾಷಿನಲ್ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ, ಕೆಲ ಹೊತ್ತು ರಜನಿಕಾಂತ್ ಅವರ ಜೊತೆ ಮಾತನಾಡಿ ತಮ್ಮ ಕನಸುಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಕೃತಜ್ಞತೆಯನ್ನೂ ಹೇಳಿದ್ದಾರೆ. ಕಾಂತಾರ ಮೇಕಿಂಗ್, ಅದನ್ನು ಹೇಳಿದ ರೀತಿ, ತೋರಿಸಿದ ಕ್ರಮದ ಬಗ್ಗೆ ರಜನಿಕಾಂತ್ ಮೆಚ್ಚುಗೆಯನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ. ರಜನಿ ಮಾತು ಕೇಳಿ ರಿಷಬ್ ಕೂಡ ಖುಷ್ ಆಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article